ವಿಜಯ್ ಹಜಾರೆಯಲ್ಲಿ ಕನ್ನಡಿಗರ ಕೇಕೆ – ದೇಶೀಯ ಟೂರ್ನಿಗಳಿಗಷ್ಟೇ ಸೀಮಿತನಾ?
IPLಗೂ ಬೇಡವಾಗಿದ್ದೇಕೆ ಮಯಾಂಕ್?

2025-26ನೇ ಸಾಲಿನ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಪ್ರತೀ ತಂಡಗಳು ಅದ್ಭುತ ಪ್ರದರ್ಶನ ನೀಡ್ತಿವೆ. ಶತಕಗಳ ಸುರಿಮಳೆಯೇ ಆಗ್ತಿದೆ. ಌಂಡ್ ಟೂರ್ನಿ ಇತಿಹಾಸದಲ್ಲೇ ಹೈಯೆಸ್ಟ್ ರನ್ ಸ್ಕೋರ್, ಹೈಯೆಸ್ಟ್ ರನ್ ಚೇಸಿಂಗ್ ದಾಖಲೆಯೂ ಆಗಿದೆ. ಈ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡದ ಪ್ರದರ್ಶನ ಕೂಡ ನೆಕ್ಸ್ಟ್ ಲೆವೆಲ್ನಲ್ಲಿದೆ. ಆದ್ರೆ ಕೆಚ್ಚೆದೆಯ ಪ್ರದರ್ಶನ ನೀಡ್ತಿದ್ರೂ ಕನ್ನಡಿಗರು ದೇಶೀಯ ಟೂರ್ನಿಗಳಿಗಷ್ಟೇ ಸೀಮಿತವಾಗಿದ್ದಾರೆ. ಌಂಡ್ ನಾಯಕ ಮಯಾಂಕ್ ಅಗರ್ವಾಲ್ ಐಪಿಎಲ್ಗೂ ಬೇಡವಾಗಿದ್ದಾರೆ.
ಇದನ್ನೂ ಓದಿ : BCCI ತಲೆಬಿಸಿಗೆ ಶಮಿ ಮದ್ದು – NZ ಸರಣಿಗೆ ಸೆಲೆಕ್ಟ್ ಮಾಡಿದ್ರಷ್ಟೇ ಸೇಫ್
ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಎಲೈಟ್ ಎ ಗುಂಪಿನಲ್ಲಿದೆ. ಈ ಗ್ರೂಪ್ನಲ್ಲಿ ಪ್ರಸ್ತುತ ಪಾಯಿಂಟ್ಸ್ ಪಟ್ಟಿಯಲ್ಲಿ ಕರ್ನಾಟಕ ಸೆಕೆಂಡ್ ಪ್ಲೇಸ್ನಲ್ಲಿದೆ. ಮಧ್ಯಪ್ರದೇಶ ತಂಡ ಫಸ್ಟ್ ಪ್ಲೇಸ್ನಲ್ಲಿದೆ. ಉಭಯ ತಂಡಗಳು ಎಲ್ಲಾ ಪಂದ್ಯಗಳನ್ನ ಗೆದ್ದಿದ್ರು ಕೂಡ ನೆಟ್ ರನ್ರೇಟ್ ಆಧಾರದಲ್ಲಿ ಮಧ್ಯಪ್ರದೇಶ ಟಾಪ್ ಪ್ಲೇಸ್ನಲ್ಲಿದೆ. ಜಾರ್ಖಂಡ್ ವಿರುದ್ಧ ಮೊದಲ ಪಂದ್ಯ ಆಡಿದ್ದ ಕರ್ನಾಟಕ ಬರೋಬ್ಬರಿ 412 ರನ್ಗಳನ್ನ ಚೇಸ್ ಮಾಡಿ ದಾಖಲೆ ಬರೆದಿತ್ತು. ವಿಜಯ್ ಹಜಾರೆಯಲ್ಲಿ ಇದುವರೆಗೂ ಚೇಸಿಂಗ್ ಮಾಡಲಾದ ಹೈಯೆಸ್ಟ್ ಸ್ಕೋರ್ ಇದೇ ಆಗಿತ್ತು. ಌಂಡ್ ಸೆಕೆಂಡ್ ಮ್ಯಾಚಲ್ಲಿ ಕೇರಳ ವಿರುದ್ಧ 8 ವಿಕೆಟ್ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದ್ರು. ಮೂರನೇ ಮ್ಯಾಚಲ್ಲಿ ತಮಿಳುನಾಡು ವಿರುದ್ಧ 4 ವಿಕೆಟ್ಗಳ ಜಯ, ಇನ್ನು ನಾಲ್ಕನೇ ಮ್ಯಾಚಲ್ಲಿ ಪುದುಚೇರಿ ವಿರುದ್ಧ 67 ರನ್ಗಳ ಬೃಹತ್ ಅಂತರದ ವಿಕ್ಟರಿ. ಸೋ ಅಲ್ಲಿಗೆ ನಾಲ್ಕೂ ಮ್ಯಾಚಲ್ಲೂ ಬೊಂಬಾಟ್ ಪ್ರದರ್ಶನ ನೀಡಿಯೇ ಗೆದ್ದಿದ್ದಾರೆ. ಹೀಗಿದ್ರೂ ದೇಶೀಯ ಟೂರ್ನಿಗಳಿಗೆ ಮಾತ್ರವೇ ನಮ್ಮ ಕನ್ನಡಿಗರು ಸೀಮಿತವಾದ್ರಾ ಅನ್ನೋ ಅನುಮಾನ ಶುರುವಾಗಿದೆ.
