ಇದು ತಿನ್ನುವ ಬಾಳೆ ಹಣ್ಣಲ್ಲ – ಕಣ್ಣಾರೆ ಕಂಡರೂ ಒಮ್ಮೆ ಮುಟ್ಟಿ ನೋಡಿ…
ಪ್ರಕೃತಿಯಲ್ಲಿ ಬೆರಗುಗೊಳಿಸುವಂತಹ ಅನೇಕ ಸಂಗತಿಗಳಿವೆ. ಇವುಗಳನ್ನು ಗಮನಿಸಿದಾಗ, ಹೀಗೂ ಇದ್ಯಾ ಅಂತ ತಲೆಕೆಡಿಸಿಕೊಳ್ಳುತ್ತೇವೆ. ನಮ್ಮನ್ನು ಬೆರಗುಗೊಳಿಸುವ ಅನೇಕ ಸಂಗತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ವೈರಲ್ ಆದ ವಿಡಿಯೋವನ್ನು ನೋಡಿದ ಜನ ಅರೆಕ್ಷಣ ದಂಗಾಗಿ ಹೋಗಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ ಬಾಕ್ಸ್ ನಲ್ಲಿ ಎರಡು ಬಾಳೆಹಣ್ಣನ್ನು ಇರಿಸಲಾಗಿತ್ತು. ಹಳದಿ ಮೈಬಣ್ಣದ ಮೇಲೆ ಕಂದುಬಣ್ಣದ ಚುಕ್ಕೆಗಳನ್ನು ನೋಡುತ್ತಿದ್ದರೆ ಇದು ಮಾಗಿದ ಬಾಳೆ ಎಂದು ಭಾಸವಾಗುತ್ತದೆ. ವ್ಯಕ್ತಿಯೊಬ್ಬ ಬಂದು ಅದನ್ನು ಹಿಡಿದಾಗ ಅಸಲಿಯತ್ತು ಬಯಲಾಗಿದೆ.
ಇದನ್ನೂ ಓದಿ: ಕದಿಯಲು ಬಂದು ಟಪಾಂಗುಚ್ಚಿ ಸ್ಟೆಪ್ – ಕಿಲಾಡಿ ಕಳ್ಳನಿಗೆ ಪೊಲೀಸರಿಂದ ಶೋಧ
ನೋಡಲು ಪಚ್ಚೆಬಾಳೆಹಣ್ಣಿನಂತೆ ಕಂಡರೂ ಹತ್ತಿರ ಹೋಗಿ ನೋಡಿದಾಗ ಇದು ಬಾಳೆಹಣ್ಣಲ್ಲ, ಹಾವು ಎಂದು ಗೊತ್ತಾಗುತ್ತದೆ. ಈ ಹಾವನ್ನು ಬಾಲ್ ಪೈಥಾನ್ ಎನ್ನಲಾಗುತ್ತದೆ. ಹಳದಿ ಮೈಬಣ್ಣದ ಮೇಲೆ ಕಂದುಬಣ್ಣದ ಚುಕ್ಕೆಗಳು ಕಾಣಿಸುತ್ತದೆ. ಆದರೆ ಇದು ಅಪಾಯಕಾರಿ ಹಾವು. ಆಹಾರವನ್ನು ಬೇಟೆಯಾಡಲು ಮತ್ತು ತನ್ನನ್ನು ತಾನು ರಕ್ಷಿಸಿಕೊಳ್ಳಲು ಮಾರುವೇಷದಲ್ಲಿ ಸುಳಿದಾಡುತ್ತದೆ.
ಸೈನ್ಸ್ ಗರ್ಲ್ ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಅನ್ನು 9 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. 2,000ಕ್ಕಿಂತಲೂ ಹೆಚ್ಚು ಜನರು ರೀ ಟ್ವೀಟ್ ಮಾಡಿದ್ದಾರೆ. 15,000 ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ‘ನಿಜವಾದ ಪಚ್ಚಬಾಳೆ ನೋಡಿದಾಗಲೂ ನನಗೀಗ ಇದು ಇದೇ ಹಾವೇ? ಎಂದು ಅನುಮಾನಿಸುವಷ್ಟು ಮನಸಲ್ಲಿ ಅಚ್ಚೊತ್ತಿದೆ ಎಂದಿದ್ದಾರೆ ಒಬ್ಬರು. ಇನ್ನು ಯಾವತ್ತೂ ನಾನು ಪಚ್ಚಬಾಳೆಹಣ್ಣನ್ನು ತಿನ್ನುವುದೇ ಇಲ್ಲ. ತಿನ್ನಲು ಹೋದರೆ ಹಾವೇ ಬಾಯಿಗೆ ಬಂದಹಾಗಾಗುತ್ತದೆ ಎಂದಿದ್ದಾರೆ ಮಗದೊಬ್ಬರು. ಇದು ವೇಷ ಬದಲಿಸುವ ಹಾವು ಹುಷಾರು! ಎಂದು ನೆಟ್ಟಿರು ಪ್ರತಿಕ್ರಿಯಿಸಿದ್ದಾರೆ’.
The way this ball python looks like a banana 🍌
pic.twitter.com/xdUt6K2a2R— Science girl (@gunsnrosesgirl3) January 8, 2023