ಅಶ್ಲೀಲ ಕಮೆಂಟ್ ಕೇಸ್! – ವಿಜಯಲಕ್ಷ್ಮೀ ನಡೆ ವಿರುದ್ಧ ಪೊಲೀಸರಿಗೇ ಅಸಮಾಧಾನ!

ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ದಾಸ ಜೈಲು ಸೇರ್ತಿದ್ದಂತೆ ಅವರ ಸಿನಿಮಾ, ಮನೆ, ನ್ಯಾಯಾಂಗ ಜವಾಬ್ದಾರಿ ಈಗ ವಿಜಯಲಕ್ಷ್ಮೀ ಹೆಗಲೇರಿದೆ. ಡೆವಿಲ್ ಸಿನಿಮಾ ಪ್ರಚಾರದ ವೇಳೆ ಕೆಲವರು ವಿಜಯಲಕ್ಷ್ಮೀ ಬಗ್ಗೆ ಕೆಟ್ಟ ಕಾಮೆಂಟ್ ಮಾಡಿದ್ರು. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆದ್ರೀಗ ವಿಜಯಲಕ್ಷ್ಮೀ ನಡೆ ಪೊಲೀಸರಿಗೆ ತಲೆನೋವು ತಂದಿದೆ.
ಇದನ್ನೂ ಓದಿ: ಬಸ್ ಟಿಕೆಟ್ ದರ ಏರಿಕೆ? – KSRTC ನಿಗಮ ಪ್ರಕಟಣೆಯಲ್ಲಿ ಏನಿದೆ?
ಡೆವಿಲ್ ಸಿನಿಮಾ ಪ್ರಚಾರದ ವೇಳೆ ಕೆಲವರು ಅಶ್ಲೀಲ ಕಾಮೆಂಟ್ ಹಾಕಿದ್ದಾರೆ ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ ಆರೋಪ ಮಾಡಿದ್ರು. ವಿಜಯಲಕ್ಷ್ಮಿ ದರ್ಶನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲವಾಗಿ ಕಾಮೆಂಟ್ ಮಾಡಿದವರ ವಿರುದ್ಧ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ (CCB) ಕಳೆದ ಡಿಸೆಂಬರ್ನಲ್ಲಿ ದೂರು ಕೊಟ್ಟಿದ್ದರು. ಬಳಿಕ ಸರಿಯಾಗಿ ತನಿಖೆ ಮಾಡಿಲ್ಲ ಎಂದು ಆರೋಪ ಮಾಡಿದ್ದರು. ಹೀಗಾಗಿ ಸಿಸಿಬಿ ಪೊಲೀಸರು 3 ತಂಡಗಳಾಗಿ ತನಿಖೆ ಆರಂಭಿಸಿದ್ದರು. ಅಷ್ಟೇ ಅಲ್ಲದೆ ಮೆಟಾ ಸಂಸ್ಥೆಯಿಂದ ಕೆಟ್ಟ ಕಮೆಂಟ್ ಮಾಡಿದ್ದ ಖಾತೆಗಳ ಬಗ್ಗೆ ಮಾಹಿತಿ ಕೇಳಿದ್ದರು. ಒಟ್ಟಾರೆಯಾಗಿ ವಿಜಯಲಕ್ಷ್ಮಿ 18 ಅಕೌಂಟ್ಗಳ ವಿರುದ್ಧ ದೂರು ದಾಖಲಾಗಿತ್ತು. ಈಗಾಗಲೇ 8 ಜನರ ಅರೆಸ್ಟ್ ಆಗಿದೆ. ಆದ್ರೀಗ ವಿಜಯಲಕ್ಷ್ಮೀ ಅವರು ಪೊಲೀಸರ ತನಿಖೆಗೆ ಸಹಕರಿಸುತ್ತಿಲ್ಲ, ಫೋನ್ ರಿಸೀವ್ ಮಾಡ್ತಿಲ್ಲ, ನೋಟೀಸ್ಗೂ ಕೂಡ ಉತ್ತರ ಕೊಟ್ಟಿಲ್ಲ ಎನ್ನಲಾಗಿದೆ.
ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. . ಪ್ರಕರಣದ ತನಿಖೆಯ ಭಾಗವಾಗಿ, ವಿಜಯಲಕ್ಷ್ಮಿ ಅವರ 164ನೇ ಕಲಂನಡಿ ಹೇಳಿಕೆ ದಾಖಲಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಈ ಹೇಳಿಕೆ ನ್ಯಾಯಾಲಯದಲ್ಲಿ ದಾಖಲಾಗುವುದು. ಮುಂದಿನ ನ್ಯಾಯಾಂಗ ಕ್ರಮಗಳಿಗೆ ಕೂಡ ಪ್ರಮುಖ ದಾಖಲೆ ಆಗಲಿದೆ.

ನೋಡಿರಿ

