ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ ಸಮರ! – 15 ಖಾತೆ, 150 ಪೋಸ್ಟ್‌ ವಿರುದ್ಧ ವಿಜಯಲಕ್ಷ್ಮಿ ದೂರು

ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ ಸಮರ! – 15 ಖಾತೆ, 150 ಪೋಸ್ಟ್‌ ವಿರುದ್ಧ ವಿಜಯಲಕ್ಷ್ಮಿ ದೂರು

ಕಳೆದ ಕೆಲವೊಂದು ದಿನಗಳಿಂದ ಸ್ಯಾಂಡಲ್​ವುಡ್​ನಲ್ಲಿ ಸ್ಟಾರ್ ವಾರ್ ಭಾರಿ ಸದ್ದು ಮಾಡುತ್ತಿದೆ. ಯಾವ್ಯಾವುದೋ ಹೇಳಿಕೆ, ಕಮೆಂಟ್​​ಗಳನ್ನು ಎಲ್ಲೆಲ್ಲೋ ಲಿಂಕ್ ಮಾಡಿ ಚಂದನವನದಲ್ಲಿ ಸದ್ಯ ಇದುವೇ ದೊಡ್ಡ ಚರ್ಚೆಯ ವಿಷಯ ಎನ್ನುವಂತಾಗಿದೆ. ಇದೀಗ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. 15 ಖಾತೆ, 150 ಪೋಸ್ಟ್‌ ವಿರುದ್ಧ ದೂರು ನೀಡಿದ್ದಾರೆ.

ಇದನ್ನೂ ಓದಿ: ರಾಯರ ದರ್ಶನ ಪಡೆದ ಡಿವೈನ್‌ ಸ್ಟಾರ್!‌ – ಮಂತ್ರಾಲಯಕ್ಕೆ ಭೇಟಿ ನೀಡಿದ ರಿಷಬ್‌ ಶೆಟ್ಟಿ ಕುಟುಂಬ

ಅಶ್ಲೀಲ ಕಾಮೆಂಟ್ ವಿಚಾರವಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅಶ್ಲೀಲ ಕಾಮೆಂಟ್ ಮಾಡಿದ 15 ಇನ್​ಸ್ಟಾ ID, 150ಕ್ಕೂ ಹೆಚ್ಚು ಕಾಮೆಂಟ್​ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮೀ ದೂರು ನೀಡಿದ್ದಾರೆ. ಫ್ಯಾನ್ಸ್ ವಾರ್ ಬೆನ್ನಲ್ಲೇ ಸುದೀಪ್ ಫ್ಯಾನ್ಸ್​ ಹೆಸರಲ್ಲಿ ವಿಜಯಲಕ್ಷ್ಮೀಯವರಿಗೆ ಅಶ್ಲೀಲ ಪದಗಳನ್ನ ಉಪಯೋಗಿಸಿ ಅಶ್ಲೀಲವಾಗಿ ಕಾಮೆಂಟ್ ಬರುತ್ತಿತ್ತು. ಈ ಹಿನ್ನಲೆ, ವಿಜಯಲಕ್ಷ್ಮೀ 15 ಇನ್​ಸ್ಟಾ ID, 150ಕ್ಕೂ ಹೆಚ್ಚು ಕಾಮೆಂಟ್​ ವಿರುದ್ಧ  CCB ಜಂಟಿ ಆಯುಕ್ತ ಅಜಯ್ ಹಿಲೋರಿಗೆ ದೂರು ನೀಡಿದ್ದಾರೆ.

ಸಾಕ್ಷಿಗಳ ಜೊತೆ ಠಾಣೆ ಬಾಗಿಲು ಬಡಿದಿರುವ ವಿಜಯಲಕ್ಷ್ಮೀ ಆರೋಪಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ನಟಿ ರಮ್ಯಾ ಕೂಡ ಹೀಗೆಯೇ ಮಾಡಿದ್ದರು. ಅಶ್ಲೀಲ ಕಾಮೆಂಟ್ ಮಾಡಿದವರ ವಿರುದ್ಧ ದೂರು ನೀಡಿದ್ದರು. ಪರಿಣಾಮ ಕೆಲ ಕಿಡಿಗೇಡಿಗಳು ಜೈಲಿಗೆ ಹೋಗಿ ಬಂದಿದ್ದಾರೆ. ಈ ವಿಚಾರ ತಿಳಿದು ಕೆಲವರು ಮೊಂಡಾಟ ಪ್ರದರ್ಶನ ಮಾಡಿದ್ದಾರೆ. ಇವರ ವಿರುದ್ಧವೂ ಪೊಲೀಸ್ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಲಿದೆ.

Shwetha M