ಸಿಲಿಕಾನ್ ಸಿಟಿ ಜನರಿಗೆ ಬಿಗ್ ಶಾಕ್ – ಹೆಚ್ಚಾಗುತ್ತಿದೆ ವೈರಲ್ ಉಸಿರಾಟದ ಸೋಂಕು!

ಬೆಂಗಳೂರಿನಾದ್ಯಂತ ಹಲವು ಆಸ್ಪತ್ರೆಗಳಲ್ಲಿ ವೈರಲ್ ಉಸಿರಾಟದ ಸೋಂಕು ಗಳ ಪ್ರಕರಣಗಳು ಅಧಿಕ ಪ್ರಮಾಣದಲ್ಲಿ ಜಾಸ್ತಿಯಾಗುತ್ತಿವೆ. ರೋಗಿಗಳು ನೆಗಡಿ, ಕೆಮ್ಮು, ಜ್ವರ, ಸ್ನಾಯು ನೋವು ಮತ್ತು ಅಸ್ವಸ್ಥತೆಯ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾಗು ತ್ತಿದ್ದಾರೆ. ಎಲ್ಲಾ ವಯೋಮಾನದವರೂ ಈ ರೀತಿಯ ವೈರಲ್ ಉಸಿರಾಟದ ಕಾಯಿಲೆಗಳಿಗೆ ಸಂಬಂಧಿಸಿದಂತೆ ಹೊರರೋಗಿ ಮತ್ತು ತುರ್ತು ಚಿಕಿತ್ಸಾ ವಿಭಾಗಕ್ಕೆ ಭೇಟಿ ನೀಡುತ್ತಿದ್ದಾರೆ. ಹೀಗ ಭೇಟಿ ನೀಡುವವರ ಸಂಖ್ಯೆಯಲ್ಲಿ ಸ್ಥಿರವಾಗಿ ಏರಿಕೆಯಾಗುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ವೈರಲ್ ಉಸಿರಾಟದ ಸೋಂಕುಗಳು ಚಳಿಗಾಲದಲ್ಲಿ ಸಾಮಾನ್ಯವಾಗಿದ್ದರೂ ಕಳೆದ ವರ್ಷ ದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ಪ್ರಕರಣಗಳ ಸಂಖ್ಯೆ ಬಹಳಷ್ಟು ಹೆಚ್ಚಾಗಿದೆ ಎಂದು ಕನ್ನಿಂಗ್ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ವಿಶೇಷ ವಾಗಿ ಮಕ್ಕಳು, ಹಿರಿಯ ನಾಗರಿಕರು ಮತ್ತು ಮೊದಲೇ ಆರೋಗ್ಯ ಸಮಸ್ಯೆ ಇರುವವರಲ್ಲಿ ಈ ರೋಗ ಲಕ್ಷಣಗಳು ದೀರ್ಘಕಾಲದವರೆಗೆ ಕಂಡುಬರುತ್ತಿವೆ.
ಇದನ್ನೂ ಓದಿ: ಕೇರಳ ಆಯ್ತು.. ಈಗ ಕರ್ನಾಟಕದಲ್ಲೂ ವೈರಲ್ ವಿಡಿಯೋಗೆ ವ್ಯಕ್ತಿ ಬಲಿ! – ಅಂಕೋಲದ ವೈದ್ಯ ದುರಂತ ಅಂತ್ಯ!
ಈ ಕುರಿತು ಬೆಂಗಳೂರಿನ ಕನ್ನಿಂಗ್ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆ ಇಂಟರ್ನಲ್ ಮೆಡಿಸಿನ್ ವಿಭಾಗದ ಕನ್ಸಲ್ಟೆಂಟ್ ಡಾ.ಜಿ ನಾಸಿರುದ್ದೀನ್ ಮಾತನಾಡಿ, “ಕಳೆದ ಕೆಲವು ವಾರಗಳಿಂದ ಫೋರ್ಟಿಸ್ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿ ಪ್ರತಿದಿನ ಸರಾಸರಿ 5 ರಿಂದ 10 ವೈರಲ್ ಉಸಿರಾಟದ ಸೋಂಕಿನ ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ. ಕಳೆದ ವರ್ಷ ಕ್ಕೆ ಹೋಲಿಸಿದರೆ ಈ ಬಾರಿ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ರೋಗಿಗಳು ದೀರ್ಘಕಾಲದವರೆಗೆ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.
