ಬಿಜೆಪಿಯಲ್ಲಿ ವಿಜಯೇಂದ್ರ Vs ಯತ್ನಾಳ್‌ – ವಕ್ಫ್ ಹೋರಾಟದಲ್ಲಿ ಬಣ್ಣ ಬಯಲಾಯ್ತಾ?
ಕಮಲ ಕೋಟೆಯಲ್ಲಿ ಯಾರ ಮೇಲುಗೈ?

ಬಿಜೆಪಿಯಲ್ಲಿ ವಿಜಯೇಂದ್ರ Vs ಯತ್ನಾಳ್‌ – ವಕ್ಫ್ ಹೋರಾಟದಲ್ಲಿ ಬಣ್ಣ ಬಯಲಾಯ್ತಾ?ಕಮಲ ಕೋಟೆಯಲ್ಲಿ ಯಾರ ಮೇಲುಗೈ?

ರಾಜ್ಯ ಬಿಜೆಪಿ ಈಗ ಮನೆಯೊಂದು ಎರಡು ಬಾಗಿಲಾಗಿದೆ. ಒಂದು ಬಾಗಿಲಿನಿಂದ ಯತ್ನಾಳ್ ನುಗ್ಗಿದ್ರೆ, ಮತ್ತೊಂದು ಬಾಗಿಲಿನಿಂದ ಬಿವೈ ವಿಜಯೇಂದ್ರ ನುಗ್ಗುತ್ತಿದ್ದಾರೆ. ಇದನ್ನ ನೋಡಿದ್ರೆ ಬಿಜೆಪಿ ಮನೆಯಲ್ಲಿ ಎಲ್ಲಾ ಹದಗೆಟ್ಟಿದೆ ಅನ್ನೋದು ಗೊತ್ತಾಗುತ್ತೆ. ಇಷ್ಟು ದಿನ ಬೂದಿ ಮುಚ್ಚಿದ ಕೆಂಡದಂತಿದ್ದ ಬಿಜೆಪಿ ನಾಯಕರ ಒಳಜಗಳ, ಈಗ ಮತ್ತೆ ಹೊಗೆಯಾಡುತ್ತಿದೆ. ಕಮಲ ಪಾಳಯದಲ್ಲಿ ಎರಡು ಬಣಗಳ ಗುದ್ದಾಟ ಜೋರಾಗಿದೆ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪೂರೈಸಿ ಒಂದು ವರ್ಷದ ಸಂಭ್ರಮದಲ್ಲಿದ್ದಾಗಲೇ ವಿರೋಧಿ ಬಣ ಶಾಕ್ ಕೊಟ್ಟಿದೆ. ವಕ್ಫ್ ಆಸ್ತಿ ವಿವಾದದ ಹೆಸರಲ್ಲಿ ಯತ್ನಾಳ್ ಬಣ ಪ್ರತ್ಯೇಕ ಪಾದಯಾತ್ರೆಗೆ ತೀರ್ಮಾನಿಸಿದೆ. ಯತ್ನಾಳ್ ನಮ್ಮವರು ಅಂತಾನೇ ವಿಜಯೇಂದ್ರ ಕೂಡ 3 ತಂಡಗಳನ್ನ ರಚಿಸಿದ್ದಾರೆ.

ಇದನ್ನೂ ಓದಿ: IPL ಹರಾಜಿಗೆ ಶಾರ್ಟ್ ಲಿಸ್ಟ್ ರಿಲೀಸ್ – 2 ಸೆಟ್.. 12 ಪ್ಲೇಯರ್ಸ್.. ಬೆಲೆ ಎಷ್ಟು?

