ಮಣಿಪುರದಲ್ಲಿ ಉಗ್ರರ ಅಟ್ಟಹಾಸ – ತಂದೆ, ಮಗ ಸೇರಿ ಮೂವರ ಹತ್ಯೆ

ಮಣಿಪುರದಲ್ಲಿ ಉಗ್ರರ ಅಟ್ಟಹಾಸ – ತಂದೆ, ಮಗ ಸೇರಿ ಮೂವರ ಹತ್ಯೆ

ಇಂಫಾಲ್: ಕಳೆದ 3 ತಿಂಗಳಿನಿಂದ ನಡೆಯುತ್ತಿರುವ ಮಣಿಪುರ ಹಿಂಸಾಚಾರ ಇನ್ನೇನು ತಣ್ಣಗಾಯಿತು ಅಂದುಕೊಳ್ಳುತ್ತಿರುವಾಗಲೇ ಮತ್ತೆ ಗಲಭೆ ಎದ್ದಿದೆ. ಶುಕ್ರವಾರ ತಡರಾತ್ರಿ ಈಶಾನ್ಯ ರಾಜ್ಯ ಮಣಿಪುರದಲ್ಲಿ ಮತ್ತೆ ಹೊಸ ಹಿಂಸಾಚಾರ ಆರಂಭವಾಗಿದೆ. ತಂದೆ-ಮಗ ಸೇರಿದಂತೆ ಮೂವರನ್ನು ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯದಲ್ಲಿ ಪರಿಸ್ಥಿತಿ ಸ್ವಲ್ಪ ಶಾಂತವಾಗಿದೆ ಎಂದು ತಿಳಿದ ನಂತರ ಶುಕ್ರವಾರ ಕ್ವಾಕ್ಟಾದಲ್ಲಿನ ನಿವಾಸಗಳು ತಮ್ಮ ತಮ್ಮ ಮನೆಗೆ ತೆರಳುತ್ತಿದ್ದರು. ಈ  ವೇಳೆ ಉಗ್ರರು ದಾಳಿ ನಡೆಸಿದ್ದಾರೆ. ಶುಕ್ರವಾರ ತಡರಾತ್ರಿ ಮೂವರು ಮಲಗಿದ್ದಾಗ ಗುಂಡೇಟಿನಿಂದ ಹೊಡೆದು ಕತ್ತಿಯಿಂದ ಕೊಚ್ಚಿ ಉಗ್ರರು ಹತ್ಯೆಗೈದಿದ್ದಾರೆ. ದುಷ್ಕರ್ಮಿಗಳು ಚುರಾಚಂದ್‌ಪುರದಿಂದ ಬಂದವರು ಎಂಬ ಮಾಹಿತಿ ಸಿಕ್ಕಿದೆ. ಕೊಲೆಯಾದ ಮೂವರು ಪರಿಹಾರ ಶಿಬಿರದಲ್ಲಿ ಇರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತರಾಖಂಡ್‌ನಲ್ಲಿ ಭೂಕುಸಿತಕ್ಕೆ 4 ಮಂದಿ ಸಾವು, 16 ಜನ ನಾಪತ್ತೆ – ಕೇದಾರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

ಘಟನೆಯ ನಂತರ ಕ್ವಾಕ್ಟಾದಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು, ಉದ್ರಿಕ್ತ ಗುಂಪೊಂದು ಚುರಾಚಂದ್‌ಪುರದ ಕಡೆಗೆ ಹೋಗಲು ಬಯಸಿತು ಆದರೆ ಭದ್ರತಾ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಫೌಗಕ್ಚಾವೊ ಮತ್ತು ಕ್ವಾಕ್ಟಾದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾಜ್ಯ ಪಡೆಗಳು ಮತ್ತು ಉಗ್ರಗಾಮಿಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆಯುತ್ತಿದೆ ಪೊಲೀಸರು ಹೇಳಿದ್ದಾರೆ.

ಆಗಸ್ಟ್ 4 ರಂದು, ಮಣಿಪುರ ಪೊಲೀಸರು ಜಂಟಿ ಭದ್ರತಾ ಪಡೆ ಕೌಟ್ರುಕ್ ಬೆಟ್ಟದ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಏಳು ಅಕ್ರಮ ಬಂಕರ್‌ಗಳನ್ನು ನಾಶಪಡಿಸಿದ್ದಾರೆ ಎಂದು ಹೇಳಿದರು. ಮಣಿಪುರದ 27 ವಿಧಾನಸಭಾ ಕ್ಷೇತ್ರಗಳ ಸಮನ್ವಯ ಸಮಿತಿಯು ಇಂದು ಕರೆದಿರುವ 24 ಗಂಟೆಗಳ ಸಾರ್ವತ್ರಿಕ ಮುಷ್ಕರವು ಇಂಫಾಲ್ ಕಣಿವೆಯಲ್ಲಿ ಸಾಮಾನ್ಯ ಜೀವನವನ್ನು ಸ್ಥಗಿತಗೊಳಿಸಿದೆ. ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ಮಾರುಕಟ್ಟೆಗಳು ಮತ್ತು ವ್ಯಾಪಾರ ಸಂಸ್ಥೆಗಳು ಮುಚ್ಚಲ್ಪಟ್ಟಿವೆ ಪೊಲೀಸರು ತಿಳಿಸಿದ್ದಾರೆ.

suddiyaana