ಬೆಂಗಳೂರಿನಲ್ಲೇ ನಡೆಯಲಿದೆ ವಿಜಯ್ ಹಜಾರೆ ಟೂರ್ನಿ ಪಂದ್ಯ! – ಆದ್ರೂ ಕೊಹ್ಲಿನ ಫ್ಯಾನ್ಸ್‌ ನೋಡುವಂತಿಲ್ಲ!

ಬೆಂಗಳೂರಿನಲ್ಲೇ ನಡೆಯಲಿದೆ ವಿಜಯ್ ಹಜಾರೆ ಟೂರ್ನಿ ಪಂದ್ಯ! – ಆದ್ರೂ ಕೊಹ್ಲಿನ ಫ್ಯಾನ್ಸ್‌ ನೋಡುವಂತಿಲ್ಲ!

ಎಲ್ಲವೂ ಅಂದುಕೊಂಡಂತೆ ನಡಿತಾ ಇರ್ತಿದ್ರೆ, ನಾಳೆ ಚಿನ್ನಸ್ವಾಮಿಯಲ್ಲಿ ವಿಜಯ್‌ ಹಜಾರೆ ಟೂರ್ನಿ ಪಂದ್ಯ ನಡೆಯಬೇಕಿತ್ತು. ಆದ್ರೆ ಪೊಲೀಸ್‌ ಇಲಾಖೆ ಶಾಕ್‌ ಕೊಟ್ಟಿದೆ. ಚಿನ್ನಸ್ವಾಮಿಯಲ್ಲಿ ಪಂದ್ಯ ನಡೆಸಲು ಅನುಮತಿ ನಿರಾಕರಿಸಿದೆ. ಆದ್ರೀಗ ಬೆಂಗಳೂರಿನಲ್ಲೇ ವಿಜಯ್‌ ಹಜಾರೆ ಟೂರ್ನಿ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ಕಾಂತಾರ ಚಾಪ್ಟರ್‌ 1 ಬೀಟ್‌ ಮಾಡಿದ ಧುರಂಧರ್! – ನಂ.1 ಪಟ್ಟಕ್ಕೇರಿದ ರಣವೀರ್‌ ಸಿಂಗ್‌ ಸಿನಿಮಾ!

ನಾಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ದೆಹಲಿ ಮತ್ತು ಆಂಧ್ರಪ್ರದೇಶ ನಡುವಿನ ವಿಜಯ್ ಹಜಾರೆ ಟೂರ್ನಿಯ ಪಂದ್ಯಕ್ಕೆ ಅನುಮತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಿನ್ನಸ್ವಾಮಿಯಲ್ಲಿ ನಡೆಯಬೇಕಿದ್ದ ಪಂದ್ಯವನ್ನ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಪಂದ್ಯ ಕೆಂಪೇಗೌಡ ವಿಮಾನ ನಿಲ್ದಾಣದ ಸಮೀಪ ಇರುವ ಸೆಂಟರ್‌ ಆಫ್‌ ಎಕ್ಸೆಲೆನ್ಸ್‌ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ವಿರಾಟ್‌ ಕೊಹ್ಲಿ ಮೊದಲ ಬಾರಿಗೆ ಬೆಂಗಳೂರಿನ ಹೊರವಲಯದಲ್ಲಿ ಬಿಸಿಸಿಐ ನಿರ್ಮಾಣ ಮಾಡಿರುವ ಸೆಂಟರ್‌ ಆಫ್‌ ಎಕ್ಸೆಲೆನ್ಸ್‌ ಮೈದಾನದಲ್ಲಿ ದೆಹಲಿ ಪರ ನಾಳೆ ಕಣಕ್ಕೆ ಇಳಿಯಲಿದ್ದಾರೆ. ಈ ಪಂದ್ಯಗಳ ವೀಕ್ಷಣೆಗೆ ಪ್ರೇಕ್ಷಕರಿಗೆ ಅನುಮತಿ ಇಲ್ಲ.

40 ಎಕರೆ ವಿಸ್ತೀರ್ಣದ ಕ್ಯಾಂಪಸ್‌ನಲ್ಲಿರುವ ಈ ಸೌಲಭ್ಯವು ಪ್ರಥಮ ದರ್ಜೆ ಕ್ರಿಕೆಟ್ ಅನ್ನು ಆಯೋಜಿಸಲು ಐಸಿಸಿಯ ನಿಯಮಗಳ ಪ್ರಕಾರ ನಿರ್ಮಿಸಲಾದ ಮೂರು ಮೈದಾನಗಳನ್ನು ಒಳಗೊಂಡಿದೆ. 2024 ರಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ ಮತ್ತು ಕಾರ್ಯದರ್ಶಿಯಾಗಿದ್ದ ಜಯ್‌ ಶಾ ಸೆಂಟರ್‌ ಆಫ್‌ ಎಕ್ಸೆಲೆನ್ಸ್‌ ಕ್ಯಾಂಪಸ್‌ ಅನ್ನು ಉದ್ಘಾಟಿಸಿದ್ದರು.

Shwetha M