ಡೊಮೆಸ್ಟಿಕ್ ಗಷ್ಟೇ ಕರುಣ್, ಪಡಿಕ್ಕಲ್, ಮಯಾಂಕ್ ಸೀಮಿತವಾದ್ರಾ?
ಌಕ್ಚುಲಿ ಟೂರ್ನಿಯಲ್ಲಿ ಕರ್ನಾಟಕದ ಅದ್ಭುತ ಜರ್ನಿಗೆ ಕಾರಣವೇ ಆಟಗಾರರ ಅದ್ಭುತ ಪ್ರದರ್ಶನ. ಅದ್ರಲ್ಲೂ ನಾಯಕ ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್ ಮತ್ತು ಕರುಣ್ ನಾಯರ್ ಅಂತಾ ಎಕ್ಸ್ಟ್ರಾರ್ಡಿನರಿ ಪರ್ಫಾಮೆನ್ಸ್ ನೀಡಿದ್ದಾರೆ. ಟೀಂ ಇಂಡಿಯಾ ಪರ ಬೆರಳೆಣಿಕೆ ಪಂದ್ಯಗಳನ್ನಷ್ಟೇ ಆಡಿರೋ ಈ ಮೂವರು ಸದ್ಯ ಡೊಮೆಸ್ಟಿಕ್ ಕ್ರಿಕೆಟ್ಗಷ್ಟೇ ಸೀಮಿತವಾಗಿದ್ದಾರೆ. ಹೀಗಿದ್ರು ಮೈದಾನದಲ್ಲಿ ತಮ್ಮ ಪ್ರತಿಭೆ ಎಂಥಾದ್ದು ಅನ್ನೋದನ್ನ ತೋರಿಸ್ತಿದ್ದಾರೆ. ದೇವದತ್ ಪಡಿಕ್ಕಲ್ ಅಂತೂ ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರು ಶತಕ ಬಾರಿಸಿದ್ದಾರೆ. ಕರುಣ್ ನಾಯರ್ ಕೂಡ ಶತಕ ಬಾರಿಸಿದ್ರು. ಇನ್ನು ಮಯಾಂಕ್ ಅಗರ್ವಾಲ್ 2 ಅರ್ಧಶತಕ ಮತ್ತು 1 ಶತಕ ಬಾರಿಸಿದ್ದಾರೆ. ಇವ್ರನ್ನ ಹೊರತುಪಡಿಸಿಯೂ ಉಳಿದ ಆಟಗಾರರಿಂದಲೂ ಅದ್ಭುತ ಪ್ರದರ್ಶನ ಬಂದಿದೆ. ಬಟ್ ದೇಶೀಯ ತಂಡದ ಪರ ಆಡಿಯೂ ಈಗ ಡೊಮೆಸ್ಟಿಕ್ನಲ್ಲಿ ಮಾತ್ರ ಸೀಮಿತವಾಗಿದ್ದಾರೆ. ಅದ್ರಲ್ಲೂ ಮಯಾಂಕ್ ಅಗರ್ವಾಲ್ ಅಂತೂ ಎಂಥಾ ಟ್ಯಾಲೆಂಟೆಡ್ ಪ್ಲೇಯರ್. ವಿಜಯ್ ಹಜಾರೆಯಲ್ಲಿ ಕರ್ನಾಟಕ ತಂಡವನ್ನ ಅದ್ಭುತವಾಗಿ ಲೀಡ್ ಮಾಡ್ತಿರೋ ಮಯಾಂಕ್ ಐಪಿಎಲ್ಗೂ ಕೂಡ ಸೆಲೆಕ್ಟ್ ಆಗಿಲ್ಲ.
2026ರ ಐಪಿಎಲ್ ಗೆ ಅನ್ ಸೋಲ್ಡ್ ಆಗಿರುವ ಮಯಾಂಕ್!
