ದಳಪತಿ ಗ್ಯಾರೆಂಟಿಗೆ 6 ರಿಂದ 7 ಲಕ್ಷ ಕೋಟಿ ಬೇಕು! – ವಿಜಯ್‌ ಬಗ್ಗೆ ಹೆಚ್‌ಡಿಕೆ ಶಾಕಿಂಗ್‌ ಮಾತು!

ದಳಪತಿ ಗ್ಯಾರೆಂಟಿಗೆ 6 ರಿಂದ 7 ಲಕ್ಷ ಕೋಟಿ ಬೇಕು! – ವಿಜಯ್‌ ಬಗ್ಗೆ ಹೆಚ್‌ಡಿಕೆ ಶಾಕಿಂಗ್‌ ಮಾತು!

ತಮಿಳುನಾಡು ರಾಜಕೀಯ ರೋಚಕ ಬೆಳವಣಿಗೆಗಳನ್ನು ಕಾಣುತ್ತಿದೆ. ಸರ್ಕಾರ ರಚನೆಗೆ ಎಲ್ಲಾ ಪಕ್ಷಗಳು ಸರ್ಕಸ್​ ಮಾಡುತ್ತಿದೆ. ಇದೀಗ ದಳಪತಿ ವಿಜಯ್‌ ನೀಡಿರುವ ಉಚಿತ ಗ್ಯಾರಂಟಿಗಳ ಬಗ್ಗೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಮಾತನಾಡಿದ್ದಾರೆ. ತಮಿಳುನಾಡಿನ ಬಜೆಟ್ ವರ್ಷಕ್ಕೆ 3.40 ಲಕ್ಷ ಕೋಟಿ ಇದೆ. ಆದರೆ, ವಿಜಯ್‌ ಉಚಿತ ಗ್ಯಾರಂಟಿಗಳನ್ನು ನೀಡಲು 6 ರಿಂದ 7 ಲಕ್ಷ ಕೋಟಿ ಬೇಕು. ಅದ್ಯಾವ ರೀತಿ ಹಣ ಹೊಂದಿಸುತ್ತಾರೆ ಕಾದು ನೋಡಬೇಕು ಎಂದಿದ್ದಾರೆ.

ಇದನ್ನೂ ಓದಿ: ಮಧ್ಯಾಹ್ನದ ಬಿಸಿಯೂಟದಲ್ಲಿ ಹಾವಿನ ಮರಿ ಪತ್ತೆ! – ಊಟ ಸೇವಿಸಿದ ನೂರಾರು ಮಕ್ಕಳು ಅಸ್ವಸ್ಥ!

