ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮದುವೆ ಮುಹೂರ್ತ ಫಿಕ್ಸ್!‌ – ಎಲ್ಲಿ ನಡೆಯಲಿದೆ ವಿವಾಹ?  

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮದುವೆ ಮುಹೂರ್ತ ಫಿಕ್ಸ್!‌ – ಎಲ್ಲಿ ನಡೆಯಲಿದೆ ವಿವಾಹ?  

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಸಿನಿಲೋಕದ ಸೆನ್ಸೇಷನಲ್ ಜೋಡಿ. ಇವರಿಬ್ಬರು ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಸದ್ದು ಮಾಡ್ತಿದೆ. ಇದೀಗ ರಶ್ಮಿಕಾ – ವಿಜಯ್‌ ಮದುವೆ ಆಹ್ವಾನ ಪತ್ರಿಕೆ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ:ಅಯ್ಯಯೋ.. ಬೈಕ್‌ ನಿಲ್ಲಿಸಿದ್ದಕ್ಕೆ ಹರಿಯಿತು ರಕ್ತ! – 1 ಬೈಕ್‌.. 6 ಮಂದಿ ತಲೆಗೆ ಪೆಟ್ಟು! 

ಕಳೆದ ಕೆಲ ವರ್ಷಗಳಿಂದಲೂ ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣರ ಮದುವೆ ಬಗ್ಗೆ ಗಾಸಿಪ್‌ಗಳು ಜೋರಾಗಿಯೇ ಸದ್ದು ಮಾಡುತ್ತಿದ್ದವು. ಇಬ್ಬರು ಒಟ್ಟಿಗೆ ಸುತ್ತಾಡುತ್ತಿದ್ದರೂ ಒಬ್ಬರಿಗೊಬ್ಬರು ಗುಟ್ಟುಬಿಟ್ಟುಕೊಟ್ಟಿರಲಿಲ್ಲ. ಕಳೆದ ಅಕ್ಟೋಬರ್‌ನಲ್ಲಿ ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಬಳಿಕ ಫೆಬ್ರವರಿ 2 ರಂದು ಉದಯಪುರದಲ್ಲಿ ವಿವಾಹವಾಗಲಿದ್ದಾರೆ ಎಂದೆಲ್ಲಾ ಸುದ್ದಿ ಹರಿದಾಡುತ್ತಿತ್ತು. ಸದ್ಯ ವೆಡ್ಡಿಂಗ್‌ ಕಾರ್ಡ್‌ ವೈರಲ್‌ ಆಗಿದ್ದು, ವದಂತಿಗಳಿಗೆ ತೆರೆ ಬಿದ್ದಿದೆ. ಇದೇ ಫೆ.26 ರಂದು ವಿಜಯ್ – ರಶ್ಮಿಕಾ ಮಂದಣ್ಣ ವಿವಾಹವಾಗುತ್ತಿದ್ದು, ಮಾರ್ಚ್ 4 ರಂದು ಬಂಜಾರ ಹಿಲ್ಸ್‌ನಲ್ಲಿರುವ ತಾಜ್ ಕೃಷ್ಣಾ ಪ್ಯಾಲೆಸ್‌ನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ. ಆತ್ಮೀಯ ಸ್ನೇಹಿತರು ಹಾಗೂ ಕುಟುಂಬದ ಗುರು ಹಿರಿಯರ ಸಮ್ಮುಖದಲ್ಲಿ ವಿಜಯ್‌ – ರಶ್ಮಿಕಾ ವಿವಾಹವಾಗಲಿದ್ದಾರೆ. ಈ ವಿಷಯ ಅವರ ಅಭಿಮಾನಿಗಳಿಗೆ ಸಖತ್‌ ಖುಷಿ ಕೊಟ್ಟಿದೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಮದುವೆಗೆ ಅತಿಥಿಗಳನ್ನ ಆಹ್ವಾನಿಸುತ್ತಿದ್ದಾರೆ. ಈ ರೀತಿ ಆಹ್ವಾನ ನೀಡಿದವರ ಪೈಕಿ ಒಬ್ಬರು ಮದುವೆ ಆಮಂತ್ರಣ ಪತ್ರಿಕೆಯನ್ನ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿವಾಹ ಆಮಂತ್ರಣ ಬಾಕ್ಸ್ ನಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಎಂದು ಬರೆದಿದೆ. ಆಮಂತ್ರಣ ಪತ್ರದಲ್ಲಿ ಮದುವೆ ಫೆಬ್ರವರಿ 26 ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ. ಉದಯಪುರ ಪ್ಯಾಲೆಸ್‌ನಲ್ಲಿ ಮದ್ವೆ ನಡೆಯುತ್ತಿದೆ ಎನ್ನಲಾದ್ರೂ ಪತ್ರಿಕೆಯಲ್ಲಿ ಮದುವೆಯ ಸ್ಥಳ ಬಹಿರಂಗಪಡಿಸಿಲ್ಲ.  ಈ ಸಮಾರಂಭದಲ್ಲಿ ಕುಟುಂಬ ಸದಸ್ಯರು, ಅತ್ಯಾಪ್ತರು, ಉದ್ಯಮ ಸ್ನೇಹಿತರು ಪಾಲ್ಗೊಳ್ಳಲಿದ್ದಾರೆ. ಮಾರ್ಚ್‌ 4 ರಂದು ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿರುವ ತಾಜ್‌ ಕೃಷ್ಣಾ ಪ್ಯಾಲೆಸ್‌ನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ ಅನ್ನೋದು ವಿವಾಹ ಪತ್ರಿಕೆಯಲ್ಲಿದೆ.

Shwetha M