ತೆರೆ ಮೇಲೆ ಗಂಡ ಹೆಂಡತಿಯಾಗಿ ಮಿಂಚಿದ ವಿಜಯ್ ರಶ್ಮಿಕಾ- ವಿರೋಶ್ ನಟನೆಯ ರಣಬಾಲಿ ಸಿನಿಮಾ ಸಾಂಗ್ ರಿಲೀಸ್

ತೆರೆ ಮೇಲೆ ಗಂಡ ಹೆಂಡತಿಯಾಗಿ ಮಿಂಚಿದ ವಿಜಯ್ ರಶ್ಮಿಕಾ- ವಿರೋಶ್ ನಟನೆಯ ರಣಬಾಲಿ ಸಿನಿಮಾ ಸಾಂಗ್ ರಿಲೀಸ್

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ಆದ ಎರಡೇ ದಿನದಲ್ಲಿ ಹೊಸ ಸಿನಿಮಾ ಮೂಲಕ ಸರ್‌ಪ್ರೈಸ್ ನೀಡಿದ್ದಾರೆ. ಬಹು ಕೋಟಿ ವೆಚ್ಚದ ಮತ್ತು ಬಹುನಿರೀಕ್ಷೆಯ ಸಿನಿಮಾ ರಣಬಾಲಿ ಚಿತ್ರದ ಹಾಡು ರಿಲೀಸ್ ಆಗಿದೆ. ಈ ಹಾಡಿನಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಪತಿ ಮತ್ತು ಪತ್ನಿಯಾಗಿ ನಟಿಸಿದ್ದಾರೆ.

ಇದನ್ನೂ ಓದಿ:ಪ್ರೀತಿ ಕಲಿಸಿದ ವಿಜಯ್ ಬಗ್ಗೆ ಪುಸ್ತಕ ಬರೆಯಬಲ್ಲೆ – ಬೆಸ್ಟ್ ಫ್ರೆಂಡ್ ಈಗ ಹೆಂಡತಿ- ಭಾವುಕ ಸಾಲುಗಳನ್ನು ಹಂಚಿಕೊಂಡ ವಿರೋಶ್

ಎರಡು ದಿನಗಳ ಹಿಂದಷ್ಟೇ ವಿಜೃಂಭಣೆಯಿಂದ ಮದುವೆಯಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಈಗ ತೆರೆ ಮೇಲೂ ಸತಿಪತಿಗಳಾಗಿ ಮಿಂಚಿದ್ದಾರೆ. ರಣಬಾಲಿ ಸಿನಿಮಾದ ಹಾಡೊಂದು ರಿಲೀಸ್ ಆಗಿದ್ದು, ವಿರೋಶ್ ಜೋಡಿಯ ಆನ್ ಸ್ಕ್ರೀನ್ ರೋಮ್ಯಾನ್ಸ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಈ ಜೋಡಿಯ ಮದುವೆ ಬಳಿಕ ರಣಬಾಲಿ ಚಿತ್ರದ ಹಾಡು ರಿಲೀಸ್ ಆಗಿರುವುದು ಕೂಡಾ ವಿಶೇಷವೇ ಸರಿ.  ರಣಬಾಲಿ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಜೋಡಿ ಆಗಿಯೇ ನಟಿಸಿದ್ದಾರೆ. ಗಂಡ-ಹೆಂಡತಿ ಆಗಿಯೇ ಕಾಣಿಸಿಕೊಂಡಿದ್ದಾರೆ. ಮದುವೆಯ ಸೀನ್ ಕೂಡ ಇದರಲ್ಲಿ ಬರುತ್ತದೆ. ಆ ಒಂದು ಝಲಕ್ ಈ ಒಂದು ‘ಏನಯ್ಯ ಸ್ವಾಮಿ’ ಹಾಡಿನಲ್ಲಿ ರಿವೀಲ್ ಆಗಿದೆ. ಮದುವೆ ನಂತರದ ರೋಮ್ಯಾನ್ಸ್ ಅನ್ನೂ ಇಲ್ಲಿ ನೋಡಬಹುದು. ಮದುವೆ ಆದ್ಮೇಲೆ ಗಂಡನನ್ನ ಹೇಗೆಲ್ಲ ರಶ್ಮಿಕಾ ನೋಡ್ತಾರೆ ಅನ್ನೋದು ಇಲ್ಲಿ ಅಷ್ಟೆ ಮುದ್ದಾಗಿಯೇ ತೋರಿದ್ದಾರೆ. ತೂಗು ಮಂಚದ ಮೇಲೆ ಒಟ್ಟಿಗೆ ಮಲಗಿರೋ ದೃಶ್ಯವೂ ಇದೆ. ರಣಬಾಲಿ ಸಿನಿಮಾದ ಈ ಹಾಡು ಪೂರ್ತಿ ಆಗಿಲ್ಲ. ಕೇವಲ 1 ನಿಮಿಷ 20 ಸೆಕೆಂಡ್‌ನ ವಿಡಿಯೋ ಆಗಿದೆ. ಇದರಲ್ಲಿ ವಿಜಯ್ ಮತ್ತು ರಶ್ಮಿಕಾ ಸಖತ್ ಕೆಮೆಸ್ಟ್ರಿ ಇದೆ. ಮದುವೆಯ ದೃಶ್ಯವೂ ಇದೆ. ಆದರೆ, ಇದು ಪಕ್ಕಾ ಸಾಂಪ್ರದಾಯಿಕ ಶೈಲಿಯ ಮದುವೇನೆ ಆಗಿದೆ.

ರಣಬಾಲಿ ಚಿತ್ರದಲ್ಲಿ ವಿಜಯ್ ದೇವರಕೊಂಡ ವಾರೀಯರ್ ರೂಪ ತಾಳಿದ್ದಾರೆ. ಈ ವಾರಿಯರ್‌ ಲುಕ್‌ಗಾಗಿಯೇ ಲಾಂಗ್ ಹೇರ್ ಮತ್ತು ದೊಡ್ಡದಾಗಿಯೇ ಮೀಸೆ ಕೂಡ ಬಿಟ್ಟಿದ್ದಾರೆ. ಈ ಒಂದು ಲುಕ್ ಅಲ್ಲಿಯೇ ವಿಜಯ್ ತಮ್ಮ ರಿಯಲ್ ಲೈಫ್ ಮದುವೆನೂ ಆಗಿರುವುದು ವಿಶೇಷ.

 

Sulekha