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಹೆಚ್‌ಡಿಕೆ, ತಮಿಳುನಾಡಿದ ರಾಜಕಾರಣದ ಬಗ್ಗೆ ಮೊದಲಿನಿಂದಲೂ ಎಲ್ಲರಿಗೂ ಗೊತ್ತಿದೆ. ಅಲ್ಲಿನ ಜನ ಸ್ವಲ್ಪ ಸಿನಿಮಾ ಪ್ರಭಾವಕ್ಕೆ ಒಳಗಾಗುತ್ತಾರೆ. ಹೀಗಾಗಿ ಹೊಸ ವ್ಯಕ್ತಿಗೆ ಅಧಿಕಾರ ನೀಡಲು ಜನ ಬಯಸಿದ್ದಾರೆ. ಮಾಧ್ಯಮಗಳು ಡಿಎಂಕೆ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದಿದ್ದವು, ಆದರೆ ವಿಜಯ್ ಅವರ ಈ ಸಾಧನೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ.  ಒಂದು ತಿಂಗಳ ಹಿಂದೆ ನಮ್ಮ ಸ್ನೇಹಿತರಿಗೆ ಹೇಳಿದ್ದೆ. ಕಳೆದ 50 ವರ್ಷಗಳಿಂದ ಎರಡು ದ್ರಾವಿಡ ಪಕ್ಷಗಳ ಆಡಳಿತ ಏನೆಂದು ಅಲ್ಲಿಯ ಜನ ನೋಡಿದ್ದಾರೆ. ಒಂದು ಹೊಸ ವ್ಯವಸ್ಥೆ ತರಲು ಜನಸಾಮಾನ್ಯರು ನಿರ್ಧಾರ ಮಾಡ್ತಾರೆ ಎಂಬ ನನ್ನ ನಿರೀಕ್ಷೆ ನಿಜವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ನಡವಳಿಕೆ ಬಗ್ಗೆ ನಾನು ಟೀಕೆ ಮಾಡ್ಬೇಕಾ? ನಾನು ಚರ್ಚೆ ಮಾಡುವುದು ಅನವಶ್ಯಕ. ಕಾಂಗ್ರೆಸ್ ಪಕ್ಷ ಯಾವ್ಯಾವ ಸಂದರ್ಭದಲ್ಲಿ, ಯಾವ್ಯಾವ ರೀತಿ ಸರ್ಕಾರಗಳನ್ನ ಅಸ್ಥಿರಗೊಳಿಸಿದ್ದಾರೆ ಎಂಬುವುದು ತಿಳಿದಿದೆ. ಕೇಂದ್ರದಲ್ಲಿದ್ದಂತಹ ಚರಣ್ ಸಿಂಗ್ ಅವರಿಂದ ಪ್ರಾರಂಭವಾಗಿ ವಿಪಿ ಸಿಂಗ್, ಚಂದ್ರಶೇಖರ್‌ವರೆಗೆ. ಅಷ್ಟೇ ಅಲ್ಲ ದೇವೇಗೌಡರು ಅಧಿಕಾರದಲ್ಲಿದ್ದಾಗ ಯಾವ ಕಾರಣಗಳನ್ನ ಕೊಟ್ಟು ಸರ್ಕಾರ ತೆಗೆದರು ಎಂಬುವುದು ಎಲ್ಲರಿಗೂ ಗೊತ್ತೇ ಇದೆ. ಇವತ್ತು ಡಿಎಂಕೆ ಜೊತೆ ಇಪ್ಪತ್ತು ವರ್ಷದ ಸಂಬಂಧ ಕಡಿದು ವಿಜಯ್ ಅವರ ಜೊತೆ ಸೇರಿದ್ದಾರೆ. ಅವರ ಪಕ್ಷದ ಮುಂದಿನ ಭವಿಷ್ಯದ ದೃಷ್ಟಿಯಿಂದ ತೀರ್ಮಾನ ತೆಗೆದುಕೊಂಡಿದ್ದಾರೆ. ಕಾಲ ಅದಕ್ಕೆ ಉತ್ತರ ಕೊಡುತ್ತೆ ಎಂದು ಕಿಡಿಕಾರಿದ್ದಾರೆ.

ರಾಜ್ಯಪಾಲರು ಕಾನೂನು ತಜ್ಞರ ಸಲಹೆಯಂತೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ವಿಜಯ್ ಅವರಿಗೆ ಬಹುಮತ ಸಾಬೀತುಪಡಿಸಲು ಸೂಚಿಸಲಾಗಿದೆ. ಸ್ಟಾಲಿನ್ ಅವರು ಆರು ತಿಂಗಳು ಸರ್ಕಾರ ನಡೆಸಲಿ, ನಾವು ತೊಂದರೆ ಕೊಡಲ್ಲ ಎಂದು ವಿಜಯ್ ಹೇಳಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಅಸ್ಪಷ್ಟತೆ ದೂರವಾಗಬಹುದು. ಆದರೆ ಡಿಎಂಕೆ ಮತ್ತು ಎಐಎಡಿಎಂಕೆ 2 ಪಕ್ಷಗಳು ಸೇರಿ ಸರ್ಕಾರ ರಚಿಸುತ್ತವೆ ಎಂಬುದು ಕೇವಲ ಊಹಾಪೋಹ ಎಂದು ಅಭಿಪ್ರಾಯಪಟ್ಟರು.

ಬಿಜೆಪಿಗೆ ಸ್ಪಷ್ಟ ಬಹುಮತ ಬಂದಿದೆ ಎಂದು ಎಲೆಕ್ಷನ್ ಕಮಿಷನ್‌ನಿಂದ ಘೋಷಣೆಯಾದರೂ ಮಮತಾ ಬ್ಯಾನರ್ಜಿಯವರು ರಾಜೀನಾಮೆ ಕೊಡಲ್ಲ ಎನ್ನುವುದು ಬಾಲಿಷವಾದ ಹೇಳಿಕೆ. ಆ ರೀತಿಯ ವಾತಾವರಣ ನಮ್ಮ ಸಂವಿಧಾನದಲ್ಲಿ ಇಲ್ಲ ಎಂದು ಅವರು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

Shwetha M