3 ವರ್ಷದ ಮಗುವಿನ ಪ್ಲೇಸ್ಕೂಲ್ ಫೀಸ್ 4 ಸಾವಿರ ಅಲ್ಲ ಬರೋಬ್ಬರಿ 4.3 ಲಕ್ಷ ರೂ.!

ಇನ್ನೇನು ಕೆಲವೇ ವಾರಗಳಲ್ಲಿ ಶಾಲಾ ಕಾಲೇಜುಗಳು ಆರಂಭವಾಗಲಿದೆ. ಈಗಾಗಲೇ ಶಾಲೆ, ಕಾಲೇಜುಗಳ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸುವಲ್ಲಿ ನಿರತರಾಗಿದ್ದಾರೆ. ಬೆಲೆ ಏರಿಕೆಯ ನಡುವೆಯೇ ಬ್ಯಾಗ್, ಪುಸ್ತಕ, ಪೆನ್ನು ಮುಂತಾದವುಗಳನ್ನು ಖರೀಸುತ್ತಿದ್ದಾರೆ. ಇದೀಗ ಇಲ್ಲೊಂದು ಪೋಷಕರಿಗೆ ಪ್ಲೇಸ್ಕೂಲ್ ಫೀಸ್ ನೋಡಿ ತಲೆ ತಿರುಗುವಂತೆ ಆಗಿದೆ.
ಇದನ್ನೂ ಓದಿ: ಸಲಾರ್ 2 ಸೆಟ್ಟೇರುವುದು ಅನುಮಾನ! – ಚಿತ್ರ ನಿಲ್ಲಲು ಇದೇ ಕಾರಣ ಆಯ್ತಾ?
ದೆಹಲಿಯ ನಿವಾಸಿಯೊಬ್ಬರು ತನ್ನ ಮಗನನ್ನು ಪ್ಲೇ ಸ್ಕೂಲ್ಗೆ ಸೇರಿಸಲೆಂದು ಹೋಗಿದ್ದರು. ಪ್ಲೇಸ್ಕೂಲ್ ಫೀಸ್ ನ ಕಟ್ಟಲೆಂದು ಹೋದ ವೇಳೆ ಶಾಲಾ ಶುಲ್ಕವನ್ನು ನೋಡಿ ಶಾಕ್ ಆಗಿದ್ದಾರೆ. ಪ್ಲೇ ಸ್ಕೂಲ್ ಫೀಸ್ ಬರೋಬ್ಬರಿ 4.3 ಲಕ್ಷ ರೂ. ಕಂಡು ತಲೆಗೆ ಕೈ ಹೊತ್ತು ಕುಳಿತಿದ್ದಾರೆ. ಮಗ ಏನೂ ಎಂಬಿಎ, ಎಂಬಿಬಿಎಸ್ ಅಥವಾ ಇಂಜಿನಿಯರಿಂಗ್ ಮಾಡುತ್ತಿರಬಹುದು ಅಂತ ನೀವು ಅಂದುಕೊಂಡಿರಬಹುದು. ಆದರೆ ಇದ್ಯಾವುದೂ ಅಲ್ಲ ಈ ವ್ಯಕ್ತಿಯ 3ವರ್ಷದ ಮಗನ ಪ್ಲೇ ಸ್ಕೂಲ್ ಫೀಸ್ ಬರೋಬ್ಬರೀ 4.3 ಲಕ್ಷ ರೂಪಾಯಿ. ಸದ್ಯ ಮಗನ 2024-25ರ ಪ್ಲೇಸ್ಕೂಲ್ ಫೀಸ್ನ ಸ್ಕ್ರೀನ್ಶಾಟ್ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸದ್ಯ ಫೋಟೋ ಎಲ್ಲಡೆ ವೈರಲ್ ಆಗಿದೆ.
ವೃತ್ತಿಯಲ್ಲಿ ಸಿಎ ಆಗಿರುವ ಅಕಾಶ್ ಕುಮಾರ್ ಅವರು ಏಪ್ರಿಲ್ 12ರಂದು ತಮ್ಮ ಟ್ವಿಟರ್ ಖಾತೆಯಲ್ಲಿ(@AkashTrader) ತಮ್ಮ ಮಗನ ಸ್ಕೂಲ್ ಫೀಸ್ನ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದಾರೆ. “ನನ್ನ ಮೂರು ವರ್ಷದ ಮಗನ ಪ್ಲೇ ಸ್ಕೂಲ್ ಫೀಸ್ ಬರೋಬ್ಬರೀ 4.3 ಲಕ್ಷ ರೂಪಾಯಿ. ಈ ಫೀಸ್ಗಿಂತ ಕಡಿಮೆ ಹಣದಲ್ಲಿ ನನ್ನ ಸಂಪೂರ್ಣ ಶಿಕ್ಷಣವೇ ಮುಗಿದು ಹೋಗಿತ್ತು” ಎಂದು ಪೋಸ್ಟ್ಗೆ ಕ್ಯಾಪ್ಷನ್ ಬರೆದಿದ್ದಾರೆ. ವೈರಲ್ ಫೋಟೋದಲ್ಲಿ ರಿಜಿಸ್ಟ್ರೇಶನ್ ಫೀಸ್ 10 ಸಾವಿರದಿಂದ ಪ್ರಾರಂಭವಾಗಿ ವಾರ್ಷಿಕ ಮೊತ್ತ 25,000 ರೂಪಾಯಿ ಹಾಗೆಯೇ ಒಟ್ಟು ಮೊತ್ತ 4ಲಕ್ಷದ 30 ಸಾವಿರನ್ನು ನಮೂದಿಸಿರುವುದನ್ನು ಕಾಣಬಹುದಾಗಿದೆ.