ದೆಹಲಿ ಅಂಗಳದಲ್ಲಿ ಬಣ ಜಗಳ – ವಿಜಯೇಂದ್ರ ಕುರ್ಚಿ ಖಾಲಿಯಾಗುತ್ತಾ?
ಯತ್ನಾಳ್ ಪ್ಲ್ಯಾನ್ ವರ್ಕೌಟ್ ಆಗುತ್ತಾ?

ದೆಹಲಿ ಅಂಗಳದಲ್ಲಿ ಬಣ ಜಗಳ – ವಿಜಯೇಂದ್ರ ಕುರ್ಚಿ ಖಾಲಿಯಾಗುತ್ತಾ?ಯತ್ನಾಳ್ ಪ್ಲ್ಯಾನ್ ವರ್ಕೌಟ್ ಆಗುತ್ತಾ?

 

ಕಮಲ ಪಕ್ಷದ ಆಂತರಿಕ ಕಿತ್ತಾಟ ಜೋರಾಗಿದೆ. ಮುಂದು ಏನು ಎತ್ತ ಎಂಬ ಗೊಂದಲ ಸ್ವತಃ ರಾಜ್ಯ ನಾಯಕರಿಗೂ ಗೊತ್ತಿಲ್ಲ. ಬಣ ಗುದ್ದಾಟದಿಂದ ಬಳಲಿ ಹೋಗಿರುವ ಬಿಜೆಪಿಗೆ ಆಂತರಿಕ ಆಪರೇಷನ್ ಅಗತ್ಯವಿದೆ ಎಂಬ ಚರ್ಚೆಗಳು ಪಕ್ಷದಲ್ಲಿ ತೀವ್ರವಾಗಿ ನಡೆಯುತ್ತಿದೆ. ಈ ನಡುವೆ ರೆಬೆಲ್ ನಾಯಕರು ದೆಹಲಿ ದಂಡಯಾತ್ರೆ ಕೈಗೊಂಡಿದ್ದಾರೆ.  ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ ವೈ ವಿಜಯೇಂದ್ರ ಅವರನ್ನ ಕಳಗಿಳಿಸುವ ಕುರಿತು ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಜೋರಾಗಿದ್ದು, ಕರ್ನಾಟಕ ಬಿಜೆಪಿ ಭಿನ್ನಮತ ದೆಹಲಿ ಅಂಗಳ ತಲುಪಿದೆ. ದೆಹಲಿಯಲ್ಲಿ ಬೀಡು ಬಿಟ್ಟಿರುವ ಯತ್ನಾಳ್ ಬಣದ ನಾಯಕರು, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿದ್ದಾರೆ. ರೆಬಲ್ ನಾಯಕರು ಹೈಕಮಾಂಡ್ ಮನವೊಲಿಸಲು ಇದು ಕೊನೆಯ ಹಂತದ ಪ್ರಯತ್ನ ಎಂದು ಹೇಳಲಾಗುತ್ತಿದೆ. ಇದರ ನಡುವೆ ವಿಜಯೇಂದ್ರ ಭವಿಷ್ಯ ಏನಾಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಇವರೇ ವಿಶ್ವದ ಶ್ರೀಮಂತ ರಾಜಕಾರಣಿ – 58 ವಿಮಾನ, 700 ಕಾರ್, 20 ಅರಮನೆ

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಬಿ.ವೈ.ವಿಜಯೇಂದ್ರ ನಾಯಕತ್ವವನ್ನು ವಿರೋಧಿ ಸುತ್ತಿರುವ ರೆಬೆಲ್ಸ್ ನಾಯಕರದಲ್ಲಿ ದೆಹಲಿಯಲ್ಲಿ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದಾರೆ. ಬಿ ವೈ ವಿಜಯೇಂದ್ರ ವಿರೋಧ ಬಣ ಕುಮಾರಬಂಗಾರಪ್ಪ, ರಮೇಶ್ ಜಾರಕಿಹೊಳಿ, ಬಿ.ಪಿ.ಹರೀಶ್, ಜಿ.ಎಂ.ಸಿದ್ದೇಶ್ವರ, ಚಂದ್ರಪ್ಪ, ಸಂಸದ ಕೆ.ಸುಧಾಕರ್ ಸೇರಿದಂತೆ ಮತ್ತಿತರರು ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿದ್ದಾರೆ.

