ನೈಜೀರಿಯಾದಲ್ಲಿ ಭುಗಿಲೆದ್ದ ಹಿಂಸಾಚಾರ – 100 ಹೆಚ್ಚು ಜನರ ಭೀಕರ ಹತ್ಯೆ!

ನೈಜೀರಿಯಾದಲ್ಲಿ ಭುಗಿಲೆದ್ದ ಹಿಂಸಾಚಾರ – 100 ಹೆಚ್ಚು ಜನರ ಭೀಕರ ಹತ್ಯೆ!

ನೈಜೀರಿಯಾದಲ್ಲಿ ಧಾರ್ಮಿಕ ಮತ್ತು ಜನಾಂಗೀಯ ಹಿಂಸಾಚಾರ ದಿನದಿಂದ ದಿನಕ್ಕೆ ಭುಗಿಲೆದ್ದಿದೆ. ಭೀಕರ ಹಿಂಸಾಚಾರಕ್ಕೆ ಸಾಕ್ಷಿಯಾಗುತ್ತಿದೆ. ಕಳೆದ ಎರಡು ದಿನಗಳ ಹಿಂದೆ ಸಂಭವಿಸಿದ ದಾಳಿಯಲ್ಲಿ 113ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಹೌದು, ಮಧ್ಯ ನೈಜೀರಿಯಾದ ಎಂಬಲ್ಲಿ ನಿರಂತರವಾಗಿ ಧಾರ್ಮಿಕ ಮತ್ತು ಜನಾಂಗೀಯ ಸಂಘರ್ಷ ಮುಂದುವರಿದಿದೆ. ಕೃಷಿ ಭೂಮಿ ವಿಸ್ತರಣೆ ಮುಸ್ಲಿಂ ಕುರುಬರು ಮತ್ತು ಕ್ರಿಶ್ಚಿಯನ್ ರೈತರ ನಡುವೆ ಉದ್ವಿಗ್ನತೆಗೆ ಮೂಲ ಕಾರಣವಾಗಿದೆ. ಕಳೆದ ಮೇ ತಿಂಗಳಿನಲ್ಲಿ ನಡೆದ ಹಿಂಸಾಚಾರದಲ್ಲಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಇದೀಗ ಭಾನುವಾರ ಮತ್ತೆ ಮಧ್ಯ ನೈಜೀರಿಯಾದಾದ್ಯಂತ ಸಶಸ್ತ್ರ ಗುಂಪುಗಳು ಪಟ್ಟಣಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಸರಣಿ ದಾಳಿಯಲ್ಲಿ 113 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ.

ಇದನ್ನೂ ಓದಿ: 4 ದಿನಗಳ ನಂತರ 276 ಭಾರತೀಯರು ಸ್ವದೇಶಕ್ಕೆ ವಾಪಸ್, 23 ಮಂದಿ ಫ್ರಾನ್ಸ್ ನಲ್ಲಿ ಉಳಿಯಲು ನಿರ್ಧಾರ

ಶನಿವಾರ ಹಾಗೂ ಭಾನುವಾರ ಸಶಸ್ತ್ರ ಗುಂಪುಗಳು ಇಲ್ಲಿನ ಕನಿಷ್ಠ 20 ಸಮುದಾಯಗಳ ಮೇಲೆ ದಾಳಿ ಮಾಡಿದೆ. ದಾಳಿಯಲ್ಲಿ 16 ಜನರು ಮೃತಪಟ್ಟಿದ್ದಾರೆ ಎಂದು ನೈಜೀರಿಯಾ ಸೇನೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಸಶಸ್ತ್ರ ಗುಂಪುಗಳು ನಡೆಸಿದ ದಾಳಿಯಲ್ಲಿ ಈವರೆಗೆ ಒಟ್ಟು 113 ಜನರು ಮೃತಪಟ್ಟು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

‘ಸರ್ಕಾರ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಮುಗ್ಧ ನಾಗರಿಕರ ವಿರುದ್ಧ ನಡೆಯುತ್ತಿರುವ ದಾಳಿಯನ್ನು ನಿಲ್ಲಿಸಿ’ ಎಂದು ರಾಜ್ಯ ಗವರ್ನರ್‌ ವಕ್ತಾರ ಗ್ಯಾಂಗ್ ಬೆರೆ ಹೇಳಿದ್ದಾರೆ.

Shwetha M