ನದಿಯ ಮರಳನ್ನ ಜರಡಿ ಹಿಡಿದರೆ ಸಿಗುತ್ತೆ ಚಿನ್ನ – ಭಾರತದಲ್ಲಿರುವ ಗೋಲ್ಡನ್ ರಿವರ್ ಬಗ್ಗೆ ನಿಮಗೆಷ್ಟು ಗೊತ್ತು..? 

ನದಿಯ ಮರಳನ್ನ ಜರಡಿ ಹಿಡಿದರೆ ಸಿಗುತ್ತೆ ಚಿನ್ನ – ಭಾರತದಲ್ಲಿರುವ ಗೋಲ್ಡನ್ ರಿವರ್ ಬಗ್ಗೆ ನಿಮಗೆಷ್ಟು ಗೊತ್ತು..? 

ನದಿಗಳೇ ರೈತರ ಬದುಕಿಗೆ ಆಧಾರ. ಲಕ್ಷಾಂತರ ಅನ್ನದಾತರು ನದಿಗಳಿಂದಲೇ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ನಮ್ಮ ಭಾರತದಲ್ಲೂ ಕೂಡ ಅನೇಕ ನದಿಗಳಿವೆ. ಹಿಂದೂಗಳು ನದಿಗಳನ್ನು ಅತ್ಯಂತ ಪವಿತ್ರ ಎಂದು ಪೂಜಿಸುತ್ತಾರೆ. ಪ್ರಕೃತಿಯ ಸೌಂದರ್ಯವನ್ನು ಹೆಚ್ಚಿಸಲು ನದಿಗಳು ಕೂಡ ತನ್ನದೇ ಆದ ಸ್ಥಾನವನ್ನು ಹೊಂದಿದೆ. ನಮ್ಮ ಭಾರತದಲ್ಲಿ ಗೋಲ್ಡನ್‌ ರಿವರ್‌ ಎಂದೇ ಕರೆಯಲಾಗುವ ಒಂದು ನದಿ ಇದೆ. ಈ ನದಿಯಲ್ಲಿ ಚಿನ್ನ ದೊರೆಯುತ್ತದೆ ಎನ್ನಲಾಗುತ್ತದೆ. ಜಾರ್ಖಂಡ್‌ನ ಸುವರ್ಣರೇಖಾ ನದಿ ಇದಾಗಿದ್ದು, ಇದನ್ನು ಗೋಲ್ಡನ್ ರಿವರ್ ಎಂದು ಕರೆಯಲಾಗುತ್ತದೆ.

 ಇದನ್ನೂ ಓದಿ : ಅಂಗನವಾಡಿ ಕೇಂದ್ರಕ್ಕೆ ಕೆಲಸಕ್ಕೆ ತೆರಳಿದ್ದ ಪತ್ನಿ ಮನೆಗೆ ಮರಳಲೇ ಇಲ್ಲ – ಪತಿ ಹೋಗಿ ನೋಡಿದಾಗ ಕಂಡಿದ್ದು ಶಾಕಿಂಗ್ ದೃಶ್ಯ

ಭಾರತದ ಜಾರ್ಖಂಡ್ ರಾಜ್ಯದಲ್ಲಿ ಈ ಸುವರ್ಣರೇಖಾ ನದಿ ಇದೆ. ಅತ್ಯಂತ ನಿಗೂಢವಾದ ಸ್ಥಳಗಳಲ್ಲಿ ಈ ನದಿಯು ಕೂಡ ಒಂದು. ಈ ನದಿಯು ಅನೇಕ ಬಗ್ಗೆಯ ಸಂಶೋಧನೆಗಳಿಗೆ ಒಳಗಾಗಿದೆ. ರಾಂಚಿಯಿಂದ ಕೇವಲ 16 ಕಿಮೀ ದೂರದಲ್ಲಿರುವ ಚೋಟಾ ನಾಗ್ಪುರದ ಪ್ರಸ್ಥಭೂಮಿಯಲ್ಲಿ ಹುಟ್ಟಿ ಬಂಗಾಳಕೊಲ್ಲಿಯನ್ನು ಸೇರುತ್ತದೆ. ನದಿಯ ಉದ್ದವು ಸರಿಸುಮಾರು 474 ಕಿ.ಮೀ ಆಗಿದೆ. ಜನರು ಈ ನದಿಯ ಮರಳನ್ನು ಜರಡಿ ಹಿಡಿಯುತ್ತಿರುತ್ತಾರೆ. ಕಾರಣ, ಹೀಗೆ ಮಾಡುವುದರಿಂದ ಅವರು ಚಿನ್ನ ಪಡೆಯುತ್ತಾರೆ.

ಕೆಲವು ಭೂವಿಜ್ಞಾನಿಗಳು ನದಿಯಲ್ಲಿ ಚಿನ್ನವಿಲ್ಲ ಎಂದು ಹೇಳುತ್ತಾರೆ. ಆದರೆ ಜನರು ಚಿನ್ನವೆಂದು ಪರಿಗಣಿಸುವ ಕಲ್ಲುಗಳಿಂದ ಬರುವ ವಸ್ತುಗಳು. ಇದುವರೆಗೆ ಈ ನದಿಗೆ ಸಂಬಂಧಿಸಿದ ಯಾವುದೇ ಪುರಾವೆಗಳು ಬಹಿರಂಗವಾಗಿಲ್ಲ. ಗೋಲ್ಡನ್‌ ರಿವರ್, ಸುವರ್ಣರೇಖಾ ನದಿ, ಚಿನ್ನದ ನದಿ ಎಂಬ ಅನೇಕ ಹೆಸರುಗಳಿಂದ ಕರೆಸಿಕೊಳ್ಳುವ ಈ ನದಿಯು ಪೂರ್ವಕ್ಕೆ ಹರಿಯುವ ಅತಿ ಉದ್ದದ ಅಂತರ್‌ ರಾಜ್ಯ ನದಿಗಳಲ್ಲಿ ಒಂದಾಗಿದೆ. ಸುವರ್ಣರೇಖಾ ನದಿಯ ಪ್ರಮುಖ ಉಪನದಿಗಳೆಂದರೆ, ಖಾರ್ಕೈ, ರೋರೋ, ಕಂಚಿ, ಹರ್ಮು ನದಿ, ದಮ್ರಾ, ಕರ್ರು, ಚಿಂಗುರು, ಕರ್ಕರಿ, ಗುರ್ಮಾ, ಗರ್ರಾ, ಸಿಂಗ್ಡುಬಾ, ಕೊಡಿಯಾ, ಡುಲುಂಗಾ ಮತ್ತು ಖೈಜೋರಿ. ಭಾರತದ ಪ್ರಮುಖ ನದಿಗಳಲ್ಲಿ ಗಂಗಾ, ಯಮುನಾ, ಸಿಂಧೂ, ಗೋಮತಿ, ಮಹಾನದಿ, ನರ್ಮದಾ, ಝೇಲಂ, ಕೃಷ್ಣಾ, ಕಾವೇರಿ, ಗೋದಾವರಿ, ಸರಯು ಮತ್ತು ಬ್ರಹ್ಮಪುತ್ರ ಸೇರಿವೆ. ಈ ನದಿಗಳಿಂದ ಅನೇಕ ಉಪನದಿಗಳೂ ಹುಟ್ಟುತ್ತವೆ.

 

suddiyaana