ದಳಪತಿ ಅರೆಸ್ಟ್ ಆಗಲ್ವಾ? – ತಮಿಳುನಾಡಲ್ಲಿ ಸಿಂಪಥಿ ಪಾಲಿಟಿಕ್ಸ್
ಸಾವಿನಲ್ಲೂ ರಾಜಕೀಯ ಬೇಕಾ?

ದಳಪತಿ ಅರೆಸ್ಟ್ ಆಗಲ್ವಾ? –   ತಮಿಳುನಾಡಲ್ಲಿ ಸಿಂಪಥಿ ಪಾಲಿಟಿಕ್ಸ್ಸಾವಿನಲ್ಲೂ ರಾಜಕೀಯ ಬೇಕಾ?

ಒಬ್ಬರಲ್ಲ ಇಬ್ಬರಲ್ಲ.. 40ಕ್ಕೂ ಹೆಚ್ಚು ಜನ ತಮ್ಮ ಮೆಚ್ಚಿನ ಫ್ಯಾನ್ಸ್ ನೋಡೋಕೆ ಹೋಗಿ ಮಸಣ ಸೇರಿದ್ದಾರೆ. ನವರಾತ್ರಿಯ ಸಂಭ್ರಮದಲ್ಲಿ ಕರಾಳ ಘಟನೆ ನಡೆದು ಹೋಗಿದೆ. ಒಬ್ಬ ವ್ಯಕ್ತಿಯನ್ನ ನೋಡೋಕೆ ಜನ ಪ್ರಾಣವನ್ನೇ ಬಲಿ ಕೊಡ್ತಾರೆ ಅಂದ್ರೆ ಇದ್ದಕ್ಕಿಂತ ದೊಡ್ಡ ದುರಂತ ಬೇರ ಇಲ್ಲ. ನಮ್ಮನ್ನ ಆಳುವ  ರಾಜಕಾರಣಿಗಳಾಗಲಿ, ಸಿನಿಮಾ ನಟರಾಗಲಿ , ಕ್ರಿಕೆಟ್ ಆಟಗಾರರು ಆಗಲಿ.. ಅವರನ್ನ ನೋಡಿದ ತಕ್ಷಣ ನಮಗೆ ಏನು ಸಿಗಲ್ಲ. ನಮ್ಮ ಮನೆಯಲ್ಲಿ ಇರೋ ಕಷ್ಟ ಸರಿ ಹೋಗಲ್ಲ. ಅವನ್ನ ನೋಡಿದ ತಕ್ಷಣ ನಮ್ಮ ಸಾಲ ಅವರು ಕಟ್ಟಲ್ಲ. ಅಭಿಮಾನ ಇರಲಿ ಅದು ಮನಸ್ಸಿನಲ್ಲಿ ಇರಲಿ..  ನಮ್ಮ ಜೀವ ಬಲಿ ಕೊಟ್ಟು ನಮ್ಮ ಕುಟುಂಬಗಳನ್ನ ತಬ್ಬಲಿ ಮಾಡೋದು ಯಾಕೆ.. ನೋಡಿ 10-20 ಲಕ್ಷ  ಕೊಟ್ಟು ಅವರು ಕೈ ತೊಳಕೊಂಡು ಸುಮ್ಮನೆ ಇರ್ತಾರೆ. ಆದ್ರೆ ನಮ್ಮ ಫ್ಯಾಮೀಲಿ ಜೀವನ ಪರ್ಯಾಂತ ಆ ನೋವು ಪಡಬೇಕು.  ಕರೂರು ಕಾಲ್ತುಳಿತ ದುರಂತ ಆದ್ರೂ ಮೇಲೆ ಕೇವಲ ಟಿವಿಕೆ ಪ್ರಮುಖರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಆದ್ರೆ, ಇಷ್ಟು ದೊಡ್ಡ ದುರಂತ ಸಂಭವಿಸಿದ್ರೂ ವಿಜಯ್​ ವಿರುದ್ಧ ಕ್ರಮಕ್ಕೆ ತಮಿಳುನಾಡು ಸರ್ಕಾರ ಮುಂದಾಗಿಲ್ಲ. ಎಫ್ಐಆರ್ ಕೂಡ ಹಾಕಿಲ್ಲ. ಇದ್ರಲ್ಲೂ ರಾಜಕೀಯ ನಡೆಯುತ್ತಿದೆ.

ಇದನ್ನೂ ಓದಿ: ಮೋದಿ ಟ್ವಿಟ್‌ಗೆ ಉರಿದುಕೊಂಡ ಮೊಹ್ಸಿನ್ ನಖ್ವಿ – ನಾವೇ ಗೆದ್ವಿ ಅಂತ ಮತ್ತೆ ಬಿಟ್ಟಿ ಬಿಲ್ಡಪ್

