22 ವರ್ಷದಿಂದ ಪತ್ನಿಯ ತವರು ಮನೆಗೆ ಹೋಗಿಲ್ಲ, 10 ದಿನ ರಜೆ ಕೊಡಿ ಎಂದು ಇನ್ಸ್‌ಪೆಕ್ಟರ್ ಪತ್ರ – ಮುಂದೇನಾಯ್ತು ಗೊತ್ತಾ?
ಕೆಲಸಕ್ಕೆ ಹೋಗೋರಿಗೆ ದೊಡ್ಡ ಚಿಂತೆ ಅಂದ್ರೆ ಅದು ರಜೆ. ಯಾಕಂದ್ರೆ ಕೆಲ ಕಂಪನಿಗಳಲ್ಲಿ ಸರ್ಕಾರಿ ರಜೆ ಕೊಟ್ರೆ ಇನ್ನೂ ಕೆಲವರು ಕೊಡಲ್ಲ. ಹೀಗಾಗೇ ಫ್ಯಾಮಿಲಿ ಜೊತೆ ಹಬ್ಬ, ಹರಿದಿನ ಮಾಡೋದನ್ನೇ ಮರೆತುಬಿಟ್ಟಿರುತ್ತಾರೆ. ಪೊಲೀಸರು, ಸೈನಿಕರು ಹಾಗೂ ಪತ್ರಕರ್ತರದ್ದೂ ಇದೇ ಗೋಳು. ಹೀಗೆ ತಮ್ಮ ಜೀವನದ ಬಹುತೇಕ ಭಾಗವನ್ನ ಕಚೇರಿಗಳಲ್ಲೇ ಕಳೆದ ಪೊಲೀಸ್ವೊಬ್ಬರು ರಜೆ ಬೇಕೆಂದು ಪತ್ರ ಬರೆದಿದ್ದಾರೆ. ಅದು ಈಗ ಎಲ್ಲೆಡೆ ವೈರಲ್ ಆಗಿದೆ.
ಉತ್ತರ ಪ್ರದೇಶದ ಇನ್ಸ್‌ಪೆಕ್ಟರ್ ಪತ್ರ ಬರೆದಿದ್ದು ‘ಮದುವೆಯಾಗಿ 22 ವರ್ಷ ಕಳೆದಿದೆ. ಆದ್ರೆ ಒಂದು ಬಾರಿಯೂ ಹೆಂಡತಿಯ ತವರು ಮನೆಯಲ್ಲಿ ನಡೆಯುವ ಸಂಭ್ರಮದ ಹೋಳಿ ಹಬ್ಬಕ್ಕೆ ಹೋಗೋಕೆ ಆಗಿಲ್ಲ ಎಂದು ತಿಳಿಸಿದ್ದಾರೆ. ತನ್ನ ಪತ್ನಿ ಈ ಸಲ ತವರಲ್ಲಿ ಹೋಳಿ ಹಬ್ಬದಲ್ಲಿ ಭಾಗವಹಿಸುವಂತೆ ಹಠ ಹಿಡಿದಿದ್ದಾಳೆ. ಅವರ ಸಮಸ್ಯೆಯನ್ನು ಸಹಾನುಭೂತಿಯಿಂದ ಪರಿಗಣಿಸಬೇಕು ಎಂದು ಇನ್ಸ್ ಪೆಕ್ಟರ್ ಪತ್ರದಲ್ಲಿ ಬರೆದಿದ್ದಾರೆ. ಮಾರ್ಚ್ 4 ರಿಂದ 10 ದಿನಗಳ ಕಾಲ ರಜೆ ನೀಡುವಂತೆ ಇನ್ಸ್‌ಪೆಕ್ಟರ್ ಎಸ್‌ಪಿಗೆ ತಿಳಿಸಿದ್ದಾರೆ.
ಇದನ್ನೂ ಓದಿ : ಸ್ಥೂಲಕಾಯದ ಬಗ್ಗೆ ಎಚ್ಚೆತ್ತುಕೊಳ್ಳದಿದ್ರೆ ಆಪತ್ತು – 2035ರ ವೇಳೆಗೆ ವಿಶ್ವದ ಅರ್ಧದಷ್ಟು ಜನರಿಗೆ ಅಧಿಕ ತೂಕ!
ಇಷ್ಟು ವರ್ಷಗಳಲ್ಲಿ ಒಂದು ಬಾರಿ ಕೂಡ ಹೆಂಡತಿಯೊಂದಿಗೆ ಹೋಳಿ ಹಬ್ಬದಲ್ಲಿ ಭಾಗವಹಿಸಲು ಆಗಲಿಲ್ಲ. ಈ ವರ್ಷ ಹೋಳಿ ಹಬ್ಬದಂದು ಪತ್ನಿ ತನ್ನ ತಾಯಿಯ ಮನೆಗೆ ಹೋಗಬೇಕೆಂದು ಒತ್ತಾಯಿಸುತ್ತಿದ್ದಾಳೆ. ಆದ್ದರಿಂದ 10 ದಿನ ದಯವಿಟ್ಟು ರಜೆ ನೀಡಿ ಎಂದು ಲೆಟರ್ನಲ್ಲಿ ಬರೆದುಕೊಂಡಿದ್ದಾರೆ. ಪೊಲೀಸರೊಬ್ಬರ ರಜೆಯ ಪತ್ರ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗ್ತಾ ಇದೆ. ಆದ್ರೆ ಪೊಲೀಸ್ ಅಧಿಕಾರಿಗೆ ರಜೆ ಸಿಕ್ಕಿದೆಯೋ ಇಲ್ಲವೋ ಎನ್ನುವುದು ಗೊತ್ತಾಗಿಲ್ಲ.
ಇದು ಪೊಲೀಸ್ ಅಧಿಕಾರಿಯೊಬ್ಬರ ಕಥೆಯಲ್ಲ. ಬಹುತೇಕ ಉದ್ಯೋಗಿಗಳ ಗೋಳೂ ಇದೇ ಆಗಿದೆ. ಯಾಕಂದ್ರೆ ರಜೆ ಕೇಳುವುದು ಮತ್ತು ಕೊಡುವುದು ಅಪರಾಧ ಎನ್ನುವಂತೆ ಕೆಲ ಕಂಪನಿಗಳ ಬಾಸ್ಗಳು ವರ್ತಿಸುತ್ತಾರೆ. ತಾವು ಮಾತ್ರ ಹೆಂಡ್ತಿ, ಮಕ್ಕಳು ಅಂತಾ ವಾರಗಟ್ಟಲೆ ಫಾರಿನ್ ಟೂರ್ ಹೋಗುತ್ತಾರೆ. ಆದ್ರೆ ಉದ್ಯೋಗಿಗಳು 2 ದಿನ ಫ್ಯಾಮಿಲಿ ಜೊತೆ ಊರಿಗೆ ಹೋಗುತ್ತೇನೆ ಅಂದ್ರೂ ಕೊಡೋಕೆ ಮುಖ ಗಂಟಿಕ್ಕಿಕೊಳ್ಳುತ್ತಾರೆ. ಬಾಸ್ಗಳ ಈ ಹುಚ್ಚಾಟದಿಂದ ಎಷ್ಟೋ ಸಲ ರಜೆ ಬೇಕಿದ್ರೂ ಕೆಲವರು ಕೇಳೋಕೆ ಹೋಗಲ್ಲ.