₹110 ಕೋಟಿ ಸಂಭಾವನೆ ಪಡೆದಿದ್ದ ರಜಿನಿಗೆ ಮತ್ತೆ ₹100 ಕೋಟಿ ಪ್ರಾಫಿಟ್ ಶೇರ್ – ಜೈಲರ್ ಮೂವಿಗೆ ಭಾರತದಲ್ಲೇ ಅತೀಹೆಚ್ಚು ಸಂಭಾವನೆ ಪಡೆದ ತಲೈವಾ

₹110 ಕೋಟಿ ಸಂಭಾವನೆ ಪಡೆದಿದ್ದ ರಜಿನಿಗೆ ಮತ್ತೆ ₹100 ಕೋಟಿ ಪ್ರಾಫಿಟ್ ಶೇರ್ – ಜೈಲರ್ ಮೂವಿಗೆ ಭಾರತದಲ್ಲೇ ಅತೀಹೆಚ್ಚು ಸಂಭಾವನೆ ಪಡೆದ ತಲೈವಾ

ಜೈಲರ್ ಚಿತ್ರ ಬಿಡುಗಡೆಯಾಗಿ ಇಪ್ಪತ್ತು ದಿನಗಳನ್ನು ಪೂರೈಸಿದ್ರೂ ಸಹ ಎಲ್ಲೆಡೆ ತನ್ನ ಅಬ್ಬರವನ್ನು ಮಾತ್ರ ಸ್ವಲ್ಪವೂ ತಗ್ಗಿಸಿಕೊಂಡಿಲ್ಲ. ವಿಶ್ವದಾದ್ಯಂತ 650 ಕೋಟಿ ಗಳಿಕೆ ಮಾಡಿ ಹೊಸ ದಾಖಲೆ ಬರೆದಿದ್ದು ವಿತರಣೆಗೊಂಡಿದ್ದ ಎಲ್ಲಾ ಭಾಷೆಗಳಲ್ಲಿಯೂ, ಎಲ್ಲಾ ಏರಿಯಾಗಳಲ್ಲಿಯೂ ಸಹ ಭರ್ಜರಿ ಲಾಭ ತಂದುಕೊಟ್ಟಿದೆ. ಇನ್ನು ತಮಿಳು ಮಾತ್ರವಲ್ಲದೇ ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೂ ಸಹ ಡಬ್ ಆಗಿ ಬಿಡುಗಡೆಗೊಂಡಿರುವ ಜೈಲರ್ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ.

ಇದನ್ನೂ ಓದಿ : ‘ಜವಾನ್’ ಸಿನಿಮಾದಲ್ಲಿ ಟ್ರೈಲರ್ ರಿಲೀಸ್ – ಶಾರುಖ್ ಖಾನ್ ನಾನಾ ರೂಪ ನೋಡಿ ತಲೆಕೆಡಿಸಿಕೊಂಡ ಫ್ಯಾನ್ಸ್

ಬಾಕ್ಸ್ ಆಫೀಸ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಈ ಸಿನಿಮಾ ಈವರೆಗೂ 650 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದ ಬಾಕ್ಸ್ ಆಫೀಸ್​ನಲ್ಲೇ 328 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರ ಇನ್ನೂ ಕೆಲವು ದಿನಗಳ ಕಾಲ ತನ್ನ ಅಬ್ಬರ ಮುಂದುವರಿಸಲಿದೆ. ರಜನಿಕಾಂತ್ (Rajinikanth) ಅವರ ವೃತ್ತಿ ಜೀವನದಲ್ಲಿ ಮತ್ತೊಂದು ದೊಡ್ಡ ಗೆಲುವು ಸಿಕ್ಕಿದೆ. ಮತ್ತೊಂದು ವಿಶೇಷ ಎಂದರೆ, ಈ ಚಿತ್ರದ ಮೂಲಕ ರಜನಿಕಾಂತ್ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಹೀರೋ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.