2025ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಚಾಂಪಿಯನ್ ಪಟ್ಟಕ್ಕೇರೋಕೆ ಮಯಾಂಕ್ ಅಗರ್ವಾಲ್ ಕೂಡ ಕಾರಣ. ದೇವದತ್ ಪಡಿಕ್ಕಲ್ ಇಂಜುರಿ ಕಾರಣಕ್ಕೆ ತಂಡದಿಂದ ಹೊರ ಬಿದ್ಮೇಲೆ ಬದಲಿ ಆಟಗಾರನಾಗಿ ಮಯಾಂಕ್ ಟೀಂ ಸೇರ್ಕೊಂಡಿದ್ರು. ಕೊನೇ ಹಂತದ ಪಂದ್ಯಗಳಲ್ಲಿ ಒಳ್ಳೆ ಇನ್ನಿಂಗ್ಸ್ ಆಗಿ ಆರ್ಸಿಬಿ ಗೆಲುವಿಗೆ ಕಾರಣರಾಗಿದ್ರು. ಅದ್ರಲ್ಲೂ ಲೀಗ್ ಹಂತದ ಕೊನೇ ಪಂದ್ಯ ಲಕ್ನೋ ವಿರುದ್ಧ 227 ರನ್ಗಳ ಟಾರ್ಗೆಟ್ ಬೆನ್ನತ್ತಿದಾಗ 23 ಎಸೆತಗಳಲ್ಲಿ 41 ರನ್ ಸಿಡಿಸಿ ಒಳ್ಳೆ ಸಾಥ್ ಕೊಟ್ಟಿದ್ರು. ಹಾಗೇಈ ಪಂದ್ಯದಲ್ಲಿ ಜಿತೇಶ್ ಶರ್ಮಾ 85 ರನ್ ಸಿಡಿಸಿ ಬಿಗ್ ಸ್ಕೋರ್ ಚೇಸಿಂಗ್ ಮಾಡಿದ್ರು. ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳಲ್ಲಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ರು. 2025ರಲ್ಲಿ ಆರ್ಸಿಬಿ ಪರ 4 ಇನ್ನಿಂಗ್ಸ್ ಗಳಿಂದ 95 ರನ್ಸ್ ಸಿಡಿಸಿದ್ರು. ಬಟ್ ಬ್ಯಾಡ್ಲಕ್ ಅಂದ್ರೆ 2026ರ ಐಪಿಎಲ್ಗೆ ಯಾವ ಟೀಂ ಕೂಡ ಅಗರ್ವಾಲ್ರನ್ನ ಪರ್ಚೇಸ್ ಮಾಡ್ಲಿಲ್ಲ. ಆರ್ಸಿಬಿಯಿಂದ ರಿಲೀಸ್ ಆಗಿದ್ದ ಮಯಾಂಕ್ 75 ಲಕ್ಷ ರೂಪಾಯಿ ಮೂಲ ಬೆಲೆಯೊಂದಿಗೆ ಐಪಿಎಲ್ ಮಿನಿ ಆಕ್ಷನ್ನಲ್ಲಿ ಭಾಗಿಯಾಗಿದ್ರು. ಆದ್ರೆ ಯಾವುದೇ ಫ್ರಾಂಚೈಸಿ ಅವ್ರನ್ನ ಖರೀದಿ ಮಾಡ್ಲಿಲ್ಲ. ಸೋ ಅನ್ಸೋಲ್ಡ್ ಆಗಿದ್ದಾರೆ. ಕಳೆದ ವರ್ಷವೂ ಮಯಾಂಕ್ ಅನ್ಸೋಲ್ಡ್ ಆಗಿದ್ರು. ಬಟ್ ಆರ್ಸಿಬಿ ಫ್ರಾಂಚೈಸಿ ಪಡಿಕ್ಕಲ್ಗೆ ಬದಲಿಯಾಗಿ ಕೊನೇ ಹಂತದಲ್ಲಿ ಖರೀದಿ ಮಾಡಿತ್ತು. ಸದ್ಯ ವಿಜಯ್ ಹಜಾರೆಯಲ್ಲಿ ಕರ್ನಾಟಕ ಪರವೂ ಉತ್ತಮ ಪ್ರದರ್ಶನ ನೀಡ್ತಿದ್ದಾರೆ. ಕಳೆದ ಬಾರಿ ಚಾಂಪಿಯನ್ ಆಗಿರೋ ಕರ್ನಾಟಕ ತಂಡ ಈ ವರ್ಷವೂ ಚಾಂಪಿಯನ್ ಆಗೋ ಫೇವರೆಟ್ ಟೀಂ ಎನಿಸಿಕೊಳ್ತಿದೆ. ಪ್ರದರ್ಶನ ಕೂಡ ಅದ್ಭುತವಾಗಿದೆ.

ನೋಡಿರಿ

