20 ವರ್ಷದ ವಿದ್ಯಾರ್ಥಿಯನ್ನು ಪ್ರೀತಿಸಿ ಮದುವೆಯಾದ 40 ವರ್ಷದ ಶಿಕ್ಷಕಿ!

20 ವರ್ಷದ ವಿದ್ಯಾರ್ಥಿಯನ್ನು ಪ್ರೀತಿಸಿ ಮದುವೆಯಾದ 40 ವರ್ಷದ ಶಿಕ್ಷಕಿ!

ಪ್ರೀತಿಗೆ ಕಣ್ಣಿಲ್ಲ.. ವಯಸ್ಸಿನ ಗಡಿಯೂ ಇಲ್ಲ.. ಅಂತಸ್ತಿನ ಪರದೆ ಇಲ್ಲ ಅಂತಾ ಹೇಳಲಾಗುತ್ತದೆ. ಹೀಗಾಗಿಯೇ ಅನೇಕರು ಹೆತ್ತವರನ್ನೇ ತೊರೆದು ಪ್ರೀತಿಸಿದವರೊಂದಿಗೆ ಮದುವೆಯಾಗುತ್ತಾರೆ. ಇತ್ತೀಚೆಗೆ ಪ್ರೀತಿಸಿದವರಲ್ಲಿ ವಯಸ್ಸಿನ ಅಂತರ ತುಂಬಾ ಇರುತ್ತೆ. ತಮಗಿಂತ 10 ರಿಂದ 20 ವರ್ಷ ದೊಡ್ಡವರನ್ನು ಮದುವೆಯಾಗುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿದೆ. ಇದೀಗ ಇಲ್ಲೊಂದು ಜೋಡಿ ಮದುವೆಯಾಗಿದ್ದು, ಕೊಂಚ ಚರ್ಚೆಯನ್ನು ಹುಟ್ಟುಹಾಕಿದೆ. ಅದೇನೆಂದರೆ 40 ವರ್ಷದ ಶಿಕ್ಷಕಿಯೊಬ್ಬರು 20 ವರ್ಷ ವಿದ್ಯಾರ್ಥಿಯನ್ನು ವಿವಾಹವಾಗಿದ್ದಾರೆ.

ಇದನ್ನೂ ಓದಿ: ಕೆಂಪು ಸಮುದ್ರದ ಮೇಲೆ ಹೌತಿ ಬಂಡುಕೋರರ ಕರಿನೆರಳು – ಎಚ್ಚರಿಕೆ ನಡುವೆಯೇ ಮತ್ತೊಂದು ಕಾರ್ಗೋ ಶಿಪ್ ಮೇಲೆ ದಾಳಿ!

ಹೌದು, ಬಿಹಾರದ ಸಮಸ್ತಿಪುರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಶಿಕ್ಷಕಿ ಮತ್ತು ವಿದ್ಯಾರ್ಥಿ ಮದುವೆಯಾಗಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ. ವೈರಲ್‌ ಆದ ವಿಡಿಯೋದಲ್ಲಿ 40 ವರ್ಷದ ಶಿಕ್ಷಕಿ ಮಧು ಮಗಳಂತೆ ಸಿಂಗಾರಗೊಂಡಿದ್ದಾರೆ. ವಿದ್ಯಾರ್ಥಿ ಸಿಂಪಲ್ಲಾಗಿ ಬಟ್ಟೆ ಧರಿಸಿದ್ದಾನೆ. ಅತ್ತ ವಿದ್ಯಾರ್ಥಿ ಮತ್ತು ಟೀಚರ್​ ವಿವಾಹ ಲವ್​ ಮ್ಯಾರೇಜ್​ ಎಂದು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದ್ದು, ದೃಶ್ಯದಲ್ಲಿ ವಿಡಿಯೋ ಚಿತ್ರೀಕರಿಸುವ ವ್ಯಕ್ತಿಯೊಬ್ಬ ಹಾಡನ್ನು ಹಾಡುತ್ತಿರುವುದು ಕೇಳಿಬಂದಿದೆ.

ಮತ್ತೊಂದೆಡೆ ಟ್ವಿಟ್ಟರ್​​ನಲ್ಲಿ 40 ವರ್ಷದ ಶಿಕ್ಷಕಿ ತನಗಿಂತ 20 ವರ್ಷ ಚಿಕ್ಕ ವಯಸ್ಸಿನ ಹುಡುಗನನ್ನು ವಿವಾಹವಾಗಿರುವುದು ಭಾರಿ ಚರ್ಚೆ ಹುಟ್ಟುಹಾಕಿದೆ. ಕೆಲವರು ಈ ಬಗ್ಗೆ ಅಸಮಧಾನ ಹೊರಹಾಕಿದ್ದರೆ, ಇನ್ನೂ ಕೆಲವರು ಪ್ರೀತಿ ಅವೆಲ್ಲವನ್ನ ಮರೆಸುತ್ತದೆ ಎಂದು ಬರೆದಿದ್ದಾರೆ.

Shwetha M