ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ – ನನ್ನ ರಾಜ್ಯವನ್ನು ಉಳಿಸಿ ಎಂದು ಪ್ರಧಾನಿಗೆ ಮೇರಿ ಕೋಮ್ ಮನವಿ

ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ – ನನ್ನ ರಾಜ್ಯವನ್ನು ಉಳಿಸಿ ಎಂದು ಪ್ರಧಾನಿಗೆ ಮೇರಿ ಕೋಮ್ ಮನವಿ

ಅತ್ಯಂತ ಸೂಕ್ಷ್ಮ ರಾಜ್ಯವಾಗಿರುವ ಮಣಿಪುರದಲ್ಲಿ ಭಾರಿ ಹಿಂಸಾಚಾರ ನಡೆದಿದೆ. ಮೆಯಿಟಿ ಜನಾಂಗವನ್ನ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಇಂಪಾಲ್​ನಲ್ಲಿ ಬುಡಕಟ್ಟು ಸಮುದಾಯ ಒಗ್ಗಟ್ಟಿನ ಮೆರವಣಿಗೆ ಕೈಗೊಂಡಿತ್ತು. ಶಾಂತಿಯುತವಾಗಿ ನಡೆಯಬೇಕಿದ್ದ ಮೆರವಣಿಗೆ ಹಿಂಸಾಚಾರದ ಸ್ವರೂಪ ಪಡೆದಿದ್ದು, ಉದ್ರಿಕ್ತರು ಕಂಡಕಂಡಲ್ಲಿ ಬೆಂಕಿ ಹಚ್ಚಿದ್ದಾರೆ. ಇದೀಗ ಹಿಂಸಾಚಾರ ಪೀಡಿತ ಇಂಪಾಲ್​ ಜಿಲ್ಲೆಯಲ್ಲಿ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ.

ಇದನ್ನೂ ಓದಿ:  ಮೇ 6 ರಂದು ಅಪ್ಪಳಿಸಲಿದೆ ವರ್ಷದ ಮೊದಲ ಚಂಡಮಾರುತ – ಎಲ್ಲೆಲ್ಲಿ ಸೈಕ್ಲೋನ್ ಎಫೆಕ್ಟ್?

ಮಣಿಪುರದಾದ್ಯಂತ ಇಂಟರ್​​ನೆಟ್ ಸಂಪರ್ಕ ಬಂದ್ ಮಾಡಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಕರ್ಫ್ಯೂ ಹೇರಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸುಮಾರು ನಾಲ್ಕು ಸಾವಿರ ಮಂದಿಯನ್ನ ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಈ ನಡುವೆ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್, ರಾಜ್ಯ ಮತ್ತು ಕೇಂದ್ರವು ಒಟ್ಟಾಗಿ ಕೆಲಸ ಮಾಡುವಂತೆ ಮನವಿ ಮಾಡಿದ್ದಾರೆ. ಸಮಾಧಾನ ಮತ್ತು ಭದ್ರತೆಯನ್ನು ಕಾಪಾಡಲು ಮತ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಕೇಳುತ್ತೇನೆ. ಇದು ನನ್ನ ವಿನಂತಿ ಎಂದು ಮೇರಿ ಕೋಮ್ ಟ್ವೀಟ್ ಮಾಡಿದ್ದಾರೆ. ನಾನು ಎಲ್ಲ ಜನರನ್ನು ಗೌರವಿಸುತ್ತೇನೆ, ನಾವೆಲ್ಲರೂ ಶಾಂತಿಯಿಂದ ಬದುಕಲು ಸಾಧ್ಯವಿಲ್ಲವೇ. ಇದು ನನ್ನ ಪ್ರಶ್ನೆ, ನಾವು ಶಾಂತಿಯಿಂದ ಬದುಕಿದರೆ ನಮಗೆಲ್ಲರಿಗೂ ಒಳಿತು. ಈ ಹಿಂಸಾಚಾರದಲ್ಲಿ ಕೆಲವರು ಕುಟುಂಬ ಸದಸ್ಯರನ್ನು ಕಳೆದುಕೊಂಡಿರುವುದು ದುರದೃಷ್ಟಕರ. ಆದಷ್ಟು ಬೇಗ ಇದು ಕೊನೆಗೊಳ್ಳಲಿ, ಎಲ್ಲವೂ ಸರಿ ಹೋಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಬಾಕ್ಸರ್ ಮೇರಿಕೋಮ್ ಹೇಳಿದ್ದಾರೆ.

ಈ ನಡುವೆ, ಕೇಂದ್ರ ಗೃಹ ಸಚಿವ ಅಮಿತ್​​ ಶಾ ಕರ್ನಾಟಕದಲ್ಲಿ ಪ್ರಚಾರ ಮೊಟಕುಗೊಳಿಸಿ ದೆಹಲಿಗೆ ತೆರಳಿದ್ದಾರೆ. ಪಂಜಾಬ್​ನಿಂದ ಕಲಬುರಗಿಗೆ ಬರುತ್ತಿದ್ದ ಅಮಿತ್ ಶಾ, ಮಾರ್ಗ ಮಧ್ಯದಲ್ಲೇ ನಿರ್ಧಾರ ಬದಲಾಯಿಸಿ ದೆಹಲಿಗೆ ತೆರಳಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ, ಜೇವರ್ಗಿಯಲ್ಲಿ ಗುರುವಾರ ಅಮಿತ್ ಶಾ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಮಣಿಪುರದಲ್ಲಿ ಪರಿಸ್ಥಿತಿ ಹದಗೆಟ್ಟಿರುವ ಕಾರಣ ತುರ್ತಾಗಿ ಅವರು ದೆಹಲಿಗೆ ತೆರಳಿದ್ದಾರೆ.

suddiyaana