ಕರ್ನಾಟಕದ ಭಾರತೀಯ ಜನತಾ ಪಕ್ಷ ಮತ್ತೆ ಒಡೆದಮನೆಯಾಗಿದೆ. ರಾಜ್ಯ ಬಿಜೆಪಿಯಲ್ಲಿರುವ ಎರಡು ಬಣದ ತಿಕ್ಕಾಟಕ್ಕೆ ಬ್ರೇಕ್ ಬಿದ್ದಿಲ್ಲ. ಇದಕ್ಕೆ ಸಾಕ್ಷಿಯಾಗಿರೋದು ವಕ್ಫ್ ವಿವಾದ. ಹೌದು ರಾಜ್ಯಾದ್ಯಂತ ರೈತರು, ಮಠ-ಮಂದಿರಗಳ ಆಸ್ತಿಗಳ ಪಹಣಿಗಳಲ್ಲಿ ವಕ್ಫ್ ಆಸ್ತಿ ಅಂತ ನಮೂದಾಗಿದೆ. ಇದೇ ವಿಷಯದಲ್ಲಿ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿದ್ದ ಕಮಲ ಕಲಿಗಳು ಇದೇ ವಿಚಾರವಾಗಿ ತಮ್ಮಲ್ಲಿ ಯಾವುದು ಸರಿ ಇಲ್ಲ ಅನ್ನೋದನ್ನ ಬಹಿರಂಗ ಪಡಿಸಿದ್ದಾರೆ. ವಕ್ಫ್ ಹೋರಾಟಕ್ಕೆ ಯತ್ನಾಳ್ ಮತ್ತು ವಿಜಯೇಂದ್ರ ಪ್ರತ್ಯೇಕ ಬಣವಾಗಿ ಹೋರಾಟ ನಡೆಸುತ್ತಿದ್ದಾರೆ.

ವಿಜಯೇಂದ್ರ Vs ಯತ್ನಾಳ್ ಬಣ

ವಿಜಯೇಂದ್ರ ಅವರು ಒಟ್ಟು 3 ತಂಡಗಳನ್ನ ರಾಜ್ಯ ಪ್ರವಾಸಕ್ಕೆ ಸಜ್ಜುಗೊಳಿಸಿದ್ದಾರೆ. ಆದರೆ ಯತ್ನಾಳ್‌ ಬಣ ನವೆಂಬರ್‌ 25ರಿಂದ ಡಿಸೆಂಬರ್‌ 1ರವರೆಗೆ ಅಭಿಯಾನಕ್ಕೆ ಮುಹೂರ್ತವನ್ನೇ ಫಿಕ್ಸ್‌ ಮಾಡಿದೆ. ವಿಜಯೇಂದ್ರ ಟೀಂ ನಮ್ಮ ಭೂಮಿ-ನಮ್ಮ ಹಕ್ಕು” ಎಂಬ ಘೋಷವಾಕ್ಯದಡಿ ಪ್ರವಾಸ ಮಾಡುತ್ತಿದ್ದಾರೆ. ಯತ್ನಾಳ್ ಬಣ ಬೀದರ್‌ನಿಂದ ಚಾಮರಾಜನಗರದವರೆಗ ಜನಜಾಗೃತಿ ಅಭಿಯಾನಕ್ಕೆ ಸಜ್ಜಾಗಿದೆ. ರಾಜ್ಯದ 28 ಜಿಲ್ಲೆಗಳಲ್ಲಿ 46 ಜನರಿಗೆ ವಿಜಯೇಂದ್ರಬಣದಲ್ಲಿ ಸ್ಥಾನ ಸಿಕ್ಕಿದೆ. ವಿಜಯೇಂದ್ರ .ಆರ್‌.ಅಶೋಕ್‌, ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ 3 ಟೀಂ ಪ್ರವಾಸ ಮಾಡಿದರೆ, ಯತ್ನಾಳ್‌, ಜಾರಕಿಹೊಳಿ, ಅರವಿಂದ ಲಿಂಬಾವಳಿ ಒಟ್ಟಿಗೇ ಜನಜಾಗೃತಿಗೆ ಸಜ್ಜಾಗಿದ್ದಾರೆ.

