ಮೊದಲ ದಿನವೇ ಬಾಕ್ಸ್ ಆಫೀಸ್ ಲೂಟಿ ಮಾಡಿದ ವಿಜಯ್ -ಕಿಂಗ್‌ಡಮ್ ಸಿನಿಮಾದಲ್ಲಿ ದೇವರಕೊಂಡ ಕಮಾಲ್

ತೆಲುಗು ಸ್ಟಾರ್ ವಿಜಯ್ ದೇವರಕೊಂಡ ನಟನೆಯ ಕಿಂಗ್‌ಡಮ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದೆ. ಮೊದಲ ದಿನವೇ ವಿಜಯ್ ದೇವರಕೊಂಡ ನಟನೆಗೆ ಫ್ಯಾನ್ಸ್ ಬಹುಪರಾಕ್ ಹೇಳಿದ್ದಾರೆ. ಕಿಂಗ್‌ಡಮ್ ಸಿನಿಮಾ ಮೊದಲ ದಿನವೇ ಭಾರೀ ಗಳಿಕೆ ಮಾಡಿದೆ.
ಇದನ್ನೂ ಓದಿ:ವಿಜಯ್ ದೇವರಕೊಂಡ ವಿರಾಟ ರೂಪ – ಕಿಂಗ್‌ಡಮ್ ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆ ಹೇಗಿದೆ?
ಹೌದು. ಲವ್, ರೋಮ್ಯಾಂಟಿಕ್ ಹೀರೋ ವಿಜಯ್ ದೇವರಕೊಂಡ ಡಿಫರೆಂಟ್ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಪ್ರೇಕ್ಷಕರಿಂದ ಕಿಂಗ್‌ಡಮ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಪಡೆದಿದೆ. ವಿಜಯ್ ಅವರ ಮಾಸ್ ಅವತಾರ ಪ್ರೇಕ್ಷಕರನ್ನು ರಂಜಿಸಿದೆ. ಮೊದಲ ದಿನವೇ ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದೆ.
ವಿಜಯ್ ದೇವರಕೊಂಡ ಅವರು ‘ಲೈಗರ್’ ಸಿನಿಮಾ ಬಳಿಕ ಮಾಸ್ ಅವತಾರ ತಾಳಿರಲಿಲ್ಲ. ಈಗ ಕಿಂಗ್‌ಡಮ್ ಸಿನಿಮಾದಲ್ಲಿ ಅವರು ಸಖತ್ ಮಾಸ್ ರೂಪದಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರಿಗೆ ಇಷ್ಟ ಆಗಿದೆ. ಈ ಚಿತ್ರ ಮೊದಲ ದಿನ ಭಾರತದಲ್ಲಿ 16.50 ಕೋಟಿ ರೂಪಾಯಿ ಬಾಚಿಕೊಂಡಿದೆ. ವಿಶ್ವ ಮಟ್ಟದಲ್ಲಿ ಸಿನಿಮಾ 33 ಕೋಟಿ ರೂಪಾಯಿ ಬಾಚಿಕೊಂಡಿದೆ.
ಕಿಂಗ್‌ಡಮ್ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರು ಕಾನ್ಸ್ಟೇಬಲ್ ಆಗಿ ಕಾಣಿಸಿಕೊಂಡಿದ್ದಾರೆ. ನಂತರ ಸ್ಪೈ ಆಗಿ ಮತ್ತೊಂದು ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆ ಅಣ್ಣನಿಗಾಗಿ ಹುಡಕಾಟ ನಡೆಸುವ ತಮ್ಮನಾಗಿ ಸೂಪರ್ ಆಗಿ ಕಾಣಿಸಿದ್ದಾರೆ. ವಿಜಯ್ ದೇವರಕೊಂಡ ಅವರ ಈ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಕಿಂಗ್‌ಡಮ್ ಚಿತ್ರವನ್ನು ಗೌತಮಿ ತಿನ್ನನುರಿ ಅವರು ನಿರ್ದೇಶನ ಮಾಡಿದ್ದಾರೆ. ನಾಗ ವಂಶಿ ಅವರು ಈ ಚಿತ್ರವನ್ನು ‘ಸಿತಾರಾ ಎಂಟರ್ಟೇನ್ಮೆಂಟ್’ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ವಿಜಯ್ ದೇವರಕೊಂಡ, ಸತ್ಯದೇವ್, ಭಾಗ್ಯಶ್ರೀ ಬೋರ್ಸೆ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಬುಕ್ ಮೈ ಶೋನಲ್ಲಿ 8 ರೇಟಿಂಗ್ ಪಡೆದುಕೊಂಡಿದೆ. ಈ ಚಿತ್ರ 100 ಕೋಟಿ ರೂಪಾಯಿ ಗಳಿಕೆ ಮಾಡಬಹುದು ಎಂಬ ಲೆಕ್ಕಾಚಾರ ಸಾಗಿದೆ.

ನೋಡಿರಿ

