ಎಮ್ಮೆ ಮೇಲೆ ಬಂದ ಶ್ವಾನ ಮಹಾರಾಜರಿಗೆ ದಾರಿ ಬಿಡಿ..! – ಎಮ್ಮೆಗೊಂದು ಕಾಲ.. ನಾಯಿಗೊಂದು ಕಾಲ ಬಂದೇ ಬಿಡ್ತು..!

ಎಮ್ಮೆ ಮೇಲೆ ಬಂದ ಶ್ವಾನ ಮಹಾರಾಜರಿಗೆ ದಾರಿ ಬಿಡಿ..! – ಎಮ್ಮೆಗೊಂದು ಕಾಲ.. ನಾಯಿಗೊಂದು ಕಾಲ ಬಂದೇ ಬಿಡ್ತು..!

ಎಮ್ಮೆಗೊಂದು ಕಾಲ, ನಾಯಿಗೊಂದು ಕಾಲ. ಎಮ್ಮೆ ಮೇಲೆ ಶ್ವಾನ ಮಹರಾಜರು ಬರುವುದನ್ನು ನೋಡುವುದೇ ಎಷ್ಟು ಚೆಂದ ಗೊತ್ತಾ.. ಇಲ್ಲಿ ನಾಯಿ ಎಮ್ಮೆ ಮೇಲೇರಿ ನಿಂತಿದೆ. ಒಂದು ಚೂರು ಅಲುಗಾಡುತ್ತಿಲ್ಲ. ಎಮ್ಮೆ ಕೂಡಾ ನಾಯಿಯನ್ನು ಅಷ್ಟೇ ಬ್ಯಾಲೆನ್ಸ್ ಮಾಡುತ್ತಾ ಕರೆದುಕೊಂಡು ಹೋಗಿದೆ.

ಇದನ್ನೂ ಓದಿ: ಅಪಘಾತಕ್ಕೀಡಾದವರ ಸಹಾಯಕ್ಕೆ ಬಂದ ಆಟೋ ಚಾಲಕ – ಸಹಾಯ ಮಾಡಿದವನು ಸೇರಿದ್ದು ಸಾವಿನ ಮನೆಗೆ..!

ಎಮ್ಮೆ ಮೇಲೇರಿ ಶ್ವಾನ ಹೊರಟಿರುವ ರೀತಿಯಂತೂ ನೋಡಲು ಮಜಾ ಇದೆ. ಏನು ಶ್ವಾನ ಮಹಾರಾಜರೇ, ಎತ್ತ ಹೊರಟಿದ್ದೀರಿ, ನಿಮ್ಮ ನಾಡಿನ ಪ್ರಜೆಗಳೆಲ್ಲಾ ಸೌಖ್ಯವೇ ಎಂಬಂತೆ ನಾಯಿಯ ಖದರ್ ಕಾಣುತ್ತಿದೆ. ಈ ವಿಡಿಯೋ ನೋಡಿ ನೆಟ್ಟಿಗರಂತೂ ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅದರಲ್ಲೂ ಎಮ್ಮೆ ಬೆನ್ನ ಮೇಲೆ ಘನಗಾಂಭೀರ್ಯವಾಗಿ ಹೊರಟ ನಾಯಿಯ ಮೇಲೆಯೇ ಎಲ್ಲರ ಕಣ್ಣಿದೆ.

ಇವರಿಗೆ ಜಯವಾಗಲಿ, ಈ ಅಪರೂಪದ ಸಂಚಾರಕ್ಕೆ ನೀವೂ ಸಾಕ್ಷಿಯಾಗಿ ಪುನೀತರಾಗಿ. ಪ್ರತೀ ನಾಯಿಗೂ ಅದರದೇ ಆದ ದಿನವೊಂದು ಬಂದೇ ಬರುತ್ತದೆ ಎಂದು ಕೇಳಿದ್ದೆ, ಆದರೆ ಅದನ್ನು ಇಂದು ನೋಡಿಯೇ ಬಿಟ್ಟೆ’ ಎಂದಿದ್ದಾರೆ ಈ ವಿಡಿಯೋ ಟ್ವೀಟ್ ಮಾಡಿದ ಶಾಝಿಯಾ ಚೌಧರಿ. ಈ ವಿಡಿಯೋ ಅನ್ನು ಈತನಕ 9 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. 8,000ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. 1,600 ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ಇನ್ನು ಇನ್ಸ್ಟಾಗ್ರಾನಲ್ಲಿಯೂ ಈ ವಿಡಿಯೋ ಇದ್ದು ಈತನಕ 16 ಮಿಲಿಯನ್ ಜನರು ಇದನ್ನು ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಇನ್ನು ಮುಂದೆ ರಾಷ್ಟ್ರೀಯ ಪ್ರಾಣಿ ನಾಯಿಯಾಗಲಿ ಎಂದಿದ್ದಾರೆ ಮತ್ತೊಬ್ಬರು. ನಮ್ಮ ಬಾಹುಬಲಿ ಬಂದಾ ಎಂದಿದ್ದಾರೆ ಇನ್ನೂ ಒಬ್ಬರು.

suddiyaana