ಜಾಲಿ ರೈಡ್ ಹೊರಟ ಮುದ್ದಾದ ಬೆಕ್ಕುಗಳು! – ಬ್ಯಾಗ್ ಮೇಲೆ ಬೆಕ್ಕಿನ ಬ್ಯಾಲೆನ್ಸ್

ಸಾಕು ಪ್ರಾಣಿಗಳನ್ನು ವಾಹನದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಕರೆದೊಯ್ಯುವುದು ದೊಡ್ಡ ಸಾಹಸ. ಇನ್ನು ಅವುಗಳನ್ನು ಬೈಕ್ ನಲ್ಲಿ ಕೂರಿಸಿಕೊಂಡು ಹೋಗುವುದು ಕಷ್ಟವೇ ಬಿಡಿ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ಸಾಕು ನಾಯಿಗಳನ್ನು ಕೂರಿಸಿಕೊಂಡು ಬೈಕ್ ರೈಡ್ ಹೋಗುತ್ತಾರೆ. ಈ ಬಗ್ಗೆ ನಾವು ಕೇಳಿರುತ್ತೇವೆ. ಹಾಗೇ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಈಗ ಇಂತಹದ್ದೇ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಜಾಲಿ ರೈಡ್ ಹೋಗಿದ್ದು ನಾಯಿ ಅಲ್ಲ… ಮುದ್ದಾದ ಬೆಕ್ಕುಗಳು!
ಇದನ್ನೂ ಓದಿ: ಇಲಿ ಹಿಡಿಯೋಕೆ ಮನೆಗೆ ಹಾವನ್ನೇ ಬಿಟ್ಟ ಮಾಲೀಕ – ಯಪ್ಪೋ ಮುಂದೇನಾಯ್ತು ಗೊತ್ತಾ..?
ಬೆಂಗಳೂರಿನ ಹೊರವಲಯದಲ್ಲಿ ಸೆರೆಹಿಡಿಯಲಾದ ದೃಶ್ಯವಿದು ಎಂದು ಹೇಳಲಾಗುತ್ತಿದೆ. ಈ ಬೈಕ್ ಸವಾರ ತನ್ನ ಸಾಕು ಬೆಕ್ಕುಗಳೊಂದಿಗೆ ಜಾಲಿ ರೈಡ್ ಮಾಡಿದ್ದಾನೆ. ಈ ಬೆಕ್ಕುಗಳನ್ನು ಯಾವುದೇ ಬಾಸ್ಕೆಟ್ನಲ್ಲಿ ಹಾಕದೆ ಬೆನ್ನಿಗೆ ನೇತುಹಾಕಿಕೊಂಡಿರುವ ಬ್ಯಾಗ್ ಮೇಲೆ ಒಂದನ್ನು, ಇನ್ನೊಂದನ್ನು ಟ್ಯಾಂಕ್ ಮೇಲೆ ಕೂರಿಸಿಕೊಂಡು ಸರಾಗವಾಗಿ ಹೋಗುತ್ತಿದ್ದಾನೆ. ಬೆಕ್ಕುಗಳು ಕೂಡ ಚೂರು ಭಯವಿಲ್ಲದೇ ಆರಾಮವಾಗಿ ಬಾಲೆನ್ಸ್ ಮಾಡುತ್ತಾ ಕುಳಿತಿವೆ.
ವೈರಲ್ ಆದ ವಿಡಿಯೋವನ್ನು ಇಲ್ಲಿವರೆಗೆ 1.5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಸಾಕಷ್ಟು ಜನ ಬೇಸರ, ಕೋಪದಿಂದಲೇ ಪ್ರತಿಕ್ರಿಯಿಸಿದ್ದಾರೆ. ಸವಾರನೇನೋ ಹೆಲ್ಮೆಟ್ ಹಾಕಿಕೊಂಡಿದ್ದಾನೆ. ಬೆಕ್ಕುಗಳಿಗೆ ಯಾವುದೇ ರೀತಿಯ ಸುರಕ್ಷಾ ಸಾಧನವಿಲ್ಲ. ಏನಾದರೂ ಹೆಚ್ಚೂ ಕಡಿಮೆ ಆದರೆ ಏನು ಗತಿ? ಈ ರೀತಿಯ ಪ್ರಯಾಣ ನಿಜಕ್ಕೂ ನನಗೆ ಆತಂಕ ಹುಟ್ಟಿಸುತ್ತಿದೆ ಎಂದಿದ್ದಾರೆ ಒಬ್ಬರು. ನೀನೊಬ್ಬನೇ ಬೇಕಿದ್ದರೆ ಸಾಹಸ ಮಾಡು. ಇಂಥ ಮುಗ್ಧ ಪ್ರಾಣಿಗಳನ್ನು ವಿನಾಕಾರಣ ಸಾಹಸಕ್ಕೆ ಎಳೆಯಬೇಡ, ಅವುಗಳನ್ನು ಆಪತ್ತಿಗೆ ತಳ್ಳಬೇಡ ಎಂದಿದ್ದಾರೆ ಅನೇಕರು. ಅದರಲ್ಲೂ ಇದು ಹೆದ್ದಾರಿ, ಅಪಾಯದ ಅರಿವಿಲ್ಲವೆ ಈ ವ್ಯಕ್ತಿಗೆ? ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
Found this guy in ORR today! @peakbengaluru pic.twitter.com/BIDtBTFRdx
— Aarun Gowda (@alwAYzgAMe420) January 14, 2023