ಚುನಾವಣೆಗೆ ನಿಂತ್ರೂ ಧಾರವಾಡಕ್ಕೆ ಕಾಲಿಡುವಂತಿಲ್ಲ – ವಿನಯ್ ಕುಲಕರ್ಣಿ ಮುಂದಿರುವ ದಾರಿಗಳೇನು?

ಚುನಾವಣೆಗೆ ನಿಂತ್ರೂ ಧಾರವಾಡಕ್ಕೆ ಕಾಲಿಡುವಂತಿಲ್ಲ – ವಿನಯ್ ಕುಲಕರ್ಣಿ ಮುಂದಿರುವ ದಾರಿಗಳೇನು?

ಮಾಜಿ ಸಚಿವ, ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿಗೆ ಈಗ ಟೆನ್ಷನ್ ಶುರುವಾಗಿದೆ. ಯಾಕಂದ್ರೆ ಕುಲಕರ್ಣಿ ಧಾರವಾಡ ಭೇಟಿಗೆ ಕರ್ನಾಟಕ ಹೈಕೋರ್ಟ್‌ ಒಪ್ಪಿಗೆ ನೀಡಿಲ್ಲ. ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ 15ನೇ ಆರೋಪಿಯಾಗಿದ್ದಾರೆ. ಪ್ರಕರಣದ ತನಿಖೆ ಕೈಗೊಂಡಿದ್ದ ಸಿಬಿಐ ಅವರನ್ನು ಬಂಧಿಸಿತ್ತು.

2021ರ ಆಗಸ್ಟ್ 11ರಂದು ಜಾಮೀನು ಮಂಜೂರು ಮಾಡಿದ್ದ ಸುಪ್ರೀಂಕೋರ್ಟ್ ಧಾರವಾಡಕ್ಕೆ ಭೇಟಿ ನೀಡದಂತೆ ಷರತ್ತು ಹಾಕಿತ್ತು. ಇಷ್ಟಾದ್ರೂ ವಿನಯ್ ಕುಲಕರ್ಣಿಗೆ ಕಾಂಗ್ರೆಸ್ ಧಾರವಾಡ ಕ್ಷೇತ್ರದ ಟಿಕೆಟ್ ನೀಡಿದೆ.. ಹೀಗಾಗಿ ಧಾರವಾಡಕ್ಕೆ 50 ದಿನಗಳ ಕಾಲ ಭೇಟಿ ನೀಡಲು ಅವಕಾಶ ನೀಡಬೇಕು ಎಂದು ಎರಡು ಅರ್ಜಿಗಳನ್ನು ಹೈಕೋರ್ಟ್‌ಗೆ ಸಲ್ಲಿಕೆ ಮಾಡಿದ್ದರು. ಅರ್ಜಿಯ ವಿಚಾರಣೆ ಸಮಯದಲ್ಲಿ ಸಿಬಿಐ ಪರವಾಗಿ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡನೆ ಮಾಡಿದರು. ನ್ಯಾಯಮೂರ್ತಿಗಳು ವಿನಯ್ ಕುಲಕರ್ಣಿಗೆ ಧಾರವಾಡ ಪ್ರವೇಶಕ್ಕೆ ಅನುಮತಿ ಇಲ್ಲ. ಸುಪ್ರೀಂಕೋರ್ಟ್‌ ಸಹ ಜಾಮೀನು ಷರತ್ತು ಸಡಿಸಿಲಿಲ್ಲ. ಆದರೂ ಏಕೆ ಕಾಂಗ್ರೆಸ್ ಪಕ್ಷ ಅವರಿಗೆ ಟಿಕೆಟ್ ನೀಡಿದೆ? ಎಂದು ವಕೀಲರನ್ನು ಪ್ರಶ್ನೆ ಮಾಡಿದೆ.. ಜೊತೆಗೆ ಅರ್ಜಿ ವಿಚಾರಣೆ ನಡೆಸಿ ಧಾರವಾಡ ಭೇಟಿಗೆ ಅನುಮತಿ ನಿರಾಕರಿಸಿದೆ. ಹೀಗಾಗಿ ವಿನಯ್ ಕುಲಕರ್ಣಿ ಧಾರವಾಡಕ್ಕೆ ಹೇಗೆ ಭೇಟಿ ನೀಡ್ತಾರೆ, ಪ್ರಚಾರ ಹೇಗೆ ಮಾಡ್ತಾರೆ ಅನ್ನೋದೇ ಈಗ ಕುತೂಹಲವಾಗಿದೆ.

 

suddiyaana