ಉಲ್ಟಾ ನಿಂತು ಕಾಲ್ಬೆರಳಿನಲ್ಲಿ ಬಿಲ್ಲು ಗುರಿಯಿಟ್ಟ ತರುಣಿ –  ಎಂಥಾ ಗುರಿ…

ಉಲ್ಟಾ ನಿಂತು ಕಾಲ್ಬೆರಳಿನಲ್ಲಿ ಬಿಲ್ಲು ಗುರಿಯಿಟ್ಟ ತರುಣಿ –  ಎಂಥಾ ಗುರಿ…

ಚಳಿಗಾಲ ಆರಂಭವಾಗುತ್ತಿದ್ದಂತೆ ಜಗತ್ತಿನ ಹಲವೆಡೆ ಹಿಮ ಸುರಿಯುತ್ತದೆ. ಈ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಲೆಂದು ಅನೇಕರು ಹಿಮ ಪ್ರದೇಶಗಳಿಗೆ ತೆರಳುತ್ತಾರೆ. ಅಲ್ಲದೇ ಈ ದಟ್ಟ ಹಿಮದ ರಾಶಿಯಲ್ಲಿ ಹಲವರು ಏನೇನೋ ಸಾಹಸಗಳನ್ನು ಮಾಡುತ್ತಿರುತ್ತಾರೆ. ಈ ದೃಶ್ಯಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ತರುಣಿಯೊಬ್ಬಳ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಸೈಕಲ್ ಬಿಡುತ್ತಲೇ ಸ್ಕಿಪ್ಪಿಂಗ್… ಭಲೇ… ಭಲೇ.. ಏನ್ ಬ್ಯಾಲೆನ್ಸ್..!

ವೈರಲ್ ಆದ ವಿಡಿಯೋದಲ್ಲಿ ತರುಣಿ ಹಿಮನಾಡಿನಲ್ಲಿ ಬಿಲ್ಲು, ಬಾಣಗಳನ್ನು ಹಿಡಿದುಕೊಂಡಿದ್ದಾಳೆ. ಬಳಿಕ ಬಾಣಕ್ಕೆ ಲೈಟರ್​ನಿಂದ ಬೆಂಕಿ ಹೊತ್ತಿಸುತ್ತಾಳೆ. ನಂತರ ಹ್ಯಾಂಡ್​ಸ್ಟ್ಯಾಂಡ್​ ಮೇಲೆ ತಲೆಕೆಳಗಾಗಿ ನಿಲ್ಲುತ್ತಾಳೆ. ಕಾಲಬೆರಳಿನಲ್ಲಿ ಹಿಡಿದುಕೊಂಡ ಬಾಣವನ್ನು ಗುರಿ ಇಟ್ಟು ಹೊಡೆಯುತ್ತಾಳೆ.

ಒರಿಸ್ಸಾ ಕೆಲ್ಲಿ ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದು, ಈಕೆಯ ಜಾಣ್ಮೆಯನ್ನು ನೋಡಿದ ನೆಟ್ಟಿಗರು ಬೆರಗಾಗುತ್ತಿದ್ದಾರೆ. ಈಗಾಗಲೇ ಈ ವಿಡಿಯೋವನ್ನು ಮೂರು ಮಿಲಿಯನ್​ ಜನರು ನೋಡಿದ್ದಾರೆ. ಕತ್ತಲೆಯಲ್ಲಿ ನನ್ನ ಕಾಲುಗಳಿಗೆ ಸಾಕ್ಸ್ ಹಾಕಿಕೊಳ್ಳುವಲ್ಲಿ ಗೊಂದಲವಾಗುತ್ತದೆ. ಆದರೆ ಈಕೆ ಮಾತ್ರ ಅದ್ಭುತ!. ಹೆಣ್ಣು ಎಂದರೆ ಹೀಗಿರಬೇಕು. ಜಾಣ್ಮೆಯೊಂದಿಗೆ ಉನ್ಮಾದವೂ ನಿಮ್ಮಲ್ಲಿ ಮೇಳೈಸಿದೆ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.

suddiyaana