ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸ್ತ್ರೀ ಪಾತ್ರಕ್ಕೆ ಅನ್ಯಾಯ – ಲಲಿತಾಳನ್ನ ಸಾಯಿಸೋದು ಬೇಕಿತ್ತಾ?

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸ್ತ್ರೀ ಪಾತ್ರಕ್ಕೆ ಅನ್ಯಾಯ – ಲಲಿತಾಳನ್ನ ಸಾಯಿಸೋದು ಬೇಕಿತ್ತಾ?

ಲಕ್ಷ್ಮೀ ನಿವಾಸ ಧಾರಾವಾಹಿ ಬಗ್ಗೆ ವೀಕ್ಷಕರು ಸಾಕಷ್ಟು ಅಸಮಾಧಾನ ಹೊರಹಾಕಿದ್ದಾರೆ. ವೀಕ್ಷಕರು ಬಿಡಿ, ಸ್ವತಃ ಸೀರಿಯಲ್ ಪಾತ್ರಧಾರಿಗಳು ಕೂಡಾ ಈ ಸೀರಿಯಲ್ ಕಥೆ ಬಗ್ಗೆಯೂ ಸಿಟ್ಟು ಹೊರಹಾಕಿದ್ದರು. ಇದೀಗ ಲಲಿತಾ ಸಾವಿನ ಸರದಿ. ಮೊದಲೇ ಇಲ್ಲಿನ ಸ್ತ್ರೀ ಪಾತ್ರಗಳನ್ನು ನ್ಯಾಯಕ್ಕಾಗಿ ಮೊರೆಯಿಡುತ್ತಿದ್ದಾರೆ. ಜೊತೆಗೆ ಇಲ್ಲಿ ಮಹಿಳಾ ಪಾತ್ರಗಳಿಗೆ ಸದಾ ಶೋಷಣೆಯಾಗುತ್ತಲೇ ಇದೆ ಅನ್ನೋ ರೀತಿ ಕಥೆ ಸಾಗುತ್ತಿದೆ. ಇದೀಗ ಸೈಕೋ ಜಯಂತ್ ಕೈಯಲ್ಲಿ ಲಲಿತಮ್ಮ ಬಲಿಯಾಗಿದ್ದಾರೆ.

ಇದನ್ನೂ ಓದಿ:ದಿ ರಾಜಾ ಸಾಬ್ ಸಿನಿಮಾ ಭರ್ಜರಿ ಕಲೆಕ್ಷನ್ – ವಿಶ್ವಾದ್ಯಂತ 100 ಕೋಟಿ ಗಳಿಕೆ ಕಂಡ ಪ್ರಭಾಸ್ ಸಿನಿಮಾ

