ಬಕ್ರೀದ್‌ ಕುರ್ಬಾನಿಗೆ ಮಾರಾಟವಾದ ಡೊನಾಲ್ಡ್ ಟ್ರಂಪ್! – 3 ಲಕ್ಷಕ್ಕೆ ಸೇಲ್!‌  

ಬಕ್ರೀದ್‌ ಕುರ್ಬಾನಿಗೆ ಮಾರಾಟವಾದ ಡೊನಾಲ್ಡ್ ಟ್ರಂಪ್! – 3 ಲಕ್ಷಕ್ಕೆ ಸೇಲ್!‌  

ಬಕ್ರೀದ್‌ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಹಬ್ಬದ ಆಚರಣೆಗೆ ಮುಸ್ಲಿಂ ಬಾಂಧವರು ತಯಾರಿ ನಡೆಸುತ್ತಿದ್ದಾರೆ. ಇದೀಗ ಬಕ್ರೀದ್‌ ಕುರ್ಬಾನಿಗೆ ಡೊನಾಲ್ಡ್ ಟ್ರಂಪ್ ಹೆಸರಿನ ಎಮ್ಮೆಯೊಂದು ದಾಖಲೆ ಮೊತ್ತಕ್ಕೆ ಸೇಲ್‌ ಆಗಿದೆ.

ಇದನ್ನೂ ಓದಿ: ಚಾಮುಂಡಿ ಮುಂದೆ ಕ್ಷಮೆ ಕೇಳಿದ ರಣವೀರ್ ಸಿಂಗ್ – ದೈವದ ಅವಹೇಳನಕ್ಕೆ ಬಾಲಿವುಡ್‌ ನಟನ ಪಶ್ಚಾತ್ತಾಪ

ಬಾಂಗ್ಲಾದೇಶದಲ್ಲಿ ಡೊನಾಲ್ಡ್ ಟ್ರಂಪ್ ಹೆಸರಿನ ಎಮ್ಮೆ ಭಾರಿ ಸುದ್ದಿಯಲ್ಲಿದೆ. ಹೊಂಬಣ್ಣದ ಕೂದಲನ್ನು ಹೊಂದಿರುವ ಅಪರೂಪದ ಅಲ್ಬಿನೋ ತಳಿಯ ಎಮ್ಮೆ ದಾಖಲೆ ಮೊತ್ತಕ್ಕೆ ಸೇಲ್‌ ಆಗಿದೆ. ಈದ್-ಉಲ್-ಅದಾಃ (ಬಕ್ರೀದ್‌) ಹಬ್ಬದ ಕುರ್ಬಾನಿಗಾಗಿ ಈ ಎಮ್ಮೆಯನ್ನು ಮಾರಾಟ ಮಾಡಲಾಗಿದ್ದು ಬರೋಬ್ಬರಿ 3 ಲಕ್ಷ ರೂಪಾಯಿಗೆ ಸೇಲ್‌ ಆಗಿದೆ.

ಬಾಂಗ್ಲಾದ ರಾಜಧಾನಿ ಢಾಕಾ ಸಮೀಪದ ನಾರಾಯಣಗಂಜ್ ಜಿಲ್ಲೆಯ ಫಾರಂ ಒಂದರಲ್ಲಿ ಈ ಎಮ್ಮೆಯನ್ನ ಬೆಳೆಸಲಾಗುತ್ತಿದೆ. ಸುಮಾರು 700 ಕೆಜಿ ತೂಕವಿರುವ ಈ ಎಮ್ಮೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರನ್ನ ಇಡಲಾಗಿದೆ. ಹೀಗಾಗಿ ಈ ಎಮ್ಮೆಗೆ ಸೆಲೆಬ್ರಿಟಿ ಕಳೆ ಬಂದಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೆಂಡಿಂಗ್‌ನಲ್ಲಿದೆ. ಈ ಎಮ್ಮೆಯು ಅಮೆರಿಕದ ಅಧ್ಯಕ್ಷರನ್ನೇ ಹೋಲುತ್ತದೆ ಎಂದು ಜನರು ಮುಗಿಬಿದ್ದು ಇದನ್ನು ನೋಡಲು ಬರುತ್ತಿದ್ದಾರೆ.

ಟ್ರಂಪ್ ಎನ್ನುವ ಹೆಸರು ಇಡಲು ಕಾರಣವೇನು ಎನ್ನುವುದನ್ನು ಎಮ್ಮೆಯ ಮಾಲೀಕ ಜಿಯಾ ಉದ್ಧಿನ್ ಮೈರ್ಡಾ ವಿವರಿಸಿದ್ದಾರೆ. ಎಮ್ಮೆಯ ಹಣೆ ಮತ್ತು ತಲೆಯ ಮೇಲ್ಬಾಗದಲ್ಲಿ ಹರಡಿರುವ ತಿಳಿ ಬಣ್ಣದ ವಿಶಿಷ್ಟವಾದ ಕೂದಲಿನ ಶೈಲಿ. ಇದು, ಅಮೆರಿಕದ ನಾಯಕರ ಸಿಗ್ನೇಚರ್ ಸ್ಟೈಲ್, ಹೇರ್ ಸ್ಟೈಲ್ ಅನ್ನು ನೆನಪಿಸುತ್ತದೆ. ಅದಕ್ಕಾಗಿ ಡೊನಾಲ್ಡ್ ಟ್ರಂಪ್ ಎಂದು ಹೆಸರಿಡಲಾಗಿದೆ ಎಂದು ಎಮ್ಮೆಯ ಮಾಲೀಕರು ಅಭಿಪ್ರಾಯ ಪಟ್ಟಿದ್ದಾರೆ. ಈ ಎಮ್ಮೆ ಸುಮಾರು 700 ಕೆಜಿ ತೂಕವಿದ್ದು, ಜೀವಂತ ತೂಕದ ಆಧಾರದ ಮೇಲೆ ಕಿಲೋಗೆ 550 ಟಾಕಾ ದರದಲ್ಲಿ (427.62 ರೂಪಾಯಿ) ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಬಕ್ರೀದ್ ಹಬ್ಬದ ಕುರ್ಬಾನಿಗಾಗಿ ಢಾಕಾದ ಜಿಂಜಿರಾ ಪ್ರದೇಶದ ಮೊಹಮ್ಮದ್ ಶರೋನ್ ಎಂಬ ವ್ಯಾಪಾರಿ ಒಟ್ಟು 3,30,000 ಟಾಕಾ (ಸುಮಾರು ಮೂರು ಲಕ್ಷ ರೂಪಾಯಿ )ಗೆ ಈ ಎಮ್ಮೆಯನ್ನು ಖರೀದಿಸಿದ್ದಾರೆ. ಆದರೆ ಎಮ್ಮೆ ವೈರಲ್ ಆದ ಕಾರಣ ಜನರ ಗೊಂದಲ ತಪ್ಪಿಸಲು ಅದನ್ನು ಸಾರ್ವಜನಿಕವಾಗಿ ತೋರಿಸಲು ಖರೀದಿದಾರರು ನಿರಾಕರಿಸಿದ್ದಾರೆ. ಈ ಎಮ್ಮೆ ವೈರಲ್ ಆದ ಬೆನ್ನಲ್ಲೇ ಫಾರ್ಮ್ ಮಾಲೀಕರು, ಇದು ಕೇವಲ ಪ್ರೀತಿಯಿಂದ ಇಟ್ಟ ಹೆಸರು. ಮನುಷ್ಯ ಮತ್ತು ಪ್ರಾಣಿಯನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Shwetha M

Leave a Reply

Your email address will not be published. Required fields are marked *