ವಿಜಯೇಂದ್ರ ತಂಡದಲ್ಲಿದೆ ಯತ್ನಾಳ್‌ಗೆ ಸ್ಥಾನ

ಇಲ್ಲಿ ಗಮನಿಸಬೇಕಾಗಿದ್ದು ಏನಂದ್ರೆ ವಿಜಯೇಂದ್ರ ಅವರ 3 ತಂಡಗಳಲ್ಲಿ ಯತ್ನಾಳ್‌, ರಮೇಶ್‌ ಜಾರಕಿಹೊಳಿ, ಲಿಂಬಾವಳಿಗೂ ಸ್ಥಾನ ಸಿಕ್ಕಿದೆ. ಆದರೆ ಯತ್ನಾಳ್‌ ಅವರ ರೆಬೆಲ್ಸ್‌ ಟೀಂನಲ್ಲಿ ಬಂಡೆದ್ದವರ ಹೆಸರಷ್ಟೇ ಇದೆ. ಹಾಲಿ ಶಾಸಕರಾದ ಹೊಳಲ್ಕೆರೆ ಚಂದ್ರಪ್ಪ, ಬಿಪಿ.ಹರೀಶ್‌‌ಗೆ ವಿಜಯೇಂದ್ರ ಪಟ್ಟಿಯಲ್ಲಿ ಸ್ಥಾನ ಸಿಕ್ಕಿಲ್ಲ. ಆದರೆ ಯತ್ನಾಳ್‌ ಅವರ ಪಾದಯಾತ್ರೆಯಲ್ಲಿ ಪಟ್ಟಿಯಲ್ಲಿ ಇವರ ಹೆಸರಿದೆ. G.M ಸಿದ್ದೇಶ್‌, ಪ್ರತಾಪ್‌ ಸಿಂಹ, ಬಿ.ವಿ.ನಾಯ್ಕ್‌ ಕುಮಾರ್‌ ಬಂಗಾರಪ್ಪ. ಅಣ್ಣಾ ಸಾಬ್‌ ಜೊಲ್ಲೆ ವಿಜಯೇಂದ್ರ ಟೀಂನಲ್ಲಿಲ್ಲ. ಆದರೆ ಇಷ್ಟೂ ಜನರಿಗೆ ಯತ್ನಾಳ್‌‌‌ ಹೊರಡಿಸಿರುವ ಪತ್ರದಲ್ಲಿ ಸ್ಥಾನಮಾನ ನೀಡಲಾಗಿದೆ.

ಪ್ರತಾಪ್ ಸಿಂಹ ಕೈ ಬಿಟ್ಟ ವಿಜಯೇಂದ್ರ

ಕಳೆದ ಆರ್ಎಸ್ಎಸ್ ನಾಯಕರ ಸಭೆಯಲ್ಲಿ ವಿಜಯೇಂದ್ರ ವಿರುದ್ಧ ಪ್ರತಾಪ್ ಸಿಂಹ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ವಿಜಯೇಂದ್ರ ನಾಯಕತ್ವ ಸೇರಿ ಮೈಸೂರಲ್ಲಿ ತಮಗೆ ಟಿಕೆಟ್ ತಪ್ಪಿಸಿದ್ದು ವಿಜಯೇಂದ್ರ ಎಂದು ಸಿಂಹ ಬೇಸರ ವ್ಯಕ್ತಪಡಿಸಿದ್ದರು. ಇದಕ್ಕೆ ವಿಜಯೇಂದ್ರ ಅವರು ಸಭೆಯಲ್ಲೇ ಪ್ರತಾಪ ಸಿಂಹಗೆ ತಕ್ಕ ಉತ್ತರ ನೀಡಿದ್ದರು. ಆ ನಂತರ ರೆಬೆಲ್ಗಳ ಜೊತೆ ಸೇರಿಕೊಂಡು, ವಿಜಯೇಂದ್ರ ವಿರುದ್ಧ ಪ್ರತಾಪ್ ಸಿಂಹ ಅಂತರಿಕ ಸಮರ ಸಾರಿದ್ದಾರೆ ಎನ್ನಲಾಗುತ್ತಿತ್ತು. ಈಗ ಪ್ರತಾಪ್ ಸಿಂಹಗೆ ಪಕ್ಷದ ಸಂಘಟನೆಗಳಲ್ಲಿ ಯಾವುದೇ ಸ್ಥಾನ ನೀಡದೇ ವಿಜಯೇಂದ್ರ ಶಾಕ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಹೀಗೆ ಬಿಜೆಪಿಯಲ್ಲಿ ಬಳಬೇಗುದಿ ದೊಡ್ಡದಾಗುತ್ತಿದ್ದು, ಹೈ ಕಮಾಂಡ್‌ಗೆ ದೊಡ್ಡ ತಲೆನೋವು ಆಗಿದೆ.

Shwetha M

Leave a Reply

Your email address will not be published. Required fields are marked *