ಲಕ್ಷ್ಮೀನಿವಾಸ ಸೀರಿಯಲ್‌ನಲ್ಲಿ ಲಕ್ಷ್ಮೀಗೆ ನೆಮ್ಮದಿ ಸಿಗುತ್ತೆ, ಲಲಿತಮ್ಮನ ಉಪಾಯ ಫಲಿಸುತ್ತೆ, ಜಾನುಗೆ ಅಮ್ಮನ ಪ್ರೀತಿ ಮರಳಿ ಸಿಗುತ್ತೆ ಎಂದು ಊಹಿಸಲಾಗಿತ್ತು. ಒಂದು ರೀತಿಯಲ್ಲಿ ಸೀರಿಯಲ್ ಕಥೆ ಚೆನ್ನಾಗಿ ಮೂಡಿ ಬರುತ್ತಿದೆ ಅನ್ನುವಾಗಲೇ ಮತ್ತೊಮ್ಮೆ ಕಥೆಯ ತಾಳ ಮೇಲೆ ತಪ್ಪಿದಂತಾಗಿದೆ ಎಂದು ವೀಕ್ಷಕರು ಬೇಸರ ಹೊರಹಾಕಿದ್ದಾರೆ. ಇಲ್ಲಿ ಚಿನ್ನುಮರಿ ಗಂಡ ಕೊಲೆಗಾರನಾಗಿದ್ದಾನೆ. ಚಿನ್ನುಮರಿಗೋಸ್ಕರ ಜಯಂತ್‌ ಏನು ಬೇಕಿದ್ರೂ ಮಾಡ್ತಾನೆ. ವಿಶ್ವನ ಮನೆಯಲ್ಲಿ ಜಾಹ್ನವಿ ಇರೋದು ಜಯಂತ್‌ಗೆ ಗೊತ್ತಾಗಿದೆ. ಹೀಗಾಗಿ ವಿಶ್ವನ ಮನೆಗೆ ಬಂದಿದ್ದಾನೆ. ಮನೆ ಬಾಗಿಲನ್ನು ಲಲಿತಮ್ಮ ತೆರೆದಿದ್ದಾರೆ. ನೀನು ಬರ್ತೀಯಾ ಅಂತಾ ಮೊದಲೇ ಗೊತ್ತಿತ್ತು ಎಂದು ಲಲಿತಮ್ಮ ಹೇಳುತ್ತಾರೆ. ನೀನು ಏನೇ ಮಾಡಿದರೂ ಕೂಡ ನಾನು ಜಾಹ್ನವಿಯನ್ನು ನಿನಗೆ ಸಿಗೋಕೆ ಬಿಡೋದಿಲ್ಲ ಎಂದು ಲಲಿತಾ, ಜಯಂತ್‌ಗೆ ಹೇಳಿದ್ದಾರೆ. ಮರೆಯಲ್ಲಿ ನಿಂತು ಸಂತೋಷ್‌ ನೋಡುತ್ತ ನಿಂತಿದ್ದನು. ಮನೆಯಿಂದ ಹೋಗಿಲ್ಲ ಎಂದರೆ ಯಜಮಾನರಿಗೆ ಹೇಳಿ, ಮನೆಯಿಂದ ಹೊರಹಾಕ್ತೀನಿ ಎಂದು ಲಲಿತಾ, ಜಯಂತ್‌ಗೆ ವಾರ್ನ್‌ ಮಾಡಿದ್ದಳು. ಆಗ ಜಯಂತ್‌ ಸಿಟ್ಟಾಗಿದ್ದಾನೆ. ನನ್ನ ಮಗ ಜಾಹ್ನವಿಯನ್ನು ಪ್ರೀತಿ ಮಾಡಿದ್ದನು ಎನ್ನೋದು ಗೊತ್ತಿದ್ದರೆ, ನಾನು ಜಾಹ್ನವಿಯನ್ನು ಸೊಸೆ ಮಾಡಿಕೊಳ್ಳುತ್ತಿದ್ದೆ, ಇದರಿಂದ ನಮ್ಮ ಮನೆಯ ಎಲ್ಲ ಸಮಸ್ಯೆ ಬಗೆಹರಿಯುತ್ತಿತ್ತು. ನನ್ನ ಗಂಡನ ತಂಗಿ ಲಕ್ಷ್ಮೀ ಮಗಳು ಜಾಹ್ನವಿ ಎನ್ನೋದು ನಿನಗೆ ಗೊತ್ತಿಲ್ಲ. ಜಾಹ್ನವಿ ನಿನ್ನಂಥ ರಾಕ್ಷಸನನ್ನು ಮದುವೆ ಆಗಿರೋದು ನಮ್ಮ ಹಣೆಬರಹ, ನಿನ್ನ ನಾಟಕವನ್ನು ಎಲ್ಲರ ಮುಂದೆ ಹೇಳಿ ಅವಳಿಂದ ನಿನ್ನನ್ನು ದೂರ ಮಾಡುತ್ತಾನೆ ಎಂದು ಲಲಿತಾ, ಜಯಂತ್‌ಗೆ ಹೇಳಿತ್ತಿದ್ದಂತೆ ಸೈಕೋಪಾತ್ ಸಿಟ್ಟಿಗೇರಿದ್ದಾನೆ. ನನ್ನ ದಾರಿಗೆ ಅಡ್ಡ ಬರಬೇಡಿ ಎಂದು ಜಯಂತ್‌ ಹೇಳಿದರೂ ಕೂಡ ಲಲಿತಾ ತಡೆಯುವ ಪ್ರಯತ್ನ ಮಾಡಿದ್ದಾನೆ. ಆಗ ಜಯಂತ್‌, ಲಲಿತಾಳನ್ನು ನೂಕಿದ್ದಾನೆ, ಆಗ ಲಲಿತಾ ಬಿದ್ದು ಪ್ರಾಣ ಬಿಟ್ಟಿದ್ದಾರೆ.

ಇತ್ತ ಅತ್ತಿಗೆಯ ಸಾವಿನ ವಿಚಾರ ತಿಳಿಯದೇ ಲಕ್ಷ್ಮೀ ತವರಿಗೆ ಹೋಗುವ ಉತ್ಸಾಹದಲ್ಲಿದ್ದಾಳೆ. ಅತ್ತ ಎಲ್ಲ ಸತ್ಯ ಗೊತ್ತಿರುವ ಲಲಿತಮ್ಮ ಈ ಲೋಕವನ್ನೇ ಬಿಟ್ಟು ಹೋಗಿಯಾಗಿದೆ. ಇಲ್ಲಿ ಜಾನುಗೆ ನ್ಯಾಯ ಸಿಗಲ್ಲ. ಲಕ್ಷ್ಮೀಗೆ ತವರು ಮನೆಗೆ ಕಾಲಿಡುವ ಭಾಗ್ಯವಿಲ್ಲ, ಅತ್ತ ಭಾವನಾಗೆ ಕಣ್ಣೀರೇ ಗತಿ, ಒಟ್ನಲ್ಲಿ ಈ ಸೀರಿಯಲ್‌ನಲ್ಲಿ ಹೆಣ್ಣು ಮಕ್ಕಳ ಗೋಳು ಮುಗಿಯುವ ಲಕ್ಷಣವಂತೂ ಕಾಣುತ್ತಿಲ್ಲ ಎಂದು ವೀಕ್ಷಕರು ಕಾಮೆಂಟ್ಸ್ ಹಾಕುತ್ತಿದ್ದಾರೆ.

Sulekha