ಮರಿಯ ಕುತ್ತಿಗೆ ಹಿಡಿದಿತ್ತು ಸಿಂಹ – ಕಂದನನ್ನು ಕಾಪಾಡಿದ್ದೇಗೆ ಗೊತ್ತಾ ಜಿರಾಫೆ?

ಮರಿಯ ಕುತ್ತಿಗೆ ಹಿಡಿದಿತ್ತು ಸಿಂಹ – ಕಂದನನ್ನು ಕಾಪಾಡಿದ್ದೇಗೆ ಗೊತ್ತಾ ಜಿರಾಫೆ?

ಕಾಡಿನಲ್ಲಿ ಒಂದು ಪ್ರಾಣಿಯನ್ನು ಇನ್ನೊಂದು ಪ್ರಾಣಿ ಬೇಟೆಯಾಡಿ ತಿನ್ನುವುದು ಸಾಮಾನ್ಯ. ಇದು ಅವುಗಳ ಜೀವನ ಕ್ರಮ. ಚಿರತೆ, ಹುಲಿ, ಸಿಂಹ ಪ್ರಾಣಿಗಳನ್ನು ಬೇಟೆಯಾಡುವುದರಲ್ಲಿ ಎತ್ತಿದ ಕೈ. ಯಾವುದೇ ಬಲಿಷ್ಠ ಪ್ರಾಣಿಯಾಗಿದ್ದರು ಸಹ ಹೇಗಾದರೂ ಹೊಂಚುಹಾಕಿ ಬೇಟೆಯಾಡುತ್ತವೆ. ಹೀಗಾಗಿ ಎಲ್ಲಾ ಪ್ರಾಣಿಗಳು ಅವುಗಳ ಬಾಯಿಯಿಂದ ತಪ್ಪಿಸಿಕೊಳ್ಳಲು ತಮ್ಮ ಜೀವವನ್ನೇ ಕೈಯಲ್ಲಿ ಹಿಡಿದು ಓಡಾಡುತ್ತವೆ. ಅಲ್ಲದೇ ತಾಯಿ ಪ್ರಾಣಿಗಳು ತಮ್ಮ ಮರಿಗಳನ್ನು ಕ್ರೂರ ಪ್ರಾಣಿಗಳಿಂದ ರಕ್ಷಿಸಲು ಅವುಗಳು ಓಡಾಡುವ ಹಂತದವರೆಗೂ ಆದಷ್ಟು ಜಾಗರೂಕತೆಯಿಂದ ನೋಡಿಕೊಳ್ಳುತ್ತವೆ. ಇಂತಹ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುತ್ತವೆ. ಇದೀಗ ಇಂತಹದ್ದೇ ವಿಡಿಯೋ ಭಾರಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಪತ್ತೆಯಾಯ್ತು ಅಪರೂಪದ ಬಿಳಿ ಜಿಂಕೆ – ಕುತೂಹಲ ಮೂಡಿಸುತ್ತಿದೆ  ಅಲ್ಬಿನೋ ಜಿಂಕೆ ಫೋಟೋ

ವೈರಲ್ ಆಗಿರುವ ವಿಡಿಯೋದಲ್ಲಿ ಜಿರಾಫೆ ಮರಿಯೊಂದು ರಸ್ತೆ ಬದಿಯಲ್ಲಿ ಕುಳಿತಿರುತ್ತದೆ. ಈ ವೇಳೆ ಅಲ್ಲೇ ಇದ್ದ ಸಿಂಹ ಜಿರಾಫೆ ಮರಿಯನ್ನು ಕಂಡು ಸಿಕ್ಕಿದ್ದೇ ಚಾನ್ಸ್ ಅಂತಾ ಹಿಡಿದಿದೆ. ಇವತ್ತಿನ ಆಹಾರ ಸಿಕ್ಕೇ ಬಿಟ್ಟಿತು ಅಂತಾ ಜಿರಾಫೆ ಮರಿಯನ್ನು ತಿನ್ನುವಷ್ಟರಲ್ಲಿ ದೂರದಲ್ಲಿದ್ದ ತಾಯಿ ಜಿರಾಫೆ ಓಡಿ ಬಂದು ಸಿಂಹದ ಬಾಯಿಯಿಂದ ತನ್ನ ಮರಿಯನ್ನು ರಕ್ಷಿಸಿದೆ. ತಾಯಿ ಜಿರಾಫೆ ಓಡಿ ಬರುತ್ತಿರುವ ರಭಸಕ್ಕೆ ಸಿಂಹ ಹೆದರಿ ಓಡಿಹೋಗಿದೆ.

ತಾಯಿ ಜಿರಾಫೆ ಸ್ವಲ್ಪ ತಡವಾಗಿ ಬಂದಿದ್ದರೂ ಕೂಡ ಮರಿ ಜಿರಾಫೆ ಸಿಂಹದ ಬಾಯಿಗೆ ಆಹಾರವಾಗುತ್ತಿತ್ತು. ಮನುಷ್ಯರು ಮಾತ್ರವಲ್ಲ ಪ್ರಾಣಿಗಳು ಕೂಡ ತಮ್ಮ ಮರಿಗಳನ್ನು ಕಣ್ಣಿನಲ್ಲಿಟ್ಟು ಕಾಪಾಡುತ್ತವೆ ಅನ್ನೋದಕ್ಕೆ ಈ ವಿಡಿಯೋ ಉದಾಹರಣೆ. ಈ ವಿಡಿಯೋವನ್ನ ಅನಿಮಲ್ ವರ್ಲ್ಡ್ ಅನ್ನುವ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ ಈ ವಿಡಿಯೋ ನೆಟ್ಟಿಗರ ಮನಗೆದ್ದಿದೆ.

suddiyaana