ದಿನಕರ್ ಪರವಾಗಿ ಹರಕೆ ತೀರಿಸಿದ ದರ್ಶನ್ ಪತ್ನಿ – ಅಣ್ಣಮ್ಮನಿಗೆ ಮಡಿಲಕ್ಕಿ, ಸೀರೆ ಕೊಟ್ಟು ಪೂಜೆ ಸಲ್ಲಿಸಿದ ವಿಜಯಲಕ್ಷ್ಮಿ

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರುವಂತೆ ಆಗಿತ್ತು. ಇದೀಗ ದರ್ಶನ್ ಜಾಮೀನು ಪಡೆದು ಹೊರ ಬಂದಿದ್ದಾರೆ. ದರ್ಶನ್ ಜೈಲು ಸೇರಿದ ಸಮಯದಲ್ಲಿ ದರ್ಶನ್ ಅಣ್ಣ ದಿನಕರ್ ತೂಗುದೀಪ ಮೆಜೆಸ್ಟಿಕ್ನಲ್ಲಿರೋ ಅಣ್ಣಮ್ಮ ದೇವಸ್ಥಾನದಲ್ಲಿ ವಿಶೇಷ ಹರಕೆ ಹೊತ್ತಿದ್ರು. ಇದೀಗ ವಿಜಯಲಕ್ಷ್ಮೀ ಮೂಲಕ ಹರಕೆ ತೀರಿಸಿದ್ದಾರೆ.
ಇದನ್ನೂ ಓದಿ: ಜೈಸ್ವಾಲ್ ದಿಲ್ ಕದ್ದ ವಿದೇಶಿ ಬ್ಯೂಟಿ.. – ಬೆಡ್ ರೂಮ್ ಫೋಟೋ.. ಗುಟ್ಟು ರಟ್ಟು!
ಹೌದು, ನಟ ದರ್ಶನ್ ಜಾಮೀನು ಪಡೆದು ಜೈಲಿನಿಂದ ಆಚೆ ಬಂದಿದ್ದಾರೆ. ಇದೀಗ ದಿನಕರ್ ತೂಗುದೀಪ ಅವರ ಆಸೆಯಂತೆ ವಿಜಯಲಕ್ಷ್ಮಿ ಅಣ್ಣಮ್ಮ ದೇವರ ಸನ್ನಿಧಿಗೆ ಬಂದಿದ್ದಾರೆ. ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಮೂಲಕ ದಿನಕರ್ ಪರವಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹರಕೆ ತೀರಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಅಣ್ಣಮ್ಮ ದೇವಾಸ್ಥಾನಕ್ಕೆ ಭೇಟಿ ಕೊಟ್ಟಿದ್ದ ವಿಜಯಲಕ್ಷ್ಮಿ ದೇವಿಗೆ ವಿಶೇಷ ಅಭಿಷೇಕ ಮಾಡಿದ್ದಾರೆ. ಅಲ್ಲದೇ ಅಣ್ಣಮ್ಮನಿಗೆ ಮಡಿಲಕ್ಕಿ ಮತ್ತು ಸೀರೆ ಕೊಟ್ಟು ಪೂಜೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.