ಉಸಿರಾಟದ ಸೋಂಕು ಹೆಚ್ಚಲು ಕಾರಣ:
● ಹವಾಮಾನದಲ್ಲಿನ ಹಠಾತ್ ಬದಲಾವಣೆ: ಇದು ದೇಹದ ರೋಗನಿರೋಧಕ ಶಕ್ತಿಯ ಮೇಲೆ ಒತ್ತಡ ಉಂಟುಮಾಡುತ್ತದೆ.
● ಗಾಳಿಯ ಸಂಚಾರ ಕಡಿಮೆ ಇರುವ ಕಡೆಗಳಲ್ಲಿ ಜನದಟ್ಟಣೆ: ಸರಿಯಾದ ಗಾಳಿ-ಬೆಳಕಿಲ್ಲದ ಒಳಾಂಗಣ ಪ್ರದೇಶಗಳಲ್ಲಿ ಹೆಚ್ಚು ಜನರು ಸೇರುವುದು.
● ಕಡಿಮೆ ರೋಗನಿರೋಧಕ ಶಕ್ತಿ: ಪೌಷ್ಟಿಕಾಂಶದ ಕೊರತೆ, ಒತ್ತಡ ಅಥವಾ ನಿದ್ರೆಯ ಅಭಾವದಿಂದಾಗಿ ರೋಗನಿರೋಧಕ ಶಕ್ತಿ ಕುಗ್ಗುವುದು.
● ಸೋಂಕಿತ ವ್ಯಕ್ತಿಗಳ ಸಂಪರ್ಕ: ಮನೆ, ಶಾಲೆ ಅಥವಾ ಕೆಲಸದ ಸ್ಥಳಗಳಲ್ಲಿ ಸೋಂಕಿರುವ ವ್ಯಕ್ತಿಗಳಿಂದ ಸೋಂಕು ಹರಡಬಹುದು.
● ಮೊದಲೇ ಕಾಡುವ ಆರೋಗ್ಯ ಸಮಸ್ಯೆಗಳು: ಅಸ್ತಮಾ, ಸಿಒಪಿಡಿ, ಮಧುಮೇಹ ಅಥವಾ ಹೃದಯ ಸಂಬಂಧಿ ಕಾಯಿಲೆಗಳಿರುವವರಲ್ಲಿ ಅಪಾಯ ಹೆಚ್ಚು.
● ಪೂರ್ಣವಾಗಿ ಚೇತರಿಕೆ ಹೊಂದಾಡಿರುವುದು: ಹಿಂದಿನ ವೈರಲ್ ಕಾಯಿಲೆಯಿಂದ ಸಂಪೂರ್ಣವಾಗಿ ಗುಣಮುಖವಾಗದಿರುವುದು.
ಸಾಮಾನ್ಯ ಲಕ್ಷಣಗಳು:
● ಜ್ವರ, ಚಳಿ, ಮೈಕೈ ನೋವು, ಆಯಾಸ, ತಲೆನೋವು ಮತ್ತು ಹಸಿವು ಕಡಿಮೆಯಾಗುವುದು.
● ಗಂಟಲು ನೋವು, ಮೂಗು ಸೋರುವುದು ಅಥವಾ ಮೂಗು ಕಟ್ಟುವುದು.
● ಕಫದೊಂದಿಗೆ ನಿರಂತರ ಕೆಮ್ಮು ಅಥವಾ ಕಫವಿಲ್ಲದ ಕೆಮ್ಮು.
● ಉಸಿರುಕಟ್ಟುವಿಕೆ, ವೀಸಿಂಗ್ ಅಥವಾ ಎದೆ ಬಿಗಿದಂತಾಗುವುದು.
● ಗಂಭೀರ ಪ್ರಕರಣಗಳಲ್ಲಿ ವೇಗವಾಗಿ ಉಸಿರಾಡುವುದು, ಗೊಂದಲದ ಸ್ಥಿತಿ ಅಥವಾ ತುಟಿಗಳು ನೀಲಿ ಬಣ್ಣಕ್ಕೆ ತಿರುಗುವುದು.

ನೋಡಿರಿ

