ಬೂದಿ ಮುಚ್ಚಿದ ಕೆಂಡದಂತಾದ ಫ್ರಾನ್ಸ್ –  ಸಂಘರ್ಷ ನಿಲ್ಲಿಸುವಂತೆ ಗಲಭೆಕೋರರಿಗೆ ಮನವಿ

ಬೂದಿ ಮುಚ್ಚಿದ ಕೆಂಡದಂತಾದ ಫ್ರಾನ್ಸ್ –  ಸಂಘರ್ಷ ನಿಲ್ಲಿಸುವಂತೆ ಗಲಭೆಕೋರರಿಗೆ ಮನವಿ

17 ವರ್ಷದ ಯುವಕ ನಹೆಲ್ ಹತ್ಯೆಯಿಂದ ಫ್ರಾನ್ಸ್ ದೇಶ ಬೂದಿ ಮುಚ್ಚಿದ ಕೆಂಡದಂತಿದೆ. ಭಾನುವಾರ ಕೂಡ ದೇಶಾದ್ಯಂತ ಹಿಂಸಾಚಾರ ನಡೆದಿದ್ದು 160ಕ್ಕೂ ಹೆಚ್ಚು ಜನರನ್ನ ಬಂಧಿಸಲಾಗಿದೆ.

ದಂಗೆ ನಿಲ್ಲಿಸುವಂತೆ ಫ್ರಾನ್ಸ್ ಸರ್ಕಾರದ ಜೊತೆ ಮೃತ ನಹೆಲ್ ತಾಯಿ ಹಾಗೂ ಅಜ್ಜಿ ಕೂಡ ಮನವಿ ಮಾಡಿದ್ದಾರೆ. ಹೀಗಾಗಿ ಸೋಮವಾರ ಸ್ವಲ್ಪ ಮಟ್ಟಿಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಫ್ರಾನ್ಸ್‌ನಲ್ಲಿನ ಗಲಭೆಯಿಂದ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಜರ್ಮನಿ ಪ್ರವಾಸವನ್ನ ಮುಂದೂಡಿದ್ದಾರೆ.

ಇದನ್ನೂ ಓದಿ: ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ – ವಿಸ್ತೃತ ವರದಿ ಕೇಳಿದ ಸುಪ್ರೀಂ ಕೋರ್ಟ್

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮಂಗಳವಾರ 220 ನಗರಗಳ ಮೇಯರ್‌ಗಳನ್ನು ಭೇಟಿ ಮಾಡಿ ಪರಿಸ್ಥಿತಿ ಕುರಿತು ಚರ್ಚೆ ನಡೆಸಲಿದ್ದಾರೆ. ಆದರೆ ಫ್ರಾನ್ಸ್ ನಲ್ಲಿ ನಹೆಲ್ ಹತ್ಯೆ ಪ್ರಕರಣ ಜನಾಂಗೀಯ ರೂಪ ಪಡೆದಿದ್ದು ನೆರೆಯ ದೇಶಗಳಾದ ಸ್ವಿಟ್ಜರ್ಲೆಂಡ್ ಮತ್ತು ಬೆಲ್ಜಿಯಂನಲ್ಲಿ ಕೂಡ ಪ್ರತಿಭಟನೆಗಳು ನಡೆದಿವೆ. ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದ್ದಕ್ಕೆ ಫ್ರಾನ್ಸ್ ನಲ್ಲಿ 17 ವರ್ಷದ ಯುವಕ ನಹೆಲ್ ಮೇಲೆ ಪೊಲೀಸರು ಗುಂಡು ಹಾರಿಸಿ ಕೊಲೆ ಮಾಡಿದ್ದರು.

suddiyaana