ರೊಚ್ಚಿಗೆದ್ದ ರಾಶಿಕಾಗೆ ತಕ್ಕ ಶಾಸ್ತಿ ಮಾಡಿದ ಗಿಲ್ಲಿ – ರಕ್ಷಿತಾ ತಂಟೆಗೆ ಬಂದವರಿಗೆ ಉಳಿಗಾಲವಿಲ್ಲ
ಅಶ್ವಿನಿಗೆ ಕಿರುಚಾಡಲು ಸಾಥ್ ಕೊಟ್ಟ ರಾಶಿಕಾ..!

ರೊಚ್ಚಿಗೆದ್ದ ರಾಶಿಕಾಗೆ ತಕ್ಕ ಶಾಸ್ತಿ ಮಾಡಿದ ಗಿಲ್ಲಿ – ರಕ್ಷಿತಾ ತಂಟೆಗೆ ಬಂದವರಿಗೆ ಉಳಿಗಾಲವಿಲ್ಲಅಶ್ವಿನಿಗೆ ಕಿರುಚಾಡಲು ಸಾಥ್ ಕೊಟ್ಟ ರಾಶಿಕಾ..!

ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿಗೌಡ ಕಿರುಚಾಟ ಎಲ್ಲರೂ ಕೇಳಿದ್ದೀರಾ. ಈಗ ಅಶ್ವಿನಿಗೆ ಒಂದೊಳ್ಳೇ ಪಾರ್ಟನರ್ ಸಿಕ್ಕಿದ್ದಾರೆ. ಹೌದು ರಾಶಿಕಾ ಕಿರುಚಾಟ, ಹಾರಾಟ ಜೋರಾಗಿದೆ. ರೊಚ್ಚಿಗೆದ್ದ ರಾಶಿಕಾಗೆ ಗಿಲ್ಲಿ ನಟ ತಕ್ಕ ಪಾಠ ಕಲಿಸಿದ್ದಾರೆ. ಜೊತೆಗೆ ನೀನು ಹೆಣ್ಣಾಗಿ ರಕ್ಷಿತಾಗೆ ಆ ರೀತಿ ಮಾಡಿದ್ದು ಸರಿನಾ ಅಂತಾ ಪ್ರಶ್ನೆ ಮಾಡಿದ್ದಾರೆ. ಇಲ್ಲಿ ಒಂದು ವಿಚಾರ ಗಮನಿಸಬೇಕು. ಗಿಲ್ಲಿ ನಟ ಎಲ್ಲರೆದುರು ಮೆಚ್ಚಿಸಿಕೊಳ್ಳಬೇಕು ಅನ್ನೋ ಉದ್ದೇಶದಿಂದ ಮಾತಾಡಿಲ್ಲ. ಅವರು ರಾಶಿಕಾ ಮಾಡಿದ್ದು ಸರಿಯಲ್ಲ ಅನ್ನೋದನ್ನ ನಿಧಾನವಾಗಿಯೇ ಬಿಡಿಸಿ ಹೇಳಿದ್ದಾರೆ. ಇದು ರಾಶಿಕಾ ಜೊತೆ ಅಶ್ವಿನಿಗೂ ಸರಿಯಾಗಿಯೇ ಉರಿದಿದೆ.

ಇದನ್ನೂ ಓದಿ:ನೀನು ದೊಡ್ಡ ಡ್ರಮ್.. – ಕಾವ್ಯಗಾಗಿ ರಿಷಾ ಜೊತೆಗೆ ಫೈಟ್ ಮಾಡಿದ ಗಿಲ್ಲಿ!

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟನ ಆಟಕ್ಕೆ ಮತ್ತೊಮ್ಮೆ ವೀಕ್ಷಕರು ಬಹುಪರಾಕ್ ಹೇಳಿದ್ದಾರೆ. ಆಟ, ಹುಡುಗಾಟ, ಹಾಸ್ಯ, ಜಗಳ ಎಲ್ಲದರಲ್ಲೂ ಗಿಲ್ಲಿಯೇ ಒಂದು ಕೈ ಮೇಲೆ. ಆದರೆ, ಗಿಲ್ಲಿ ಕಾಮಿಡಿ ನಟ ಅನ್ನೋ ಒಂದೇ ಒಂದು ಕಾರಣಕ್ಕೆ ನಿನ್ನ ಕಾಮಿಡಿ ಎಲ್ಲರಿಗೂ ಹರ್ಟ್ ಆಗುತ್ತೆ ಅಂತಾ ಗಿಲ್ಲಿ ನಟನ ಕುಗ್ಗಿಸಲು ನೋಡಿದವರೂ ಇದ್ದಾರೆ. ಆದರೆ, ಗಿಲ್ಲಿ ಮಂಡ್ಯದ ಗಂಡು. ತಗ್ಗೋ ಮಾತೇ ಇಲ್ಲ. ಇದೀಗ ಬಿಗ್‌ಬಾಸ್ ಮನೆಯಲ್ಲೂ ಹಾಗೇ ಆಗಿದೆ. ರಕ್ಷಿತಾ ಶೆಟ್ಟಿಯ ತಂಟೆಗೆ ಬಂದ ರಾಶಿಕಾಗೆ ಅವರು ಖಡಕ್ ತಿರುಗೇಟು ನೀಡಿದ್ದಾರೆ. ತಂಡದಲ್ಲಿದ್ದರೂ ಅನ್ಯಾಯ ಸಹಿಸದೆ ಗಿಲ್ಲಿ, ರಕ್ಷಿತಾ ಬೆಂಬಲಕ್ಕೆ ನಿಂತರು.

