ನಿಜ ಜೀವನದಲ್ಲೂ ವಿಲನ್ ರೀತಿ ವರ್ತಿಸಿ ಸಿಕ್ಕಿಬಿದ್ದ ವಿನಾಯಗನ್ – ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದ್ದಕ್ಕೆ ‘ಜೈಲರ್’ ನಟ ಅರೆಸ್ಟ್

ನಿಜ ಜೀವನದಲ್ಲೂ ವಿಲನ್ ರೀತಿ ವರ್ತಿಸಿ ಸಿಕ್ಕಿಬಿದ್ದ ವಿನಾಯಗನ್ – ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದ್ದಕ್ಕೆ ‘ಜೈಲರ್’ ನಟ ಅರೆಸ್ಟ್

ಸೂಪರ್ ಸ್ಟಾರ್ ರಜನೀಕಾಂತ್ ನಟನೆಯ ‘ಜೈಲರ್’ ಸಿನಿಮಾದ ವಿಲನ್ ವಿನಾಯಗನ್ ಪೊಲೀಸ್ ಠಾಣೆಯಲ್ಲಿ ವಿಲನ್ ರೀತಿ ವರ್ತನೆ ತೋರಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾರೆ. ನಿಜ ಜೀವನದಲ್ಲಿಯೂ ವಿಲನ್ ಪ್ರವೃತ್ತಿ ತೋರಿಸಿ ಪೊಲೀಸರ ಅತಿಥಿಯಾಗಿದ್ದಾರೆ. ಕುಡಿದು ಪೊಲೀಸ್ ಠಾಣೆಗೆ ಬಂದಿದ್ದು ಮಾತ್ರವಲ್ಲದೆ ಠಾಣೆಯಲ್ಲಿ ದುರ್ವರ್ತನೆ ತೋರಿರುವ ವಿನಾಯಗನ್ ಅನ್ನು ಕೇರಳದ ಉತ್ತರ ಎರ್ನಾಕುಲಂ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ವರ್ತೂರು ಸಂತೋಷ್​ – ಹಳ್ಳಿಕಾರ್‌ ಒಡೆಯನಿಗೆ ಕೈದಿ ನಂಬರ್ ನೀಡಿದ ಅಧಿಕಾರಿಗಳು!  

ಜೈಲರ್ ಸಿನಿಮಾದಲ್ಲಿ ವಿಲನ್ ರೋಲ್ ಮಾಡಿರುವ ವಿನಾಯಗನ್ ಈಗ ಪೊಲೀಸರ ಅತಿಥಿಯಾಗಿದ್ದಾರೆ. ವಿನಾಯಗನ್ ವಾಸವಿರುವ ಅಪಾರ್ಟ್ಮೆಂಟ್‌ನ ನಿವಾಸಿಗಳು ಅತಿಯಾದ ಶಬ್ದ, ಲೇಟ್ ನೈಟ್ ಪಾರ್ಟಿಗಳು ಮಾಡುತ್ತಿದ್ದ ವಿನಾಯಗನ್ ವಿರುದ್ಧ ದೂರು ನೀಡಿದ್ದರು. ಇದೇ ಕಾರಣಕ್ಕೆ ವಿನಾಯಗನ್ ಅವರಿಗೆ ಪೊಲೀಸರು ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದರು. ಇದರಿಂದ ಸಿಟ್ಟಿಗೆದ್ದ ನಟ ಕುಡಿದ ಮತ್ತಿನಲ್ಲಿ ಕೇರಳದ ಉತ್ತರ ಎರ್ನಾಕುಲಂ ಪೊಲೀಸ್ ಠಾಣೆ ಪ್ರವೇಶಿಸಿದ್ದಾರೆ. ಠಾಣೆಯಲ್ಲಿ ಕೆಟ್ಟದಾಗಿ ವರ್ತಿಸಲು ಪ್ರಾರಂಭಿಸಿದ್ದಾರೆ. ಹಾಗೂ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಏಕವಚನದಲ್ಲಿ ಮಾತನಾಡಿಸಿದ್ದಾರೆ. ಅಷ್ಟೇ ಅಲ್ಲ, ಅವಾಚ್ಯ ಶಬ್ದಗಳಿಂದಲೂ ನಿಂದಿಸಿದರು ಎಂದು ಪೊಲೀಸರು ಆರೋಪಿಸಿದ್ದು, ವಿನಾಯಗನ್ ವಿರುದ್ಧ ದೂರು ದಾಖಲಿಸಿಕೊಂಡು ಬಂಧಿಸಿದ್ದಾರೆ. ಪೊಲೀಸರು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆರೋಗ್ಯ ತಪಾಸಣೆ, ರಕ್ತ ಪರೀಕ್ಷೆಗಳನ್ನು ಮಾಡಿಸಿದ್ದಾರೆ. ಸಾಧಾರಣ ಟಿ-ಶರ್ಟ್-ನಿಕ್ಕರ್ ಧರಿಸಿದ ವಿನಾಯಗನ್ ಅವರನ್ನು ಪೊಲೀಸ್ ಠಾಣೆಯ ಮೂಲೆಯೊಂದರಲ್ಲಿ ನಿಲ್ಲಿಸಿರುವ ಚಿತ್ರ ಹಾಗೂ ವಿನಾಯಗನ್ ಅವರನ್ನು ಆಟೋನಲ್ಲಿ ಕರೆದುಕೊಂಡು ಹೋಗುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿನಾಯಗನ್ ಅವರು ಸೈಡ್ ಡ್ಯಾನ್ಸರ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಈಗ ಪ್ರಮುಖ ವಿಲನ್ ಪಾತ್ರಧಾರಿಗಳಲ್ಲಿ ಒಬ್ಬರಾಗಿದ್ದಾರೆ. ದುಲ್ಕರ್ ಸಲ್ಮಾನ್ ಜೊತೆಗೆ ನಟಿಸಿದ್ದ ‘ಕಪಾಟಿಪದಂ’ ಸಿನಿಮಾ ವಿನಾಯಗನ್‌ಗೆ ದೊಡ್ಡ ಜನಪ್ರಿಯತೆ ಗಳಿಸಿಕೊಟ್ಟಿತು. ಅದಾದ ಬಳಿಕ ಹಲವು ಸಿನಿಮಾಗಳಲ್ಲಿ ವಿನಾಯಗನ್ ವಿಲನ್ ಆಗಿ ನಟಿಸಿದ್ದರು. ಇತ್ತೀಚೆಗೆ ‘ಜೈಲರ್’ ಸಿನಿಮಾದ ವರ್ಮಾ ಪಾತ್ರದಲ್ಲಿ ಕಾಣಿಸಿಕೊಂಡ ವಿನಾಯಗನ್ ಜನಮೆಚ್ಚುಗಗೆ ಪಾತ್ರರಾಗಿದ್ದರು. ಬಿಡುಗಡೆಗೆ ಸಜ್ಜಾಗಿರುವ ಚಿಯಾನ್ ವಿಕ್ರಂ ನಟಿಸಿರುವ ‘ಧ್ರುವ ನಚ್ಚತ್ತಿರಂ’ ಸಿನಿಮಾದಲ್ಲಿಯೂ ವಿನಾಯಗನ್ ನಟಿಸಿದ್ದಾರೆ. ಮಲಯಾಳಂನಲ್ಲಿ ‘ಕರಿಂತಾಂಧಾನ್’ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

Sulekha