ರಜನಿಕಾಂತ್ ಅವರು ‘ಜೈಲರ್’ ಚಿತ್ರಕ್ಕಾಗಿ 110 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಸಂಭಾವನೆ ಹಣವನ್ನು ಈ ಮೊದಲೇ ನೀಡಲಾಗಿದೆ. ಇದರ ಜೊತೆಗೆ ಪ್ರಾಫಿಟ್​ನಲ್ಲೂ ರಜನಿಗೆ ಪಾಲು ಸಿಕ್ಕಿದೆ. ಸನ್ ಪಿಕ್ಚರ್ಸ್​ನ ಮುಖ್ಯಸ್ಥ ಕಲಾನಿಧಿ ಮಾರನ್ ಅವರು ರಜನಿಕಾಂತ್​ಗೆ 100 ಕೋಟಿ ರೂಪಾಯಿ ಚೆಕ್ ನೀಡಿದ್ದಾರೆ. ರಜನಿಕಾಂತ್ ಅವರು ‘ಜೈಲರ್’ ಚಿತ್ರಕ್ಕಾಗಿ 110 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಸಂಭಾವನೆ ಹಣವನ್ನು ಈ ಮೊದಲೇ ನೀಡಲಾಗಿದೆ. ಇದರ ಜೊತೆಗೆ ಪ್ರಾಫಿಟ್​ನಲ್ಲೂ ರಜನಿಗೆ ಪಾಲು ಸಿಕ್ಕಿದೆ. ಸನ್ ಪಿಕ್ಚರ್ಸ್​ನ ಮುಖ್ಯಸ್ಥ ಕಲಾನಿಧಿ ಮಾರನ್ ಅವರು ರಜನಿಕಾಂತ್​ಗೆ 100 ಕೋಟಿ ರೂಪಾಯಿ ಚೆಕ್ ನೀಡಿದ್ದಾರೆ! ರಜನಿಕಾಂತ್​ಗೆ ಚೆಕ್ ಹಸ್ತಾಂತರ ಮಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

‘ಜೈಲರ್’ ಚಿತ್ರದ ನಟನೆಗೆ ರಜನಿಕಾಂತ್​ಗೆ 210 ಕೋಟಿ ರೂಪಾಯಿ ಸಂಭಾವನೆ ಸಿಕ್ಕಂತೆ ಆಗಿದೆ. ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆದ ಮೊದಲ ಹೀರೋ ಎನ್ನುವ ಖ್ಯಾತಿ ರಜನಿಕಾಂತ್​ಗೆ ಸಿಕ್ಕಿದೆ. ಈ ವಿಚಾರ ಕೇಳಿ ರಜನಿ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ‘ಜೈಲರ್’ ಸಿನಿಮಾ ಆಗಸ್ಟ್ 10ರಂದು ರಿಲೀಸ್ ಆಗಿತ್ತು. ಈ ಚಿತ್ರದ ಮೂಲಕ ರಜನಿಕಾಂತ್ ದೊಡ್ಡ ಯಶಸ್ಸು ಕಂಡರು. ಈ ಚಿತ್ರದಲ್ಲಿ ರಜನಿ ಜೊತೆ ಶಿವರಾಜ್​ಕುಮಾರ್, ಮೋಹನ್​ಲಾಲ್ ಮೊದಲಾದವರು ಮಾಡಿರುವ ಪಾತ್ರ ಕೂಡ ಗಮನ ಸೆಳೆದಿದೆ. ಗುರುವಾರ (ಆಗಸ್ಟ್ 31) ಈ ಚಿತ್ರ 2.4 ಕೋಟಿ ರೂಪಾಯಿ ಗಳಿಕೆ ಮಾಡಿದೆ.  ಈ ಮಧ್ಯೆ ಸಿನಿಮಾದ ಹೆಚ್​ಡಿ ಪ್ರಿಂಟ್ ಆನ್​ಲೈನ್​ನಲ್ಲಿ ಸೋರಿಕೆ ಆಗಿದ್ದು, ಚಿತ್ರಕ್ಕೆ ಹಿನ್ನಡೆ ಆಗಿದೆ.

suddiyaana