‘ಲೈಗರ್’ ಸಿನಿಮಾ ಸೋಲಿನ ನಂತರ ವಿಜಯ್ ದೇವರಕೊಂಡ ಕಮ್‌ಬ್ಯಾಕ್ – ಖಾಕಿ ಗೆಟಪ್‌ನ ಪೋಸ್ಟರ್ ರಿಲೀಸ್

‘ಲೈಗರ್’ ಸಿನಿಮಾ ಸೋಲಿನ ನಂತರ ವಿಜಯ್ ದೇವರಕೊಂಡ ಕಮ್‌ಬ್ಯಾಕ್ – ಖಾಕಿ ಗೆಟಪ್‌ನ ಪೋಸ್ಟರ್ ರಿಲೀಸ್

ಲೈಗರ್ ಸಿನಿಮಾದ ಸೋಲಿನಿಂದಾಗಿ ವಿಜಯ್ ದೇವರಕೊಂಡ ಯಾವ ಸಿನಿಮಾವನ್ನೂ ಒಪ್ಪಿಕೊಂಡಿರಲಿಲ್ಲ. ಲೈಗರ್ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದ್ದ ವಿಜಯ್ ದೇವರಕೊಂಡಗೆ ಈ ಸಿನಿಮಾ ಸೋಲು ನಿಜಕ್ಕೂ ಹೊಡೆತ ನೀಡಿತ್ತು. ಅಭಿಮಾನಿಗಳಂತೂ ಸಂಪೂರ್ಣ ನಿರಾಶರಾಗಿದ್ದರು. ಇದೀಗ ಮತ್ತೆ ವಿಜಯ್ ದೇವರಕೊಂಡ ಕಮ್‌ಬ್ಯಾಕ್ ಮಾಡ್ತಿದ್ದಾರೆ. ಈ ಬಾರಿ ತನ್ನ ಫ್ಯಾನ್ಸ್‌ ಗೋಸ್ಕರ ಹೊಸ ಗೆಟಪ್‌ನಲ್ಲಿ ತೆರೆ ಮೇಲೆ ಬರಲಿದ್ದಾರೆ. ವಿಜಯ್ ದೇವರಕೊಂಡ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು, ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಸಿನಿಮಾದ ಮೊದಲ ಪೋಸ್ಟರ್ ರಿಲೀಸ್ ಆಗಿದೆ. ಆದರೆ, ಪೋಸ್ಟರ್​ನಲ್ಲಿ ವಿಜಯ್ ದೇವರಕೊಂಡ ಅವರ ಮುಖ ಕಾಣುತ್ತಿಲ್ಲ. ಪೋಸ್ಟರ್​ನಲ್ಲಿ ವಿಜಯ್ ದೇವರಕೊಂಡ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:  ಜ. 16 ರಿಂದ ಬೆಂಗಳೂರು – ಮೈಸೂರು ಇವಿ ಪವರ್ ಪ್ಲಸ್ ಬಸ್ ಸೇವೆ ಆರಂಭ

ತೆಲುಗಿನಲ್ಲಿ ಸೂಪರ್ ಹಿಟ್ ಆದ ‘ಜೆರ್ಸಿ’ ಸಿನಿಮಾದ ನಿರ್ದೇಶಕ ಗೌತಮ್ ತಿನ್ನೌರಿ ವಿಜಯ್ ದೇವರಕೊಂಡ ಅವರ ಹೊಸ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ VD12 ಎಂದು ಹೆಸರು ಇಡಲಾಗಿದೆ. ಚಿತ್ರದ ಪೋಸ್ಟರ್​ನಲ್ಲಿ ವಿಜಯ್ ದೇವರಕೊಂಡ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮುಖವನ್ನು ಬಟ್ಟೆಯಿಂದ ಮುಚ್ಚಲಾಗಿದೆ. ಅವರ ಸುತ್ತಲೂ ಬೆಂಕಿ ಇದೆ. ಈ ಚಿತ್ರವನ್ನು ನಾಗ ವಂಶಿ ಹಾಗೂ ಸಾಯಿ ಸೌಜನ್ಯ ನಿರ್ಮಾಣ ಮಾಡುತ್ತಿದ್ದಾರೆ. ಸಿತಾರಾ ಎಂಟರ್​ಟೇನ್​ಮೆಂಟ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಮೂಡಿಬರುತ್ತಿದೆ.

‘ನನ್ನ ಮುಂದಿನ ಸಿನಿಮಾ. ಈ ಕಥೆಯನ್ನು ಕೇಳಿದಾಗ ಕೆಲ ಹೊತ್ತು ಎದೆಬಡಿತ ನಿಂತಿತ್ತು’ ಎಂದು ವಿಜಯ್ ದೇವರಕೊಂಡ ಬರೆದುಕೊಂಡಿದ್ದಾರೆ.

suddiyaana