ಈ ಬಗ್ಗೆ ಮಾತನಾಡಿರುವ ರಮೇಶ್ ಜಾರಕಿಹೊಳಿ  ಕೊನೆಯ ಹಂತ ಇರೋದ್ರಿಂದ, ಹತಾಶ ಭಾವನೆಯಿಂದ ಕೆಲವರು ಮಾಧ್ಯಮ ಮುಂದೆ ಮಾತಾಡ್ತಾರಲ್ಲ, ಆತರದ ಸನ್ನಿವೇಶ ನಮ್ಮ ಮುಂದಿಲ್ಲ ಎಂದು ಹೇಳುವ ಮೂಲಕ ತಮ್ಮ ಬಣದ ಕೈ ಮೇಲಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೈಕಮಾಂಡ್‌ಗೆ ಎಲ್ಲವನ್ನು ನಾವು ಮನವರಿಗೆ ಮಾಡಿದ್ದೇವೆ. ಕೊನೆಯ ತೀರ್ಮಾನ ಅವರು ಏನ್ ತಕೊತಾರೆ ತಲೆ ಬಾಗಿ ಅದನ್ನ ಸ್ವೀಕಾರ ಮಾಡುತ್ತೇವೆ. ವಿಜಯೇಂದ್ರ ಅವರ ಕರ್ಮಕಾಂಡದ ಬಗ್ಗೆ ಯತ್ನಾಳ್ ಅವರನ್ನ ಕೇಳಿ. ಯತ್ನಾಳ್  ಬಾಯಲ್ಲಿ‌ ಕೇಳಿದ್ರೇನೆ ಒಳ್ಳೇದು ಎಂದು ಜಾರಕಿಹೊಳಿ ನಸುನಕ್ಕರು.

ಹೈಕಮಾಂಡ್ ಮುಂದೆ ರೆಬೆಲ್ಸ್ ಬೇಡಿಕೆಯೇನು?      

ಬಿಜೆಪಿ ಪಾಳಯದಲ್ಲಿ ಆದ ಬೆಳವಣಿಗೆಗಳ ಕುರಿತು ಹೈಕಮಾಂಡ್‌ ಈಗಾಗಲೇ ಎಂಟ್ರಿಯಾಗಿದೆ. ಈಗಾಗಲೇ ಬಿಜೆಪಿ ಹೈಕಮಾಂಡ್‌ ಮುಂದೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರ ಬಣ ಹಲವು ಬೇಡಿಕೆಯನ್ನ ಇಟ್ಟಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಬಸವನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದು, ರಾಜ್ಯಾಧ್ಯಕ್ಷ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ.

ಇದರ ಜೊತೆಗೆ 23 ಜಿಲ್ಲಾಧ್ಯಕ್ಷರ ಆಯ್ಕೆ ಘೋಷಣೆಯನ್ನ ರದ್ದು ಮಾಡಬೇಕೆಂಬ ಒತ್ತಡ ಹಾಕಿಲಿದ್ದಾರೆ. ಅಲ್ಲದೇ, ರಾಜ್ಯಾಧ್ಯಕ್ಷರ ಚುನಾವಣೆ ನಡೆಸಬೇಕೆಂಬ ಒತ್ತಡ ಹಾಗೂ ವಿಜಯೇಂದ್ರರನ್ನ ಪಟ್ಟದಿಂದ ಇಳಿಸಬೇಕು ಬೇಡಿಕೆಯನ್ನ ಹೈಕಮಾಂಡ್‌ ಮುಂದೆ ಇಡಲಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದ ವಿಚಾರದಲ್ಲಿ ಚುನಾವಣೆ ನಡೆಯುವ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರ ಬಣ ಹೈಕಮಾಂಡ್‌ ನಾಯಕರ ಭೇಟಿಗೆ ತೆರಳಿದ್ದು, ಎರಡ್ಮೂರು ದಿನ ದೆಹಲಿಯಲ್ಲೇ ಠಿಕಾಣಿ ಹೂಡಲಿದ್ದಾರೆ.

