ಜನಪ್ರತಿನಿಧಿಗಳು ಒಪ್ಪಿದ್ರೆ ಬಳ್ಳಾರಿಯಲ್ಲಿ ವಿಜಯನಗರ ಜಿಲ್ಲೆ ವಿಲೀನ – ಸಚಿವ ಬಿ.ನಾಗೇಂದ್ರ ಹೊಸ ಬಾಂಬ್!

ಜನಪ್ರತಿನಿಧಿಗಳು ಒಪ್ಪಿದ್ರೆ ಬಳ್ಳಾರಿಯಲ್ಲಿ ವಿಜಯನಗರ ಜಿಲ್ಲೆ ವಿಲೀನ – ಸಚಿವ ಬಿ.ನಾಗೇಂದ್ರ ಹೊಸ ಬಾಂಬ್!

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಳ್ಳಾರಿ ಜಿಲ್ಲೆಯನ್ನ ಎರಡು ಜಿಲ್ಲೆಗಳಾಗಿ ಇಬ್ಭಾಗ ಮಾಡಲಾಗಿತ್ತು. ವಿಜಯನಗರವನ್ನ ಜಿಲ್ಲೆಯನ್ನಾಗಿ ಮಾಡುತ್ತೇನೆ ಎಂದು ಪಣ ತೊಟ್ಟಿದ್ದ ಮಾಜಿ ಸಚಿವ ಆನಂದ್ ಸಿಂಗ್ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿದ್ರು. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಛಲ ಬಿಡದೆ ಜಿಲ್ಲೆಯನ್ನ ಇಬ್ಭಾಗ ಮಾಡಿದ್ರು.

ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಅಖಂಡ ಬಳ್ಳಾರಿ ಜಿಲ್ಲೆಯ ವಿಚಾರ ಮತ್ತೆ ಸದ್ದು ಮಾಡ್ತಿದೆ. ಇದೀಗ ಮತ್ತೆ ಬಳ್ಳಾರಿ ಜಿಲ್ಲೆಯಲ್ಲಿ ನೂತನ ವಿಜಯನಗರ (Vijayanagr) ಜಿಲ್ಲೆಯನ್ನು ವಿಲೀನ ಮಾಡುವ ವಿಚಾರವಾಗಿ ಕ್ರೀಡಾ ಮತ್ತು ಯುವಜನ ಇಲಾಖೆ ಸಚಿವ ನಾಗೇಂದ್ರ (Nagendra) ಮಾತನಾಡಿದ್ದಾರೆ. ವಿಜಯನಗರ ಜಿಲ್ಲೆಯನ್ನ ಮತ್ತೆ ಬಳ್ಳಾರಿಗೆ ಸೇರ್ಪಡೆ ಮಾಡಲು ಎಲ್ಲ ಜನಪ್ರತಿನಿಧಿಗಳು ಒಪ್ಪಿದರೆ ತೀರ್ಮಾನ ಕೈಗೊಳ್ಳಲು ಸಿದ್ದ. ಅಖಂಡ ಬಳ್ಳಾರಿ ಜಿಲ್ಲೆಯನ್ನಾಗಿ ಮಾಡಲು ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿ ಮಾಡಿ ಚರ್ಚೆ ಮಾಡುವೆ ಎಂದು ಕ್ರೀಡಾ ಮತ್ತು ಯುವಜನ ಇಲಾಖೆ ಸಚಿವ ನಾಗೇಂದ್ರ ಹೇಳಿದ್ದಾರೆ.

ಇದನ್ನೂ ಓದಿ : ಆನೆಗಳಿಗೂ ಯೋಗ ಕ್ಲಾಸ್‌! – ಮನುಷ್ಯರನ್ನೇ ನಾಚಿಸುವಂತಿದೆ ಗಜಪಡೆಯ ಯೋಗಾಭ್ಯಾಸ..

2021ರಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪೆಬ್ರವರಿ 8ರಂದು ಬಳ್ಳಾರಿಯಿಂದ ವಿಜಯನಗರವನ್ನು ಬೇರ್ಪಡಿಸಿ ಪ್ರತ್ಯೇಕ ಜಿಲ್ಲೆಯಾಗಿ ಘೋಷಣೆ ಮಾಡಲಾಯಿತು. 2021ಅಕ್ಟೋಬರ್ 2 ರಿಂದ ರಾಜ್ಯದ 31ನೇ ಜಿಲ್ಲೆಯಾಗಿ ಕಾರ್ಯಾರಂಭ ಮಾಡಿತು. ಆದರೆ ಇದಕ್ಕೆ ಸಚಿವ ನಾಗೇಂದ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ಮತ್ತೆ ಅಖಂಡ ಬಳ್ಳಾರಿ ಜಿಲ್ಲೆಯನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದರು.

ಇದೀಗ ವಿಜಯನಗರ ಜಿಲ್ಲೆಯನ್ನ ಮತ್ತೆ ಬಳ್ಳಾರಿಗೆ ಸೇರ್ಪಡೆ ಮಾಡಲು ಸಚಿವರು ಉತ್ಸಾಹ ತೋಡಿದ್ದು, ವಿಜಯನಗರ ಜಿಲ್ಲೆಯನ್ನ ಬಳ್ಳಾರಿಗೆ ಸೇರ್ಪಡೆ ಮಾಡಿ ಅಖಂಡ ಬಳ್ಳಾರಿ ಜಿಲ್ಲೆಯನ್ನಾಗಿ ಮಾಡಲು ಕಂಕಣ ಕಟ್ಟಿಕೊಂಡಿದ್ದಾರೆ. ಇನ್ನು ವಿಜಯನಗರ ಜಿಲ್ಲೆ ಸ್ಥಾಪನೆ ವಿಚಾರವಾಗಿ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ಮಾಜಿ ಸಚಿವ ಆನಂದಸಿಂಗ್ ರಾಜೀನಾಮೆ ನೀಡಿದ್ದರು. ನಂತರ ವಿಜಯನಗರ ಜಿಲ್ಲೆ ಸ್ಥಾಪನೆಯಾಗದ ಪರಿಣಾಮ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದರು.

suddiyaana