ಇಲಿ ಸಾಯಿಸಿದ್ರೆ ಒಂದು ಕೋಟಿ ರೂ ಸಂಬಳ! – ಈ ಅರ್ಹತೆ ಹೊಂದಿದ್ರೆ ಕೆಲ್ಸಾ ಪಕ್ಕಾ…

ಇಲಿ ಸಾಯಿಸಿದ್ರೆ ಒಂದು ಕೋಟಿ ರೂ ಸಂಬಳ! – ಈ ಅರ್ಹತೆ ಹೊಂದಿದ್ರೆ ಕೆಲ್ಸಾ ಪಕ್ಕಾ…

ನ್ಯೂಯಾರ್ಕ್ : ಇಲಿ ಕಾಟ ತಾಳಲಾರದೇ ನ್ಯೂಯಾರ್ಕ್ ಸಿಟಿ ಮೇಯರ್‌ರೊಬ್ಬರು ಇಲಿ ಕೊಲ್ಲಲು ಜನ ಬೇಕಾಗಿದ್ದಾರೆ ಎಂದು ಜಾಹೀರಾತು ಹಾಕಿರುವ ವಿಚಿತ್ರ ಘಟನೆ ನಡೆದಿದೆ.

ನ್ಯೂಯಾರ್ಕ್ ನಗರದಲ್ಲಿ ಸುಮಾರು 1.8 ಕೋಟಿ ಇಲಿಗಳು ಇವೆ ಎಂದು ವರದಿಯಾಗಿತ್ತು. ಇದಾದ ಬಳಿಕ, ನ್ಯೂಯಾರ್ಕ್ ಸಿಟಿ ಮೇಯರ್ ಎರಿಕ್ ಆಡಮ್ಸ್ ಇಲಿಯನ್ನು ಕೊಲ್ಲಲು ಜನರನ್ನು ನೇಮಿಸುವುದಾಗಿ ಜಾಹೀರಾತು ನೀಡಿದ್ದಾರೆ. ಅಷ್ಟೇ ಅಲ್ಲದೆ ಇಲಿ ಕೊಲ್ಲುವವರಿಗೆ ಆಕರ್ಷಕ ಸಂಬಳ ನೀಡುವುದಾಗಿ ಜಾಹೀರಾತಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಕೊಕ್ಕೋ ಕೂಗಿಗೆ ಗರಂ ಆದ ಡಾಕ್ಟರ್ – ಕೋಳಿ ವಿರುದ್ದ ಪೊಲೀಸ್ ಕಂಪ್ಲೇಂಟ್!

ಈ ಜಾಹೀರಾತಿನಲ್ಲಿ ಇಲಿ ಕೊಲ್ಲುವವರು ಯಾವ ಯಾವ ವಿಚಾರದದಲ್ಲಿ ಪರಿಣಿತಿ ಹೊಂದಿರಬೇಕು ಎಂದು ತಿಳಿಸಲಾಗಿದೆ. ‘ಇಲಿಯನ್ನು ಸಾಯಿಸಲು ಚಾಣಾಕ್ಷ್ಯತನವನ್ನು ಹೊಂದಿರಬೇಕು. ಆಯ್ಕೆಯಾದ ಸಿಬ್ಬಂದಿಯೂ ವಾರದ 7 ದಿನವೂ ಕೆಲಸ ಮಾಡಬೇಕು. ಜೊತೆಗೆ ದಿನದ 24 ಗಂಟೆಗಳ ಕೆಲಸ ಮಾಡಬೇಕು. ನಗರದ ಜನರೊಂದಿಗೆ ಉತ್ತಮ ಸಂಪರ್ಕ ಸಾಧಿಸಿ ಉತ್ಸಾಹದಿಂದ ಸಮಾಜದ ಕಡೆಗೆ ಸಕಾರಾತ್ಮಕ ದೃಷ್ಟಿಕೋನದಿಂದ ಕೆಲಸ ಮಾಡಬೇಕು. ಇದರಿಂದ 80 ಲಕ್ಷ ನಿವಾಸಿಗಳು ಇಲಿಗಳ ಸಮಸ್ಯೆಯಿಂದ ಪಾರಾಗಬಹುದು. ಒಂದು ವೇಳೆ ಇಲಿಯನ್ನು ಸಾಯಿಸಲು ಯಶಸ್ವಿಯಾದರೆ 1,70,000 ಡಾಲರ್‌, ಅಂದರೆ ಬರೋಬ್ಬರಿ 1,38,41,663 ರೂ. ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದಕ್ಕೆ ಹೋಲಿಸಿದರೆ ಈ ವರ್ಷ ನ್ಯೂಯಾರ್ಕ್‍ನಲ್ಲಿ ಇಲಿಗಳ ಕಾಟದ ಕುರಿತಾದ ದೂರುಗಳ ಸಂಖ್ಯೆ ಶೇ. 70ರಷ್ಟು ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಹೊಸ ಕಾನೂನನ್ನು ಪರಿಚಯಿಸಿದ್ದು, ನ್ಯೂಯಾರ್ಕ್ ನಿವಾಸಿಗಳು ರಾತ್ರಿ 8 ಗಂಟೆಯ ನಂತರ ಕಸವನ್ನು ತೆಗೆಯುವುದನ್ನು ನಿಷೇಧಿಸಲಾಗಿದೆ. ಸಂಜೆ 4 ಗಂಟೆಯ ನಂತರ ಯಾವುದೇ ಸಮಯದಲ್ಲಿ ಮನೆಗಳ ಹೊರಗೆ ಕಸ ಸುರಿಯಬಹುದು ಎಂದು ವರದಿಯಾಗಿದೆ.

suddiyaana