ವೈರಲ್ ವಿಡಿಯೋ- ಬೀಚ್ ನಲ್ಲಿ ಏಕಕಾಲಕ್ಕೆ 42 ಬ್ಯಾಕ್ ಫ್ಲಿಪ್ ಮಾಡಿದ ಯುವಕ!

ವೈರಲ್ ವಿಡಿಯೋ- ಬೀಚ್ ನಲ್ಲಿ ಏಕಕಾಲಕ್ಕೆ 42 ಬ್ಯಾಕ್ ಫ್ಲಿಪ್ ಮಾಡಿದ ಯುವಕ!

ಬ್ಯಾಕ್ ಫ್ಲಿಪ್ ಎಂಬುದು ಸುಲಭವಾಗಿ ಕರಗತ ಮಾಡಿಕೊಳ್ಳುವ ಕೌಶಲ್ಯವಲ್ಲ. ಅದಕ್ಕೆ ಅಗತ್ಯ ತರಬೇತಿ ಬೇಕಾಗುತ್ತದೆ. ಯಾವುದೇ ಅಹಿತರಕ ದುರ್ಘಟನೆ ನಡೆಯದಂತೆ ಮುನ್ನಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಇಲ್ಲೊಬ್ಬ ಯುವಕ ಬೀಚ್ ನಲ್ಲಿ ಸುಮಾರು 42 ಬ್ಯಾಕ್ ಫ್ಲಿಪ್ ಮಾಡಿ ಸುದ್ದಿಯಾಗಿದ್ದಾನೆ. ಈತನ ಕೌಶಲ್ಯ ಕಂಡು ಜನರು ನಿಬ್ಬೆರಗಾಗಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಇದನ್ನೂ ಓದಿ: ವೈರಲ್ ವಿಡಿಯೋ… ಸಿನಿಮಾ ಶೈಲಿಯಲ್ಲಿ ಬಂದು ಚಲಿಸುತ್ತಿದ್ದ ಬಸ್ಸಿನ ಗಾಜು ಪುಡಿ ಮಾಡಿದ ಯುವಕ

ಸಲ್ಮಾನ್ ಖಾನ್ ಎಂಬ ಅಥ್ಲೀಟ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಮುಂಬೈನ ಜುಹು ಬೀಚ್‌ನಲ್ಲಿ ಇವರು ಬ್ಯಾಕ್‌ಫ್ಲಿಪ್‌ ಪ್ರದರ್ಶಿಸಿದ್ದಾರೆ. ಬರೋಬ್ಬರಿ 42 ಬ್ಯಾಕ್‌ಫ್ಲಿಪ್‌ಗಳ ಪ್ರದರ್ಶನ ನೀಡುವ ಮೂಲಕ ಅಲ್ಲಿದ್ದವರುನ್ನು ನಿಬ್ಬೆರಗಾಗಿಸಿದ್ದಾರೆ. `ಎಷ್ಟು ಬ್ಯಾಕ್‌ಫ್ಲಿಪ್‌? ಮುಂದಿನ ಬಾರಿ ಹೆಚ್ಚು ಶಕ್ತಿಯೊಂದಿಗೆ’ ಎಂಬ ಕ್ಯಾಪ್ಶನ್‌ನೊಂದಿಗೆ ಇವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

 

View this post on Instagram

 

A post shared by Salman khan (@sal.insane)

ಇದೀಗ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಮಿಲಿಯನ್ ವೀಕ್ಷಣೆ ಗಳಿಸುವಲ್ಲಿ ಈ ವಿಡಿಯೋ ಯಶಸ್ವಿಯಾಗಿದೆ. ಈ ದೃಶ್ಯ ಕಂಡ ಬಹುತೇಕರು ಈ ಯುವಕನ ಶ್ರಮ, ಸಾಮರ್ಥ್ಯವನ್ನು ಕೊಂಡಾಡಿದ್ದಾರೆ.

suddiyaana