ದೇವರಕೊಂಡ, ರಶ್ಮಿಕಾ ಬ್ರೇಕ್ ಅಪ್? – ಶ್ರೀವಲ್ಲಿಗೆ ವಿರಹ ವೇದನೆ!
ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಹಿಟ್ ಜೋಡಿ. ಇವರಿಬ್ಬರು ಡೇಟಿಂಗ್ ಮಾಡ್ತಿದ್ದಾರೆ, ಮದುವೆ ಆಗ್ತಾರೆ ಅನ್ನೋ ವದಂತಿಗಳು ಆಗಾಗ ಕೇಳಿ ಬರ್ತಾನೆ ಇರುತ್ತವೆ. ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಇವರು, ಆಗಾಗ ಒಟ್ಟೊಟ್ಟಿಗೆ ಕಾಣಿಸಿಕೊಂಡು ಸುದ್ದಿಯಾಗ್ತಿರುತ್ತಾರೆ. ಆದ್ರೆ ಇದೀಗ ರಶ್ಮಿಕಾ ಹಾಗೂ ವಿಜಯ್ ಫ್ಯಾನ್ಸ್ ಗೆ ಶಾಕಿಂಗ್ ನ್ಯೂಸ್ ಇದೆ.. ಇವರಿಬ್ರು ಬ್ರೇಕಪ್ ಮಾಡ್ಕೊಂಡಿದ್ದಾರಾ ಅನ್ನೋ ಪ್ರಶ್ನೆ ಎದುರಾಗಿದೆ.. ಈ ಬೆನ್ನಲ್ಲೇ ರಶ್ಮಿಕಾ ಒಂದು ಪೋಸ್ಟ್ ಕೂಡ ಹಾಕಿದಾರೆ.. ಆಷ್ಟಕ್ಕೂ ರಶ್ಮಿಕಾ ಹಾಕಿರೋ ಪೋಸ್ಟ್ ಏನು? ಏನಿದು ಬ್ರೇಕಪ್ ಕಹಾನಿ? ಈ ಕುರಿತ ಮಾಹಿತಿ ಇಲ್ಲಿದೆ..
ಇದನ್ನೂ ಓದಿ: ರೀಲ್ ಲೈಫ್‌ನಂತೆಯೇ ರಿಯಲ್ ಲೈಫ್ – ಸೀತಾರಾಮ ಸೀರಿಯಲ್‌ನ ಸಿಹಿಯ ಬಾಳಿನ ಕಹಿಯೇನು?
ನಟಿ ರಶ್ಮಿಕಾ ಮಂದಣ್ಣ ಹಾಗೇ ನಟ ವಿಜಯ್ ದೇವರಕೊಂಡ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.. ಅವರ ಬಗ್ಗೆ ಹಲವು ರೀತಿಯ ಗಾಸಿಪ್‌ಗಳು ಹಬ್ಬುತ್ತಲೇ ಇರುತ್ತವೆ. ಗೀತಾ ಗೋವಿಂದಂ ಸಿನಿಮಾ ಹಿಟ್ ಆದ ನಂತರ ಇವರಿಬ್ಬರು ಪ್ರೀತಿಸುತ್ತಿದ್ದಾರೆ.. ಡೇಟಿಂಗ್ ಮಾಡ್ತಿದ್ದಾರೆ.. ಇವರಿಬ್ರೂ ಇದೇ ವರ್ಷ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಕೆಲವರಂತೂ ಅವರ ಮದುವೆ ಆಗಿರೋ ತರ ಫೋಟೋ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ರು.. ಅಷ್ಟರ ಮಟ್ಟಿಗೆ ಇವರಿಬ್ರ ಬಗ್ಗೆ ಗಾಸಿಪ್ ಹರಿದಾಡ್ತಿದೆ..
ಅದ್ರೆ ಇವರಿಬ್ರು ಅಧಿಕೃತವಾಗಿ ತಾವು ಲವರ್ಸ್ ಅಂತಾ ಎಲ್ಲಿಯೂ ಹೇಳಿಕೊಂಡಿಲ್ಲ. ಹಾಗೇ ಲವರ್ಸ್ ಅಲ್ಲ ಅಂತಾನೂ ಹೇಳಿಕೊಂಡಿಲ್ಲ. ಹಾಗಾಗಿ ಜನರ ಪಾಲಿಗೆ ಇವರು ಟಾಲಿವುಡ್ನ ಕ್ಯೂಟ್ ಜೋಡಿ ಆಗಿಯೇ ಪರಿಚಿತರಾಗಿಬಿಟ್ಟಿದ್ದಾರೆ. ಇವರಿಬ್ಬರು ಕೂತ್ರೂ.. ನಿಂತ್ರೂ ಸುದ್ದಿಯಾಗುತ್ತಲೇ ಇರುತ್ತೆ..
ಆದ್ರೆ ಇದೀಗ ಈ ಜೋಡಿ ಬ್ರೇಕಪ್ ಮಾಡಿಕೊಂಡಿದ್ದಾರೆ ಅಂತಾ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.. ಹೀಗೊಂದು ಚರ್ಚೆ ಶುರುವಾಗೋಕೆ ಕಾರಣ ಏನು ಗೊತ್ತಾ?ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಪೋಸ್ಟ್.. ಇದನ್ನು ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ನಡುವೆ ಬ್ರೇಕಪ್ ಆಯ್ತಾ ಎಂದು ಕೇಳ್ತಿದ್ದಾರೆ..
