ಕಾರುಗಳ ಲೈಟ್ಸ್ ನಲ್ಲೇ ನಾಟು ನಾಟು ಡ್ಯಾನ್ಸ್! ಕತ್ತಲು ಬೆಳಕಿನ ಚಿತ್ತಾರ ಸೂಪರ್..

ಕಾರುಗಳ ಲೈಟ್ಸ್ ನಲ್ಲೇ ನಾಟು ನಾಟು ಡ್ಯಾನ್ಸ್! ಕತ್ತಲು ಬೆಳಕಿನ ಚಿತ್ತಾರ ಸೂಪರ್..

ರಾಜಮೌಳಿ ನಿರ್ದೇಶನದ ಸಿನಿಮಾದ ‘ನಾಟು ನಾಟು’ಹಾಡು ಆಸ್ಕರ್ ಪ್ರಶಸ್ತಿ ಗೆದ್ದಿದೆ. ಇಡೀ ದೇಶವೇ ಇದನ್ನ ಸಂಭ್ರಮಿಸುತ್ತಿದೆ. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಈ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ಇದೀಗ ವಿಶ್ವದ ಪ್ರತಿಷ್ಠಿತ ಕಾರು ಕಂಪೆನಿ ಟೆಸ್ಲಾ ‘ನಾಟು ನಾಟು’ ಹಾಡಿಗೆ ವಿಶೇಷ ಗೌರವ ಸೂಚಿಸುವುದಕ್ಕಾಗಿ ತನ್ನ ಕಾರುಗಳನ್ನು ಬಳಸಿಕೊಂಡು ಲೈಟ್ ಮೂಲಕ ಡಾನ್ಸ್ ಮಾಡಿಸಿದೆ. ನಾಟು ನಾಟು ಹಾಡಿಗೆ ಕಾರುಗಳ ಲೈಟ್‍ ಗಳು ಡಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಇದು ಜಗತ್ತಿನಲ್ಲೇ ಅತ್ಯಂತ ಸಂತೋಷಭರಿತ ದೇಶ!

ವೈರಲ್ ಆದ ವಿಡಿಯೋದಲ್ಲಿ ಸಾವಿರಾರು ಕಾರುಗಳನ್ನು ಸಾಲು ಸಾಲಾಗಿ ನಿಲ್ಲಿಸಲಾಗಿದೆ. ಬಳಿಕ ನಾಟು ನಾಟು ಹಾಡನ್ನು ಪ್ಲೇ ಮಾಡಲಾಗುತ್ತದೆ. ಹಾಡು ಆರಂಭಗೊಳ್ಳುತ್ತಿದ್ದಂತೆ ಕಾರಿನ ವಿಶೇಷ ಲೈಟ್‍ ಗಳು ಮ್ಯೂಸಿಕ್ ಗೆ ತಕ್ಕಂತೆ ಆಫ್ ಮತ್ತು ಆನ್ ಆಗಲು ಪ್ರಾರಂಭವಾಗುತ್ತದೆ. ಕಾರುಗಳು ಕೂಡ ಮ್ಯೂಸಿಕ್  ತಾಳಕ್ಕೆ ಸರಿಯಾಗಿಯೇ ಡಾನ್ಸ್ ಮಾಡುತ್ತವೆ.

ವೈರಲ್ ಆದ ವಿಡಿಯೋವನ್ನು RRR ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು ಟೆಸ್ಲಾ ಕಂಪೆನಿಯ ಒಡೆಯ ಎಲಾನ್ ಮಸ್ಕ್ ನೋಡಿ ಮೆಚ್ಚಿದ್ದಾರೆ. ಅಲ್ಲದೇ ‘ಇದು ಆಸ್ಕರ್ ಪ್ರಶಸ್ತಿಗಾಗಿ ನೀಡಿದ ಗೌರವ’ ಎಂದು ಹೇಳಿಕೊಂಡಿದ್ದಾರೆ.

suddiyaana