ರೈಲು ಹತ್ತಲು ಪರದಾಡುತ್ತಿದ್ದ ವಿಶೇಷಚೇತನ ವ್ಯಕ್ತಿಗೆ ಸಹಾಯ ಮಾಡಿದ ಪೊಲೀಸ್‌ ಅಧಿಕಾರಿ!

ರೈಲು ಹತ್ತಲು ಪರದಾಡುತ್ತಿದ್ದ ವಿಶೇಷಚೇತನ ವ್ಯಕ್ತಿಗೆ ಸಹಾಯ ಮಾಡಿದ ಪೊಲೀಸ್‌ ಅಧಿಕಾರಿ!

ಈಗಿನ ಕಾಲದಲ್ಲಿ ಮಾನವೀಯತೆ ಮರೆಯಾಗಿದೆ. ಯಾರಾದ್ರೂ ಕಷ್ಟದಲ್ಲಿದ್ರೆ ನೋಡಿ ಸಹಾಯ ಮಾಡೋದು ಬಿಟ್ಟು ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹಾಕುವವರೇ ಹೆಚ್ಚು. ಇದೀಗ ಇಲ್ಲೊಂದು ಘಟನೆ ವಿಶೇಷ ಚೇತನ ವ್ಯಕ್ತಿಗೆ ಪೊಲೀಸ್‌ ಅಧಿಕಾರಿಯೊಬ್ಬರು ಸಹಾಯ ಮಾಡಿದ್ದು, ಇದ್ರ ಫೋಟೋ, ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗ್ತಿದೆ.

ಇದನ್ನೂ ಓದಿ: ರಾಶಿಕಾ, ಅಶ್ವಿನಿ ಪ್ಲ್ಯಾನ್‌ ಠುಸ್!‌ – ಈ ವಾರದ ಕಳಪೆ ಧ್ರುವಂತ್!

ಕರ್ತವ್ಯದ ವೇಳೆ ಆಗಾಗ ಪೊಲೀಸರು ಮಾನವೀಯತೆ ಮೆರೆಯುತ್ತಾರೆ. ಇಂತಹ ವಿಡಿಯೋಗಳು ಆಗಾಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಲೇ ಇರುತ್ತದೆ. ಇದೀಗ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗ್ತಿದೆ. ಉತ್ತರಪ್ರದೇಶದಲ್ಲಿ ಮನುಷ್ಯತ್ವದ ಮೇಲೆ ಬೆಳಕು ಚೆಲ್ಲುವ ಘಟನೆಯೊಂದು ನಡೆದಿದೆ. ಯುಪಿಯ ಪೊಲೀಸ್ ಅಧಿಕಾರಿಯೊಬ್ಬರು ಜನ ದಟ್ಟಣೆ ಇದ್ದ ರೈಲು ಹತ್ತಲು ಪರದಾಡುತ್ತಿದ್ದ ವಿಶೇಷ ಚೇತನ ವ್ಯಕ್ತಿಗೆ ಸಹಾಯ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪೊಲೀಸ್​​ ಅಧಿಕಾರಿಯ ಈ ಕೆಲಸಕ್ಕೆ ಎಲ್ಲ ಕಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

ವೈರಲ್‌ ಆದ ವೀಡಿಯೊದಲ್ಲಿ ಹೇಳಿರುವ ಪ್ರಕಾರ, ಪೊಲೀಸ್ ಅಧಿಕಾರಿ ಅಶ್ವನಿ ಕುಮಾರ್ ರೈಲ್ವೆ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದಾಗ, ವಿಶೇಷ ಚೇತನ ವ್ಯಕ್ತಿಯೊಬ್ಬರು ರೈಲ್ವೆ ನಿಲ್ದಾಣದ ಮೆಟ್ಟಿಲು ಇಳಿಯಲು ಕಷ್ಟ ಪಡುತ್ತಿದ್ದ ವೇಳೆ, ಪೊಲೀಸ್​​ ಅಧಿಕಾರಿಯೊಬ್ಬರು ವಿಶೇಷ ಚೇತನ ವ್ಯಕ್ತಿಯನ್ನು ವಿಚಾರಿಸಿ, ಹೆಗಲ ಮೇಲೆ ಹಾಕಿಕೊಂಡು ಅವರನ್ನು ರೈಲಿನ ಬಳಿ ಬಿಟ್ಟು ಬಂದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆಗೆ ಕಾರಣವಾಗಿದೆ. ಈ ವಿಡಿಯೋವನ್ನು ಅವರು ತಮ್ಮ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ಹಣದಿಂದ ಮಾತ್ರವಲ್ಲ ಸಹಾಯ ಮಾಡುವುದು, ಕಾಳಜಿ ವಹಿಸುವ ಹೃದಯ ಬೇಕು, ಅದು ನಿಮ್ಮಲ್ಲಿ ಇದೆ. ಮಾನವೀಯತೆಗಿಂತ ದೊಡ್ಡದಲ್ಲ” ಎಂದು ಬರೆದುಕೊಂಡಿದ್ದಾರೆ. ಬಳಕೆದಾರರು ಪೊಲೀಸರ ನಮ್ರತೆ ಮತ್ತು ಮಾನವೀಯತೆಯನ್ನು ಶ್ಲಾಘಿಸಿದ್ದು, ಇಂದಿನ ವೇಗದ ಜಗತ್ತಿನಲ್ಲಿ ಇಂಥಹ ದೃಶ್ಯಗಳು ಕಂಡು ಬರುವುದು ಅಪರೂಪ ಎಂದು ಹೇಳಿದ್ದಾರೆ.

Shwetha M