ಕಿಚ್ಚನಿಗೆ ಮತ್ತೆ ಟಾಂಗ್‌ ಕೊಟ್ಟ ದರ್ಶನ್‌ ಪತ್ನಿ! – ಸುದೀಪ್‌ ಮುಂದಿನ ನಡೆ ಏನು?

ಕಿಚ್ಚನಿಗೆ ಮತ್ತೆ ಟಾಂಗ್‌ ಕೊಟ್ಟ ದರ್ಶನ್‌ ಪತ್ನಿ! – ಸುದೀಪ್‌ ಮುಂದಿನ ನಡೆ ಏನು?

ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಸ್ಟಾರ್‌ ವಾರ್‌ ಜೋರಾಗಿದೆ. ಇಷ್ಟು ದಿನ ಕಿಚ್ಚ ಸುದೀಪ್‌ ಫ್ಯಾನ್ಸ್‌ ಹಾಗೂ ದರ್ಶನ್‌ ಫ್ಯಾನ್ಸ್‌ ನಡುವೆ ಫೈಟ್‌ ನಡೆಯುತ್ತಿತ್ತು. ಆದ್ರೀಗ ಸುದೀಪ್‌ ಹಾಗೂ ದರ್ಶನ್‌ ಪತ್ನಿ ಮಧ್ಯೆ ಟಾಂಗ್‌ ವಾರ್‌ ನಡೆಯುತ್ತಿದೆ. ಇದೀಗ ದಾಸನ ಪತ್ನಿ ಮತ್ತೆ ಕಿಚ್ಚನಿಗೆ ಟಾಂಗ್‌ ಕೊಟ್ಟಿದ್ದಾರೆ.

ಇದನ್ನೂ ಓದಿ: ಹುಚ್ಚು ನಾಯಿ ಕಚ್ಚಿದ್ದ ಎಮ್ಮೆಯ ಹಾಲು, ಮೊಸರು ಕುಡಿದ 200 ಮಂದಿ! –  ಆ ಮೇಲೆ ಏನಾಯ್ತು ಗೊತ್ತಾ?  

ಕಿಚ್ಚ ಸುದೀಪ್  ಅವರು ಪೈರಸಿ ಪದ ಉಪಯೋಗಿಸದೇ ಹುಬ್ಬಳ್ಳಿಯಲ್ಲಿ ತಮ್ಮ ಅಭಿಮಾನಿಗಳಿಗೆ ಯುದ್ದಕ್ಕೆ ಕೊಟ್ಟ ಕರೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಸುದೀಪ್‌ಗೆ ಟಾಂಗ್ ಕೊಟ್ಟಿದ್ದರು. ಇದ್ರ ಬೆನ್ನಲ್ಲೇ  ಸುದೀಪ್-ದರ್ಶನ್ ಫ್ಯಾನ್ ವಾರ್ ಕೂಡ ತಾರಕಕ್ಕೇರಿತ್ತು. ಕೆಲವರು ವಿಜಯಲಕ್ಷ್ಮಿ ಅವರ ಬಗ್ಗೆ ಅಶ್ಲೀಲವಾಗಿ ಕಾಮೆಂಟ್ ಕೂಡ ಮಾಡಿದ್ದರು. ಇದರಿಂದ ಕೆರಳಿದ ವಿಜಯಲಕ್ಷ್ಮಿ ಅವರು ಪೊಲೀಸರಿಗೆ ದೂರು ನೀಡುವ ಮೂಲಕ ಕಾನೂನು ಸಮರ ಸಾರಿದ್ದರು. ಬಳಿಕ ಕ್ಲಾಸ್ ಫ್ಯಾನ್ಸ್‌ಗೆ ಇದು ಎಚ್ಚರಿಕೆ ಎಂದಿದ್ದರು. ವಿಜಯಲಕ್ಷ್ಮಿ ಮಾತಿಗೆ ತಿರುಗೇಟು ನೀಡಿದ್ದ ಸುದೀಪ್, ನಾವು ಕಪಾಳಕ್ಕೆ ಹೊಡೆಸಿಕೊಳ್ಳುವವರಲ್ಲ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ವಿಜಯಲಕ್ಷ್ಮಿ ಅವರು ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ವಿಜಯಲಕ್ಷ್ಮಿ ದರ್ಶನ್, ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ಇಂತಹ ಮೀಮ್ಸ್ ಮೂಲಕ ಟ್ರೋಲ್ ಮಾಡುವುದು ಸಾಮಾನ್ಯ. ಆದರೆ ಮಹಿಳೆಯರು ಹೆಚ್ಚು ಬಲಿಷ್ಠರು (Nowdays its normal to troll women by such memes. but women’s are strongest) ಎಂಬ ಸಂದೇಶವಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಈ ಮೂಲಕ ವಿಜಯಲಕ್ಷ್ಮಿ ತಮ್ಮ ಮೇಲಿನ ಟೀಕೆಗಳಿಗೆ ಉತ್ತರ ನೀಡಿದ್ದಾರೆ. ಕಿಚ್ಚ ಸುದೀಪ್ ಹಾಗೂ ವಿಜಯಲಕ್ಷ್ಮಿ ನಡುವಿನ ಸೋಷಿಯಲ್ ಮೀಡಿಯಾ ಪೋಸ್ಟ್‌ ವಾರ್  ಯಾವ ತಿರುವು ಪಡೆದುಕೊಳ್ಳಲಿದೆ ಎಂದು ಕಾದುನೋಡ್ಬೇಕು.

Shwetha M