ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧೆಗೆ ರೆಡಿಯಾಯ್ತಾ ಅಖಾಡ? – ಮೈಸೂರಲ್ಲಿ ಗರಿಗೆದರಿದ ರಾಜಕೀಯ

ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧೆಗೆ ರೆಡಿಯಾಯ್ತಾ ಅಖಾಡ? – ಮೈಸೂರಲ್ಲಿ ಗರಿಗೆದರಿದ ರಾಜಕೀಯ

ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್​ನದ್ದೇ ಒಂದು ತೂಕವಾದ್ರೆ ಸಿದ್ದರಾಮಯ್ಯರದ್ದೇ ಮತ್ತೊಂದು ತೂಕ. ಇದನ್ನ ಚೆನ್ನಾಗೇ ಅರಿತಿರೋ ಬಿಜೆಪಿ ಈ ಸಲ ಚುನಾವಣಾ ಅಶ್ವಮೇಧ ಯಾಗದಲ್ಲಿ ಸಿದ್ದರಾಮಯ್ಯರನ್ನ ಕಟ್ಟಿ ಹಾಕಲೇಬೇಕು ಅಂತಾ ಪಣ ತೊಟ್ಟಿದೆ. ನಿನ್ನೆಯಷ್ಟೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಾತನಾಡಿ ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧೆ ಬಗ್ಗೆ ಚರ್ಚೆ ನಡೀತಿದೆ. ಸರಿಯಾದ ಅಭ್ಯರ್ಥಿಯನ್ನ ಅಖಾಡಕ್ಕೆ ಇಳಿಸುತ್ತೇವೆ. ಟಫ್ ಫೈಟ್ ಕೂಡ ಕೊಡುತ್ತೇವೆ ಅಂದಿದ್ರು. ಇದಕ್ಕೆ ಈಗ ಸಿಎಂ ಬಸವರಾಜ ಬೊಮ್ಮಾಯಿ ಕೂಡ ದನಿಗೂಡಿಸಿದ್ದಾರೆ.

ಇದನ್ನೂ ಓದಿ: ನಂದಿನಿ ಮೊಸರಿನ ಪ್ಯಾಕೆಟ್ ಮೇಲೆ ಹಿಂದಿ ಪದ – ವಿರೋಧ, ಟೀಕೆ ಬೆನ್ನಲ್ಲೇ ಆದೇಶ ಹಿಂಪಡೆದ ಎಫ್‌ಎಸ್‌ಎಸ್‌ಎಐ

ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಲ್ಲಿ ನಾವು ಕಠಿಣ ಹೋರಾಟ ನಡೆಸುತ್ತೇವೆ. ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಆದರೆ, ಅಂತಿಮ ನಿರ್ಧಾರವನ್ನು ಯಡಿಯೂರಪ್ಪ ಮತ್ತು ಸಂಸದೀಯ ಮಂಡಳಿ ತೆಗೆದುಕೊಳ್ಳುತ್ತದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇನ್ನು ವಿಜಯೇಂದ್ರ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧೆ ಮಾಡೋದು ಬಹುತೇಕ ಖಚಿತ ಆಗಿದೆ. ಆದ್ರೂ ಸಿದ್ದರಾಮಯ್ಯ ಓಟಕ್ಕೆ ಕಡಿವಾಣ ಹಾಕಲು ವಿಜಯೇಂದ್ರರನ್ನ ವರುಣಾ ಕ್ಷೇತ್ರದಿಂದಲೂ ಕಣಕ್ಕಿಳಿಸಲು ಟಿಕೆಟ್ ನೀಡುವಂತೆ ಬಿಎಸ್​ವೈ ಹೈಕಮಾಂಡ್ ಬಳಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಬಿಎಸ್​ವೈ ಪುತ್ರ ವಿಜಯೇಂದ್ರ ಖಾಸಗಿ ಕಾರ್ಯಕ್ರಮದ ನಿಮಿತ್ತ ಇವತ್ತು ಮೈಸೂರಿಗೆ ತೆರಳಿದ್ರು. ಇದೇ ವೇಳೆ ಬಿಜೆಪಿ ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರಿದ್ದಾರೆ. ವರುಣಾ ಕ್ಷೇತ್ರದ ಸ್ಪರ್ಧೆ ಬಗ್ಗೆ ಮಾತನಾಡಿರುವ ವಿಜಯೇಂದ್ರ, ಚುನಾವಣೆಗೆ ನಿಲ್ಲೋದು ಬಿಡೋದು ಮುಂದೆ ತೀರ್ಮಾನ ಆಗುತ್ತೆ. ಪಕ್ಷ ಎಲ್ಲಿ ಟಿಕೆಟ್ ಕೊಡುತ್ತೋ ಅಲ್ಲಿ ಸ್ಪರ್ಧೆ ಮಾಡುತ್ತೇನೆ. ಯಾವುದೂ ಅಸಾಧ್ಯ ಅಲ್ಲ. ಕೆ.ಆರ್ ಪೇಟೆಯಲ್ಲಿ ಗೆಲ್ಲುತ್ತೇವೆ ಎಂದು ನಾವೇ ಅಂದುಕೊಂಡಿರಲಿಲ್ಲ. ಆದ್ರೂ ಗೆಲುವು ಸಾಧಿಸಲಿಲ್ಲವಾ. ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಿರೋದ್ರಿಂದ ಹೆಚ್ಚು ಸುದ್ದಿಯಾಗ್ತಿದೆ ಅಷ್ಟೇ ಎಂದಿದ್ದಾರೆ.

suddiyaana