‘ಏಕಪಾತ್ರ’ ಸಿನಿಮಾದಲ್ಲಿ ಚಿನ್ನಾರಿಮುತ್ತ – ‘ಸೋಲೋ’ ನಟನಾಗಿ ವಿಜಯ್ ರಾಘವೇಂದ್ರ

‘ಏಕಪಾತ್ರ’ ಸಿನಿಮಾದಲ್ಲಿ ಚಿನ್ನಾರಿಮುತ್ತ – ‘ಸೋಲೋ’ ನಟನಾಗಿ ವಿಜಯ್ ರಾಘವೇಂದ್ರ

ಕನ್ನಡದಲ್ಲಿ ಮೊದಲ ಬಾರಿಗೆ ವಿಭಿನ್ನವಾದ ಸಿನಿಮಾವೊಂದು ತೆರೆ ಮೇಲೆ ಬರಲಿದೆ. ಈ ಸಿನಿಮಾದಲ್ಲಿ ಒಬ್ಬನೇ ಪಾತ್ರದಾರಿ. ಅದು ಕೂಡಾ ತೆರೆಯುದ್ದಕ್ಕೂ ಅವರೊಬ್ಬರೇ ಇರ್ತಾರೆ. ಅಂದರೆ ಈ ವಿಶಿಷ್ಟ ಸಿನಿಮಾದಲ್ಲಿ ನಟ ವಿಜಯ್ ರಾಘವೇಂದ್ರ ಒಬ್ಬರೇ ನಟಿಸಲಿದ್ದಾರೆ. ಹೊಸ ಸಿನಿಮಾ ‘ರಾಘು’ ನಟ ವಿಜಯ್ ರಾಘವೇಂದ್ರ ವೃತ್ತಿಜೀವನದ ವಿಭಿನ್ನ ಪ್ರಯೋಗ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ :   ಹಸೆಮಣೆಯೇರಿದ ಖ್ಯಾತ ನಟಿ ಹನ್ಸಿಕಾ – ಗೆಳೆಯ ಸೊಹೈಲ್ ಕತುರಿಯಾ ‘ಕೈ’ ಹಿಡಿದ ‘ಬಿಂದಾಸ್’ ಬೆಡಗಿ

ಸಿನಿಮಾ ಎಂದರೆ ಹಲವು ಕಲಾವಿದರು ಇರುತ್ತಾರೆ. ಅವರೆಲ್ಲರೂ ಪ್ರೇಕ್ಷಕರನ್ನು ರಂಜಿಸುತ್ತಾರೆ. ಆದರೆ ಈಗ ವಿಜಯ ರಾಘವೇಂದ್ರ ನಟಿಸಿರುವ ರಾಘು ಸಿನಿಮಾದಲ್ಲಿ ತೆರೆಯುದ್ದಕ್ಕೂ ಇವರೊಬ್ಬರೇ ಕಾಣಿಸಿಕೊಳ್ಳಲಿದ್ದಾರೆ. ನಾಟಕಗಳಲ್ಲಿ ಏಕ ಪಾತ್ರಾಭಿನಯ ಮಾಡುವುದನ್ನು ನೋಡಿದ್ದೇವೆ. ‘ರಾಘು’ ಸಿನಿಮಾದಲ್ಲೂ ವಿಜಯ ರಾಘವೇಂದ್ರ ಅದನ್ನೇ ಮಾಡಿದ್ದಾರೆ. ಇದೊಂದು ಪ್ರಯೋಗಾತ್ಮಕ ಸಿನಿಮಾವಾಗಿದ್ದು, ಕನ್ನಡದಲ್ಲಿ ಮೊದಲ ಬಾರಿಗೆ ಇಂತಹದೊಂದು ಪ್ರಯತ್ನ ಆಗುತ್ತಿದೆ ಎಂದು ನಿರ್ದೇಶಕ ಆನಂದ್ ರಾಜ್ ಹೇಳಿದ್ದಾರೆ.

ಸಿನಿಮಾದಲ್ಲಿ ಒಬ್ಬರೇ ಇರುವಂತಹ ಕೆಲವು ಚಿತ್ರಗಳು ಬಂದಿವೆ. ಅವೆಲ್ಲವೂ ಒಂದೇ ಲೊಕೇಶನ್‌ನಲ್ಲಿ ನಡೆಯುತ್ತವೆ. ಆದರೆ ನಮ್ಮ ಸಿನಿಮಾಗೆ ಹಲವು ಸೆಟ್‌ ಹಾಕಲಾಗಿದೆ. ಒಬ್ಬರೇ ನಟ ಇದ್ದರೂ ಇದರಲ್ಲಿ ಇಂಟೆನ್ಸ್‌ ಫೈಟ್‌ಗಳಿವೆ. ಎರಡು ಹಾಡುಗಳು ಸಿನಿಮಾದಲ್ಲಿದ್ದು, ಕೇವಲ ಒಬ್ಬ ನಟ ಯಾರ ಜತೆಗೆ ಫೈಟ್‌ ಮಾಡುತ್ತಾನೆ ಎಂದು ಹಲವರು ಕೇಳುತ್ತಾರೆ. ಅದನ್ನು ಚಿತ್ರದಲ್ಲಿಯೇ ನೋಡಬೇಕು. ಬೇರೆ ಬೇರೆ ಲೊಕೇಶನ್‌ನಲ್ಲಿ ನಡೆಯುವ ಈ ಚಿತ್ರದ ಕಥೆ ಥ್ರಿಲ್ಲರ್‌ ಜಾನರ್‌ನದ್ದು. ಒಂದು ಅಪಾರ್ಟ್‌ಮೆಂಟ್‌, ಅಂಡರ್‌ ವಾಟರ್‌ ಮುಂತಾದ ಹಲವು ಸೆಟ್‌ಗಳನ್ನು ಸಿನಿಮಾಗಾಗಿ ಹಾಕಲಾಗಿದೆ’ ಎಂದಿದ್ದಾರೆ ನಿರ್ದೇಶಕರು.

ವಿಜಯ ರಾಘವೇಂದ್ರರಿಗೆ ಕಥೆ ಹೇಳಿದ ತಕ್ಷಣ ಒಪ್ಪಿಕೊಂಡರು. ತಮ್ಮ 57 ಸಿನಿಮಾಗಳಲ್ಲಿ ಇಂತಹ ಪಾತ್ರವನ್ನು ನಾನು ನಿರ್ವಹಿಸಿಲ್ಲ. ಇದೊಂದು ವಿಭಿನ್ನ ಶೈಲಿಯ ಸಿನಿಮಾವಾಗಲಿದೆ ಅಂತಾರೆ ನಟ ವಿಜಯ ರಾಘವೇಂದ್ರ. ಈ ಚಿತ್ರದ ಸೌಂಡ್‌ ಡಿಸೈನಿಂಗ್‌ನಲ್ಲಿಯೂ ಹೊಸ ರೀತಿಯ ಪ್ರಯೋಗ ಮಾಡಲಾಗಿದ್ದು, ಬಿ.ಆರ್‌. ನವೀನ್‌ ಕುಮಾರ್‌ ಹೊಸ ರೀತಿಯ ಸೌಂಡ್‌ ಎಫೆಕ್ಟ್ ನೀಡಿದ್ದಾರೆ. ರಾಘು’ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸಿನಿಮಾ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಅನೌನ್ಸ್‌ ಮಾಡಲಿದೆ.

suddiyaana