ವೆಕೇಷನ್ ಎಂಜಾಯ್ ಮಾಡ್ತಿರುವ ನಟಿ ರಶ್ಮಿಕಾ ಮಂದಣ್ಣ ತನ್ನ ಇನ್‌ಸ್ಟಾ ಗ್ರಾಮ್ ನಲ್ಲಿ ಡೆನಿಮ್ ಶರ್ಟ್, ವೈಟ್ ಪ್ಯಾಂಟ್ ಧರಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕ್ಯಾಶುವಲ್ ವೇರ್ ನಲ್ಲಿ ಬ್ಯೂಟಿಫುಲ್ ಆಗಿ ಕಾಣ್ತಿದ್ದಾರೆ. ಜೊತೆಗೆ ನಟಿ ಬರೆದ ಪೋಸ್ಟ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗ್ತಿದೆ. ಈ ಪೋಸ್ಟ್ ನಲ್ಲಿ ಇದೇ ನಿಮ್ಮ ಕೊನೆ ಎಂಬಂತೆ ಪ್ರತಿದಿನ ಬದುಕಿ! ಇದು ಆ ನೀರಸ ಉಲ್ಲೇಖಗಳಲ್ಲಿ ಒಂದಾಗಿದೆ ಎಂದು ನನಗೆ ತಿಳಿದಿದೆ. ನಾವೆಲ್ಲರೂ ನಮ್ಮ ಗೌರವವನ್ನು ಗಳಿಸಲು, ನಮ್ಮ ಗುರಿಗಳನ್ನು ಮತ್ತು ಕನಸುಗಳನ್ನು ಸಾಧಿಸಲು, ಕಷ್ಟಪಟ್ಟು ಕೆಲಸ ಮಾಡಲು, ಕಷ್ಟಪಟ್ಟು ಅಧ್ಯಯನ ಮಾಡಲು, ಡೆಡ್ ಲೈನ್ ಗೂ ಮೊದಲು ಕೆಲಸಗಳನ್ನು ಮುಗಿಸಲು ಮತ್ತು ಯಶಸ್ವಿ ಸಿನಿ ಕೆರಿಯರ್ ಹೊಂದಲು ನಾನಾ ಪ್ರಯತ್ನ ಪಡುತ್ತೇವೆ. ಕ್ಲಾಸ್ ನಲ್ಲಿ ಮೊದಲ ಸ್ಥಾನವನ್ನು ಪಡೆದುಕೊಳ್ಳಿ.. ಶ್ರೀಮಂತ ಮತ್ತು ಕುಬೇರ ವ್ಯಕ್ತಿಯಾಗಬಹುದು. ಆ ಕಾರನ್ನು ಖರೀದಿಸಿ ಅಥವಾ ಈ ಮನೆಯನ್ನು ಖರೀದಿಸಿ ಅಥವಾ ಆ ಕಾಲೇಜಿನಲ್ಲಿ ಸೀಟು ಪಡೆಯಿರಿ ಅಥವಾ ಸ್ಕಾಲರ್ ಶಿಪ್ ಇವೆಲ್ಲವನ್ನೂ ಪಡೆಯಿರಿ ಮತ್ತು ಇನ್ನು ಹೆಚ್ಚಿನದನ್ನು ಸಾಧಿಸಲು ಪ್ರಯತ್ನಿಸುತ್ತಿರುವ ಮಧ್ಯೆ ನಾವು ಮುಖ್ಯವಾದುದನ್ನು ಮಾಡಲು ಮರೆತುಬಿಡುತ್ತೇವೆ. ಈ ಕ್ಷಣಕ್ಕಾಗಿ ಬದುಕುವುದನ್ನು ಮರೆಯುತ್ತೇವೆ ಎಂದು ರಶ್ಮಿಕಾ ಮಂದಣ್ಣ ಬರೆದಿದ್ದಾರೆ.
ರಶ್ಮಿಕಾ ಮಂದಣ್ಣ ಪೋಸ್ಟ್ ನೋಡಿದ ಫ್ಯಾನ್ಸ್ ರಶ್ಮಿಕಾ.. ಈ ಕ್ಷಣಕ್ಕಾಗಿ ಬದುಕಿ ಅಂತಿದ್ದಾರೆ. ಇನ್ನೂ ಕೆಲವರು ವಿಜಯ್ ದೇವರಕೊಂಡ ಜೊತೆ ನಟಿಗೆ ಬ್ರೇಕಪ್ ಆಯ್ತಾ ಎಂದು ಕೇಳ್ತಿದ್ದಾರೆ. ಮತ್ತೆ ಕೆಲವರು ನಟಿ ರಶ್ಮಿಕಾ ಮಂದಣ್ಣ ಜೀವನದ ಸತ್ಯ ಹೇಳಿದ್ದಾರೆ ಅಂತಾ ಕಾಮೆಂಟ್ ಮಾಡಿದ್ದಾರೆ.. ಮತ್ತೊಬ್ಬರು ಇದು ವಿಜಯ್ ದೇವರಕೊಂಡ ಕ್ಲಿಕ್ ಮಾಡಿದ ಫೋಟೋನಾ ಎಂದು ಕೇಳ್ತಿದ್ದಾರೆ. ರಶ್ಮಿಕಾ ಈ ಪೋಸ್ಟ್‌ನಿಂದ ಹಲವರು ತಲೆಕೆಡಿಸಿಕೊಂಡಿದ್ದಂತೂ ಪಕ್ಕಾ.