 

ದೆಹಲಿಗೆ ವಿಧಾನಸಭೆ ಚುನಾವಣೆ ಮುಕ್ತಾಯವಾಗುತ್ತಿದ್ದು, ಶೀಘ್ರದಲ್ಲೇ ವಿಜಯೇಂದ್ರ ಅವರ ಸ್ಥಾನಕ್ಕೆ ಮತ್ತೊಬ್ಬ ನಾಯಕನನ್ನು ವರಿಷ್ಠರು ಘೋಷಿಸುವ ಸಾಧ್ಯತೆಯಿದೆ. ಹೀಗಾಗಿ ಯತ್ನಾಳ್ ಕ್ಯಾಂಪ್ ನಲ್ಲಿ ಚಟುವಟಿಕೆಗಳು ಗರಿಗೆದರಿವೆ. ಪಕ್ಷದ ಕರ್ನಾಟಕ ಸಂಘಟನೆಯ ಚುನಾವಣಾ ಉಸ್ತುವಾರಿ, ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯಾಧ್ಯಕ್ಷರ ಹೆಸರು ಘೋಷಣೆ ಮಾಡಲು ಆಗಮಿಸಬಹುದು. ಈ ವೇಳೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಯತ್ನಾಳ್ ಮತ್ತು ಬೆಂಬಲಿಗರು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡುತ್ತಾರೆಯೇ ಎಂಬುದು ಸದ್ಯದ ಕುತೂಹಲ. ವರಿಷ್ಠರು ಸಮ್ಮತಿಸಿದರೆ ಬಂಡಾಯ ಪಾಳಯವು ಕೂಡ ವಿಜಯೇಂದ್ರ ವಿರುದ್ಧ ತನ್ನ ಅಭ್ಯರ್ಥಿಯನ್ನು ಘೋಷಿಸಲಿದೆ. ಇತರ ರಾಜ್ಯ ಘಟಕಗಳಿಂದ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸುವ ಪ್ರಸ್ತಾಪಗಳಿಲ್ಲ, ಆದರೆ ಕರ್ನಾಟಕದಲ್ಲಿ ಮಾತ್ರ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸಲೇ ಬೇಕು ಎಂದು ಯತ್ನಾಳ್ ಪಾಳಯವು ಒತ್ತಾಯಿಸುತ್ತಿದೆ.

 

ವಿಜಯೇಂದ್ರ, ಯಡಿಯೂರಪ್ಪ ಕುಟುಂಬ ರಾಜಕೀಯದಿಂದ ಸಾಕಷ್ಟು ರಾಜ್ಯ ಬಿಜೆಪಿ ನಾಯಕರು ಬೇಸತ್ತಿದ್ದಾರೆ, ರಾಜ್ಯದ ಬಿಜೆಪಿ ಸಂಸದರು ಅದರಲ್ಲೂ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್, ದಾವಣಗೆರೆಯ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ, ಚಿತ್ರದುರ್ಗ ಸಂಸದ ಗೋವಿಂದ್ ಕಾರಜೋಳ ಅವರಂತಹ ನಾಯಕರು ಒಲ್ಲದ ಮನಸ್ಸಿನಿಂದ ಪಕ್ಷದಲ್ಲಿ ತಟಸ್ಥರಾಗಿದ್ದಾರೆ. ತಮ್ಮನ್ನು ಸಂಪರ್ಕಿಸದೆ ಜಿಲ್ಲಾಧ್ಯಕ್ಷರ ನೇಮಕ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತಟಸ್ಥ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಯತ್ನಾಳ್ ಬಣ ಕಸರತ್ತು ನಡೆಸಿದೆ. ಯಡಿಯೂರಪ್ಪ ಕುಟುಂಬ ರಾಜ್ಯದಲ್ಲಿ ಸಾಕಷ್ಟು ಲೂಟಿ ಮಾಡಿದೆ, ನಕಲಿ ಸಹಿ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಶಾಮೀಲಾಗಿ ಕರ್ನಾಟಕದಲ್ಲಿ ಬಿಜೆಪಿಯನ್ನು ಮುಗಿಸುವ ಕೆಲಸ ವಿಜಯೇಂದ್ರ ಮಾಡುತ್ತಿದ್ದಾರೆ ಅನ್ನೋ ವಿಚಾರಗಳನ್ನ ಹೈಕಮಾಂಡ್‌ಗೆ ತಿಳಿಸಿ ವಿಜಯೇಂದ್ರನನ್ನ  ರಾಜ್ಯಾಧ್ಯಕ್ಷರ ಸ್ಥಾನದಿಂದ ಕೆಳಗಿಳಿಸೋಕೆ ರೆಬಲ್ಸ್ ಸರ್ಕಸ್ ಮಾಡುತ್ತಿದ್ದಾರೆ.

Kishor KV

Leave a Reply

Your email address will not be published. Required fields are marked *