40ಕ್ಕೂ ಹೆಚ್ಚು  ಜನ ದಳಪತಿ ರ್ಯಾಲಿ ಸತ್ರೂ ಯಾಕೆ ತಮಿಳುನಾಡು ಸರ್ಕಾರ ವಿಜಯ್ ದಳಪತಿ ವಿರುದ್ಧ FIR ಹಾಕಿಲ್ಲ, ಅರೆಸ್ಟ್ ಮಾಡಿಲ್ಲ ಅನ್ನೋ ಪ್ರಶ್ನೆ ಕಾಡುತ್ತೆ. ಇದ್ದಕ್ಕೆ ಸಾಕಷ್ಟು ಕಾರಣ ಇದೆ. ಅದೇನ್ ಅಂದ್ರೆ  ತಮಿಳುನಾಡಲ್ಲಿ ದೊಡ್ಡ ಮಟ್ಟದಲ್ಲಿ ದಳಪತಿ ವಿಜಯ್ ಅಲೆ ಇದೆ. ವಿಜಯ್ ರಾಜಕೀಯ ಪಕ್ಷದ ಱಲಿಗೆ ಜನಸಾಗರ ಸೇರುತ್ತಿದೆ. ಹೀಗಾಗಿ ಕಾಲ್ತುಳಿತ ಕೇಸ್‌ನಲ್ಲಿ ವಿಜಯ್ ಬಂಧಿಸಿದ್ರೆ ಸಿಂಪಥಿ ಸೃಷ್ಟಿ ಆಗುವ ಸಾಧ್ಯತೆ. ಇದು ನಟ ವಿಜಯ್ ಮೇಲೆ ಅನುಕಂಪಕ್ಕೂ ಕಾರಣವಾಗಬಹುದು. ಡಿಎಂಕೆ ಪಕ್ಷದ ವಿರುದ್ಧದ ಅಭಿಪ್ರಾಯಕ್ಕೆ ಕಾರಣವಾಗಬಹುದು. ಇದು ಎಲೆಕ್ಷನ್ ಮೇಲೆ ಎಫೆಕ್ಟ್ ಆಗಬಹುದು. ಆದ್ದರಿಂದ ನ್ಯಾಯಾಂಗ ತನಿಖೆ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲು ಡಿಎಂಕೆ ಸರ್ಕಾರ ಚಿಂತನೆ ನಡೆಸಿದೆ.

ಯಾಕೆ ದಳಪತಿ ಮೇಲೆ FIR ಆಗಿಲ್ಲ? 

ಕಾರಣ – 1:

ತಮಿಳುನಾಡಲ್ಲಿ ನಟ ವಿಜಯ್​ಗೆ ಅಭಿಮಾನಿಗಳ ದೊಡ್ಡ ಬಳಗ ಇದೆ
ಕಾರಣ – 2 :

ಎಫ್​ಐಆರ್​ ದಾಖಲಾದ್ರೆ ಅಭಿಮಾನಿಗಳು ರೊಚ್ಚಿಗೇಳೋ ಸಾಧ್ಯತೆ
ಕಾರಣ – 3 :

ಫ್ಯಾನ್ಸ್​ ವಿರೋಧ, ರಾಜಕೀಯವಾಗಿ ಸರ್ಕಾರಕ್ಕೆ ಮುಳುವಾಗೋ ಸಾಧ್ಯತೆ
ಕಾರಣ – 4 :

ಡಿಎಂಕೆ ಪಕ್ಷದ ವಿರುದ್ಧ ಪವರ್​ ಕಟ್ ಮಾಡಿಸಿರೋ ಆರೋಪ ಕೇಳಿ ಬಂದಿದೆ
ಕಾರಣ – 5 :

ತನಿಖೆ ಮುಗಿಯೋವರೆಗೂ ವಿಜಯ್​ ವಿರುದ್ಧ ಕೇಸ್​ ದಾಖಲಿಸೋದು ಸರಿಯಲ್ಲ
ಕಾರಣ – 6 :

ಹಾಗೇ ಮಾಡಿದ್ರೆ ಒಬ್ಬ ವ್ಯಕ್ತಿಯನ್ನ ಟಾರ್ಗೆಟ್​ ಮಾಡಿದ್ದಂತೆ ಆಗುತ್ತೆ ಎಂಬ ಆಲೋಚನೆ
ಕಾರಣ – 7 :

ವಿಜಯ್​ನ ಟಾರ್ಗೆಟ್​ ಮಾಡಿದ್ರೆ, ತಮಿಳುನಾಡಿನಾದ್ಯಂತ ಫ್ಯಾನ್ಸ್​ ಸಿಟ್ಟು ಸ್ಫೋಟ
ಕಾರಣ – 8 :

ಟಿವಿಕೆ ಮುಖಂಡರ ಮೇಲೆ ಎಫ್​ಐಆರ್​ ದಾಖಲು ಮಾಡಿ, ಎಚ್ಚರಿಕೆ ಹೆಜ್ಜೆ

ನ್ನು ಈ ಕಾಲ್ತುಳಿತ ವಿಜಯ್‌ಗೆ ಸಾಕಷ್ಟು ಎಫೆಕ್ಟ್ ಆಗಲಿದೆ. ಮುಂದೆ ಇಂತಹ   ಸಮಾವೇಶ ಮಾಡೋಕೆ ಅವಕಾಶ ಸಿಗದೇ ಕೂಡ ಇರಬಹುದು. ಪ್ರಕರಣದ ಸಂಪೂರ್ಣವಾಗಿ ತನಿಖೆ ನಡೆಯುವವರೆಗೂ ವಿಜಯ್ ಅವರ TVK ಪಕ್ಷದ ಸಾರ್ವಜನಿಕ ಕಾರ್ಯಕ್ರಮಗಳಿಗೆ ತಡೆ ನೀಡುವಂತೆ ಸಂತ್ರಸ್ತರೊಬ್ಬರೊಬ್ಬರು ಮದ್ರಾಸ್ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಹೀಗಾಗಿ ಕೋರ್ಟ್ ಪರ್ಮಿಷನ್ ಕೊಟ್ಟಿಲ್ಲ ಅಂದ್ರೆ ವಿಜಯ್ ಯಾವುದೇ ರ್ಯಾಲಿ ಮಾಡೋಕೆ ಆಗಲ್ಲ. ಆಗ ವಿಜಯ್ ದಳಪತಿ ಪಬ್ಲಿಸಿಟಿ ಕಮ್ಮಿಯಾಗಬಹುದು.

 

 

Kishor KV