ಗಿಲ್ಲಿ ಅವರ ದಿಟ್ಟ ಆಟ, ವಿಶೇಷವಾಗಿ ಅಶ್ವಿನಿ ಗೌಡ ಮತ್ತು ರಾಶಿಕಾ ವಿರುದ್ಧದ ಅವರ ನಿಲುವು, ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. ರಕ್ಷಿತಾ ಶೆಟ್ಟಿ ಹಾಗೂ ಕಾವ್ಯಾ ಶೈವ ತಂಟೆಗೆ ಯಾರಾದರೂ ಬಂದರೆ ಮುಲಾಜೇ ಇಲ್ಲದೆ ತಿರುಗೇಟು ನೀಡುತ್ತಿದ್ದಾರೆ. ಇದಕ್ಕೆ ಹೊಸ ಉದಾಹರಣೆ ಸಿಕ್ಕಿದೆ. ರಕ್ಷಿತಾ ಶೆಟ್ಟಿ ತಂಟೆಗೆ ಬಂದ ರಾಶಿಕಾಗೆ ಗಿಲ್ಲಿ ನಟ ಮಣ್ಣು ಮುಕ್ಕಿಸಿದ್ದಾರೆ. ಅಕ್ಟೋಬರ್ 29ರ ಎಪಿಸೋಡ್​ನಲ್ಲಿ ರಾಶಿಕಾ ಅವರು ರಕ್ಷಿತಾ ಶೆಟ್ಟಿಯನ್ನು ಟಾರ್ಗೆಟ್ ಮಾಡಿದ್ದರು. ಕೈ ನೋವಿದೆ ಎಂದು ಹೇಳಿ ಅಡುಗೆ ಮಾಡುವುದರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರು ರಾಶಿಕಾ. ಎಲ್ಲಾ ಕೆಲಸವನ್ನು ರಕ್ಷಿತಾ ಶೆಟ್ಟಿ ಬಳಿ ಮಾಡಿಸಬೇಕು ಎಂಬುದು ಇವರ ಉದ್ದೇಶ ಆಗಿತ್ತು. ರಕ್ಷಿತಾ ಶೆಟ್ಟಿ ಅವರು ಇದಕ್ಕೆಲ್ಲ ಅಂಜುವವರಲ್ಲ. ಅಶ್ವಿನಿ ಗೌಡ, ರಾಶಿಕಾ ಮೊದಲಾದವರು ಒಟ್ಟಾಗಿ ರಕ್ಷಿತಾ ಶೆಟ್ಟಿ ಮೇಲೆ ಬಿದ್ದರೂ ಅವರು ಲೆಕ್ಕಿಸಿಲ್ಲ. ಇನ್ನು ಗೇಮ್ ಆಡುವಾಗ ರಕ್ಷಿತಾ ಶೆಟ್ಟಿ ಅವರ ಮೇಲೆ ರಾಶಿಕಾ ಬಿದ್ದಿದ್ದಾರೆ. ಅವರು ಮೇಲೇಳಲೂ ಕೊಟ್ಟಿಲ್ಲ. ಬಿಡಿ ಬಿಡಿ ಎಂದು ರಕ್ಷಿತಾ ಪರಿಪರಿ ಆಗಿ ಕೇಳಿಕೊಂಡರೂ ರಾಶಿಕಾ ಇದಕ್ಕೆ ಕಿವಿಕೊಡಲಿಲ್ಲ. ಇದನ್ನು ಗಿಲ್ಲಿ ನಟ ಅವರು ಖಂಡಿಸಿದ್ದಾರೆ. ‘ನಮ್ಮದೇ ಟೀಂ ವಿರುದ್ಧ ತಿರುಗಿ ಬೀಳ್ತಾ ಇದೀಯಲ್ಲ’ ಎಂದು ಗಿಲ್ಲಿಗೆ ರಾಶಿಕಾ ಅವಾಜ್ ಹಾಕಿದ್ದಾರೆ. ನೀನು ಹೆಣ್ಣಾಗಿದ್ದರೆ ರಕ್ಷಿತಾಗೆ ಆ ರೀತಿ ಮಾಡ್ತಾ ಇರಲಿಲ್ಲ’ ಎಂದು ಗಿಲ್ಲಿ ನಟ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಆ ಬಳಿಕ ಗಿಲ್ಲಿ ಟೀಂ ಗೆದ್ದಿತ್ತು. ಎಲ್ಲರ ಸಮ್ಮತದ ಮೂಲಕ ಒಬ್ಬರನ್ನು ಕ್ಯಾಪ್ಟನ್ ಕಂಟೆಸ್ಟಂಟ್ ಆಗಿ ಆಯ್ಕೆ ಮಾಡಬೇಕಿತ್ತು. ಎಲ್ಲರೂ ರಾಶಿಕಾ ಹೆಸರನ್ನು ಸೂಚಿಸಿದರು. ಆದರೆ, ಗಿಲ್ಲಿ ನಟಗೆ ರಿವೇಂಜ್ ತೀರಿಸಿಕೊಳ್ಳಬೇಕಿತ್ತು. ಹೀಗಾಗಿ, ಆ ವೋಟ್​ನ ರಾಶಿಕಾಗೆ ಹಾಕೋದಿಲ್ಲ ಎಂದರು. ಹೀಗಾಗಿ, ಬಿಗ್ ಬಾಸ್ ಈ ಅವಕಾಶವನ್ನು ಹಿಂದಕ್ಕೆ ಪಡೆದರು.

Sulekha