ಅಪ್ಪನ ಅಂಬಾಸಿಡರ್ ಕಾರಿನಲ್ಲಿ ತೆರಳಿ ವಿಜಯೇಂದ್ರ ನಾಮಿನೇಷನ್ – ಬಿಎಸ್‌ವೈಗೆ ಈ ಕಾರು ಎಷ್ಟು ಲಕ್ಕಿ ಗೊತ್ತಾ?

ಅಪ್ಪನ ಅಂಬಾಸಿಡರ್ ಕಾರಿನಲ್ಲಿ ತೆರಳಿ ವಿಜಯೇಂದ್ರ ನಾಮಿನೇಷನ್ – ಬಿಎಸ್‌ವೈಗೆ ಈ ಕಾರು ಎಷ್ಟು ಲಕ್ಕಿ ಗೊತ್ತಾ?

ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರ ಕೂಡ ಗಮನ ಸೆಳೀತಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭದ್ರಕೋಟೆಯಾಗಿರುವ ಶಿಕಾರಿಪುರ ಕ್ಷೇತ್ರದಿಂದ ಈ ಬಾರಿ ಬಿ.ವೈ ವಿಜಯೇಂದ್ರ ಸ್ಪರ್ಧೆ ಮಾಡ್ತಿದ್ದಾರೆ. ವಿಶೇಷ ಅಂದ್ರೆ ಇವತ್ತು ಬಿ.ಎಸ್​ ಯಡಿಯೂರಪ್ಪ ಅವರೊಂದಿಗೆ ಅಂಬಾಸಿಡರ್​ ಕಾರಿನಲ್ಲಿ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಇದನ್ನೂ ಓದಿ:  ‘ಸ್ವರೂಪ್ ನನ್ನ ಮಗ ಇದ್ದಂತೆ, ನಿದ್ದೆ ಬಿಟ್ಟು ಗೆಲ್ಲಿಸಿ’ – ಭವಾನಿ ರೇವಣ್ಣ ಮಾತು ಅಚ್ಚರಿ ಮೂಡಿಸಿದ್ದೇಕೆ?

ಬಿ.ವೈ ವಿಜಯೇಂದ್ರ ಅಂಬಾಸಿಡರ್ ಕಾರಿನಲ್ಲಿ ಹೋಗಲು ಕಾರಣ ಏನಂದ್ರೆ ಬಿಎಸ್​ ಯಡಿಯೂರಪ್ಪ ಮೊದಲ ಬಾರಿಗೆ ಶಾಸಕರಾಗಿದ್ದಾಗ ಇದೇ ಅಂಬಾಸಿಡರ್ ಕಾರನ್ನು ಬಳಸಿದ್ದರು. CKR45 ನಂಬರಿನ ಇದೇ ಕಾರಿನಲ್ಲಿಯೇ ರಾಜ್ಯವನ್ನು ಸುತ್ತುತ್ತಿದ್ದರು. ಅಲ್ಲದೇ ಬಿಎಸ್​ ಯಡಿಯೂರಪ್ಪ ಅವರು ನಾಮಪತ್ರ ಸಲ್ಲಿಸಲು ಹೋಗುವಾಗ ಕೂಡ ಇದೇ ​ಕಾರನ್ನು ಬಳಸುತ್ತಿದ್ದರು. ಈ ಕಾರು ಬಿಎಸ್​ ಯಡಿಯೂರಪ್ಪ ಅವರಿಗೆ ಲಕ್ಕಿ ಕಾರ್ ಎಂದೇ ಭಾವಿಸಲಾಗಿತ್ತು. ಹೀಗಾಗಿ ವಿಜಯೇಂದ್ರ ಕೂಡ ಅಪ್ಪನ ಲಕ್ಕಿ ಕಾರಿನಲ್ಲಿಯೇ ಅಪ್ಪ ಹಾಗೂ ಸೋದರನ ಜೊತೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.

ಬಿ.ವೈ ವಿಜಯೇಂದ್ರ ಅವರು ನಾಮಪತ್ರ ಸಲ್ಲಿಕೆಗೆ ಹೋಗುವ ಮುಂಚೆ ತಂದೆ ಬಿ.ಎಸ್​ ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಬಳಿಕ ಲಕ್ಕಿ ಕಾರಿನಲ್ಲಿ ತಂದೆ ಮತ್ತು ಸಹೋದರನೊಂದಿಗೆ ಒಟ್ಟಿಗೆ ಹೋಗಿ ಬಿ.ವೈ ವಿಜಯೇಂದ್ರ ನಾಮಪತ್ರ ಸಲ್ಲಿಸಿದ್ದಾರೆ. ಬಿ.ಎಸ್​ ಯಡಿಯೂರಪ್ಪ ಅವರ ಗುರುತು CKR45 ನಂಬರಿನ ಕಾರಿನ ಬಗ್ಗೆ ಮಾತನಾಡಿದ ವಿಜಯೇಂದ್ರ, ಬಿಎಸ್​ ಯಡಿಯೂರಪ್ಪ ಅವರ ರಾಜಕಾರಣ ಪ್ರಾರಂಭವಾಗಿದ್ದು ಅಂಬಾಸಿಡರ್​ (CKR 45) ಕಾರಿನಲ್ಲಿ. ಈ ಕಾರಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿದ್ದಾರೆ. ಈ ಕಾರನ್ನು ನೋಡಿದರೇ ರಾಜ್ಯದ ಕಾರ್ಯಕರ್ತರಿಗೆ ರೋಮಾಂಚನವಾಗುತ್ತದೆ. ಬಿಜೆಪಿಯ ಗುರುತು ಕಮಲವಾಗಿದ್ದರೆ, ಬಿಎಸ್​ ಯಡಿಯೂರಪ್ಪ ಅವರ ಗುರುತು CKR45 ಕಾರು ಎಂದು ಹೇಳಿದ್ದಾರೆ.

 

suddiyaana