ಸೀರೆಯುಟ್ಟು ಮದುವೆಯಲ್ಲಿ ಸೊಂಟ ಬಳುಕಿಸಿದ ಯುವಕರು – ವೈರಲ್ ಆಯ್ತು ವಿಡಿಯೋ

ಸೀರೆಯುಟ್ಟು ಮದುವೆಯಲ್ಲಿ ಸೊಂಟ ಬಳುಕಿಸಿದ ಯುವಕರು – ವೈರಲ್ ಆಯ್ತು ವಿಡಿಯೋ

ಮದುವೆ ಅಂದಾಗ ಅಲ್ಲಿ ಹಾಡು, ಕುಣಿತ, ಗುಂಡು – ತುಂಡು ಇದ್ದೇ ಇರುತ್ತದೆ. ಮದುವೆಗೆ ಬಂದ ಸಂಬಂಧಿಕರು, ಸ್ನೇಹಿತರು ಕೂಡ ಹುಚ್ಚೆದ್ದು ಕುಣಿದು ಸಂಭ್ರಮಿಸುತ್ತಾರೆ. ಇತ್ತೀಚಿನ ದಿನಗಳಲ್ಲಂತೂ ಮದುವೆಯಲ್ಲಿ ಯುವಕರು ವಿಧ ವಿಧವಾಗಿ ಡ್ರೆಸ್ ಧರಿಸಿ ಡ್ಯಾನ್ಸ್ ಮಾಡುವುದನ್ನು ನೋಡಿರುತ್ತೇವೆ. ಕೆಲ ತಿಂಗಳುಗಳ ಹಿಂದೆ ಚಿಕಾಗೋದಲ್ಲಿ ಮದುಮಗನ ಇಬ್ಬರು ಗೆಳೆಯರು ಸೀರೆ ಉಟ್ಟು ವಿವಾಹಕ್ಕೆ ಬಂದಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಇದೀಗ ಇಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ವಿವಾಹಿತನ ಜೊತೆ ಪತ್ನಿ ಪರಾರಿ – ಆತನ ಹೆಂಡ್ತಿಯನ್ನೇ ಮದುವೆಯಾದ ಭೂಪ..!

ಇತ್ತೀಚಿನ ದಿನಗಳಲ್ಲಿ ಮದುವೆಯಲ್ಲಿ ಮಹಿಳೆಯರು ಸೀರೆಯನ್ನು ಸಂಬಾಳಿಸೋದು ಕಷ್ಟ ಅಂತಾ ಗೌನ್, ಲೆಹೆಂಗಾ, ಹಾಫ್ ಸ್ಯಾರಿಯತ್ತ ಜಾಸ್ತಿ ಒಲವು ತೋರಿಸ್ತಿದ್ದಾರೆ. ಆದರೆ ಇಲ್ಲೊಂದು ಮದುವೆಯಲ್ಲಿ ಯುವಕರು ಯುವತಿಯರೇ ನಾಚುವಂತೆ ಸೀರೆ ಉಟ್ಟು ಜಬರ್ ದಸ್ತ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು ಕೊರಿಯೋಗ್ರಾಫರ್ ರೇವತಿ ಎಂಬುವವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸುಮಾರು 11  ಯುವಕರು ತಮ್ಮ ಉಡುಪಿನ ಮೇಲೆಯೇ ಸೀರೆಯನ್ನು ಧರಿಸಿದ್ದಾರೆ. ಬಳಿಕ ವೇದಿಕೆ ಮೇಲೆ ಆಗಮಿಸಿ ಪ್ರಿಯಾಂಕಾ ಚೋಪ್ರಾ ಅವರ ದೇಸಿ ಗರ್ಲ್​ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇವರ ಡ್ಯಾನ್ಸ್ ಗೆ  ಇಬ್ಬರು ಹೆಣ್ಣುಮಕ್ಕಳು ಕೂಡ ಸಾಥ್ ನೀಡಿದ್ದಾರೆ. ಹೆಣ್ಣುಮಕ್ಕಳಿಗಿಂತ ನಾವೇನು ಕಡಿಮೆ ಅಂತಾ ಯುವಕರು ಸೊಂಟ ಬಳುಕಿಸುವ ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

suddiyaana