ರ‍್ಯಾಲಿಗೆ ಬಂದವರೆಲ್ಲ ವೋಟ್ ಹಾಕಲ್ಲ! – ದಳಪತಿ ವಿಜಯ್​ಗೆ ಟಾಂಗ್‌ ಕೊಟ್ಟ ಕಮಲ್ ಹಾಸನ್!

ರ‍್ಯಾಲಿಗೆ ಬಂದವರೆಲ್ಲ ವೋಟ್ ಹಾಕಲ್ಲ! – ದಳಪತಿ ವಿಜಯ್​ಗೆ ಟಾಂಗ್‌ ಕೊಟ್ಟ ಕಮಲ್ ಹಾಸನ್!

ತಮಿಳುನಾಡು ವಿಧಾನಸಭಾ ಚುನಾವಣೆ ಮುಂದಿನ ವರ್ಷ ನಡೆಯಲಿದೆ. ನಟ ದಳಪತಿ ವಿಜಯ್ ಹೊಸ ಪಕ್ಷವನ್ನು ಹುಟ್ಟು ಹಾಕಿದ್ದಾರೆ. ತಮಿಳಗ ವೆಟ್ರಿ ಕಳಗಮ್ ಪಕ್ಷದ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಈಗಾಗಲೇ ಹಲವು ಕಡೆಗಳಲ್ಲಿ ಪ್ರಚಾರ, ರ‍್ಯಾಲಿ ನಡೆಸ್ತಿದ್ದಾರೆ. ಈ ರ‍್ಯಾಲಿಯಲ್ಲಿ ಲಕ್ಷಾಂತರ ಜನ ಭಾಗಿಯಾಗ್ತಿದ್ದಾರೆ. ಇದೀಗ ದಳಪತಿ ವಿಜಯ್‌ ಗೆ ನಟ ಕಮಲ್ ಹಾಸನ್ ಟಾಂಗ್‌ ಕೊಟ್ಟಿದ್ದಾರೆ. ರ‍್ಯಾಲಿಗೆ ಬಂದವರೆಲ್ಲರೂ ನಿಮಗೆ ವೋಟ್ ಹಾಕುವುದಿಲ್ಲ ಎಂದು ಅವರು ನೇರವಾಗಿ ಹೇಳಿದ್ದಾರೆ.

ಇದನ್ನೂ ಓದಿ: ಜನರ ನಂಬಿಕೆ, ಆಚರಣೆ ತೆರೆದಿಟ್ಟ ಡಿವೈನ್‌ ಸ್ಟಾರ್‌ – ಕಾಂತಾರ ಚಾಪ್ಟರ್‌ 1 ನಲ್ಲಿ ಶಿವನ ಕತೆ ಹೇಳಿದ ರಿಷಭ್‌ ಶೆಟ್ಟಿ!

ನಟ ದಳಪತಿ ವಿಜಯ್ ತಮಿಳುನಾಡಿನಲ್ಲಿ ರಾಜಕೀಯದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.  2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅವರು ಸ್ಪರ್ಧೆ ಮಾಡಲಿದ್ದಾರೆ. ಇದಕ್ಕಾಗಿ ವಿವಿಧ ಕಡೆಗಳಲ್ಲಿ ರ‍್ಯಾಲಿ ನಡೆಸುತ್ತಿದ್ದಾರೆ. ಈ ಪ್ರಚಾರದಲ್ಲಿ ಲಕ್ಷಾಂತರ ಜನರು ಸೇರುತ್ತಿದ್ದು, ನಟ ವಿಜಯ್ ಚುನಾವಣೆಯಲ್ಲಿ ಗೆಲ್ಲೋದು ನಿಶ್ಚಿತ ಎಂಬ ಮಾತುಗಳು ಕೇಳಿ ಬಂದಿವೆ. ಈ ಬೆನ್ನಲ್ಲೇ ನಟ ಕಮಲ್ ಹಾಸನ್ ಶಾಕಿಂಗ್‌ ರಿಯಾಕ್ಟನ್‌ ಕೊಟ್ಟಿದ್ದಾರೆ. ಪ್ರಚಾರಕ್ಕೆ ಬಂದವರೆಲ್ಲರೂ ನಿಮಗೆ ವೋಟ್ ಹಾಕುವುದಿಲ್ಲ ಎಂದು ಅವರು ನೇರವಾಗಿ ಹೇಳಿದ್ದಾರೆ. ಇದು ವಿಜಯ್​ಗೆ ಮಾತ್ರವಲ್ಲ, ತಮಗೂ ಅನ್ವಯ ಆಗುತ್ತದೆ ಎಂದಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ನಟ ಕಮಲ್‌ ಹಾಸನ್‌, ಚುನಾವಣೆ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇಡೀ ಸಮೂಹವು ವಿಜಯ್​ಗೆ ವೋಟ್ ಮಾಡೋದಿಲ್ಲ. ಅರ್ಥಾತ್, ಎಲ್ಲವೂ ಮತವಾಗಿ ಮಾರ್ಪಡುವುದಿಲ್ಲ. ಇದು ಎಲ್ಲಾ ನಾಯಕರಿಗೂ ಅನ್ವಯ ಆಗುತ್ತದೆ. ನನ್ನನ್ನು ಸೇರಿದಂತೆ ದೇಶದ ಪ್ರತಿ ನಾಯಕನಿಗೂ ಇದು ಅನ್ವಯ ಆಗುತ್ತದೆ. ನೀವು ಜನರನ್ನು ಸೆಳೆಯಬಹುದು ಆದರೆ ಅದನ್ನು ಮತವಾಗಿ ಬದಲಾಯಿಸಲು ಸಾಧ್ಯವಿಲ್ಲ. ಸರಿಯಾದ ಹಾದಿಯಲ್ಲಿ ಹೋಗಿ. ಧೈರ್ಯದಿಂದ ಮುಂದುವರಿಯಿರಿ ಮತ್ತು ಜನರಿಗೆ ಒಳ್ಳೆಯದನ್ನು ಮಾಡಿ.  ಇದು ಎಲ್ಲಾ ನಾಯಕರಿಗೆ ನನ್ನ ಮನವಿ  ಎಂದು ಹೇಳಿದ್ದಾರೆ ಕಮಲ್.

ಕಮಲ್ ಹಾಸನ್ ಹೇಳಿದ್ದು ಅಕ್ಷರಶಃ ಸತ್ಯ ಕೂಡ ಹೌದು. ಈ ಮೊದಲು ಚಿರಂಜೀವಿ ಅವರು ರಾಜಕೀಯ ಪಕ್ಷ ಸ್ಥಾಪಿಸಿ ದೊಡ್ಡ ಸಭೆ ಆಯೋಜನೆ ಮಾಡಿದಾಗ ಲಕ್ಷಾಂತರ ಜನರು ಬಂದಿದ್ದರು. ಆದರೆ, ಅವರು ಚುನಾವಣೆಯಲ್ಲಿ ಸೋತರು. ಆ ಬಳಿಕ ಅವರು ರಾಜಕೀಯ ತೊರೆದರು. ಹೀರೋ ಆಗಿ ಅಪಾರ ಜನಪ್ರಿಯತೆ ಪಡೆದಿದ್ದ ಪವನ್ ಕಲ್ಯಾಣ್ ಈ ಹಿಂದಿನ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿ ಎರಡೂ ಕ್ಷೇತ್ರದಲ್ಲಿ ಸೋತಿದ್ದರು. ಸ್ವತಃ ಕಮಲ್ ಹಾಸನ್ ಕೂಡ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದಾರೆ.

Shwetha M