ಭೂಮಿಕಾ ಎಲ್ಲೋ.. ಗೌತಮ್ ಅಲ್ಲೇ.. – ಶಕುಂತಲಾ, ಜೈದೇವ್ ಬೀದಿಗೆ ಬೀಳಲು ಕೌಂಟ್‌ಡೌನ್ ಶುರು..

ಭೂಮಿಕಾ ಎಲ್ಲೋ.. ಗೌತಮ್ ಅಲ್ಲೇ.. – ಶಕುಂತಲಾ, ಜೈದೇವ್ ಬೀದಿಗೆ ಬೀಳಲು ಕೌಂಟ್‌ಡೌನ್  ಶುರು..

ಅಮೃತಧಾರೆ ಸೀರಿಯಲ್ ಕಥೆ ವೀಕ್ಷಕರಿಗೆ ಇಷ್ಟವಾಗುತ್ತಿದೆ. ಗೌತಮ್ ಮತ್ತು ಭೂಮಿಕಾ ಬೇಗ ಒಂದಾಗಲಿ ಅಂತಾ ವೀಕ್ಷಕರು ಹಾರೈಸುತ್ತಿದ್ದಾರೆ. ಇದರ ಮಧ್ಯೆ ವೀಕ್ಷರಿಗೆ ಮಜಾ ಕೊಡುತ್ತಿರುವುದು ಶಕುಂತಲಾ ಮತ್ತು ಜೈದೇವ್ ಸ್ಥಿತಿ.

ಇದನ್ನೂ ಓದಿ:ಬೆಂಗಳೂರಲ್ಲಿ ಮಂಗಳೂರು ವಿವಿ ಗಿಳಿವಿಂಡು ಕಲರವ – ಸೆ.20ರಂದು ಗಿಳಿವಿಂಡು ಪ್ರಾಂತೀಯ ಸಮಾವೇಶ

ಶಕುಂತಲಾ, ಜಯದೇವ್‌ ಮನೆಗೆ ಗೌತಮ್‌ ದಿವಾನ್‌ ಹೆಸರಿಗೆ ಒಂದಿಷ್ಟು ಪತ್ರಗಳು ಬರುತ್ತಿವೆ. ಐದು ವರ್ಷಗಳಿಂದ ಕಂಪೆನಿ, ಸಾಮಾಜಿಕ ಕೆಲಸ ಸೇರಿ ಎಲ್ಲದರಿಂದಲೂ ದೂರ ಇರುವ ಗೌತಮ್‌ಗೆ ಪತ್ರ ಬರುತ್ತಿರೋದು ಜಯದೇವ್‌ಗೆ ಸಿಟ್ಟು ತರಿಸಿದೆ. ಗೌತಮ್‌ನನ್ನು ಜನರು ಇಷ್ಟಪಡೋದನ್ನು ಅವನಿಗೆ ನೋಡಲಾಗ್ತಿಲ್ಲ. ಇದೇ ಸಮಯದಲ್ಲೇ ಸೀರಿಯಲ್‌ನಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಜಯದೇವ್‌ ಆಸ್ತಿಯನ್ನೆಲ್ಲ ನುಂಗಿ ನೀರು ಕುಡಿದಿರುವ ಶಕುಂತಲಾ ಮತ್ತು ಜೈದೇವ್‌ಗೆ ಬ್ಯಾಂಕ್‌ನಿಂದ ನೋಟೀಸ್‌ ಬಂದಿದೆ. ಇದ್ದ ಆಸ್ತಿಯನ್ನೆಲ್ಲ ಕರಗಿಸಿರೋ ಜಯದೇವ್‌ ಬ್ಯಾಂಕ್‌ನಿಂದ 600 ಕೋಟಿ ರೂಪಾಯಿ ಸಾಲವನ್ನು ಪಡೆದಿದ್ದಾನೆ. ಈ ಹಣವನ್ನು ತೀರಿಸಿ ಅಂತ ಬ್ಯಾಂಕ್‌ನವರು ಮನೆ ಬಾಗಿಲಿಗೆ ಬಂದು ನೋಟೀಸ್‌ ನೀಡಿದ್ದಾರೆ.

ಜೈದೇವ್‌ ಜೊತೆ ಇರುವ ಪಾರ್ಥ ಕೂಡ ಸುಮ್ಮನೆ ಇರುವಂತಾಗಿದೆ. ಇನ್ನು ಜೈದೇವ್‌, ಶಕುಂತಲಾ ಬೀದಿಗೆ ಬರುವ ದಿನಗಳು ಹತ್ತಿರ ಬರುತ್ತಿದೆ. ಇವರ ಜೊತೆಗೆ ಪಾಪ ಪಾರ್ಥ ಕೂಡಾ ದಿಕ್ಕೆಟ್ಟು ಹೋಗಿದ್ದಾನೆ. ಇವರನ್ನು ಕಷ್ಟದಿಂದ ದೂರ ಮಾಡಲು ಗೌತಮ್ ಗೆ ಮಾತ್ರ ಸಾಧ್ಯ. ಮತ್ತೊಂದೆಡೆ ಭೂಮಿಕಾ ತನ್ನ ಮಗ ಆಕಾಶ್‌, ಮಲ್ಲಿ ಜೊತೆ ಕುಶಾಲನಗರದಲ್ಲಿ ಇದ್ದಾಳೆ. ಗೌತಮ್‌ ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದಾನೆ. ಡ್ರೈವರ್‌ ಆಗಿ ಹೊಸ ಹೊಸ ಊರಿಗೆ ಹೋಗೋದು, ಅಲ್ಲಿ ಭೂಮಿಕಾ ಹುಡುಕಾಟ ಮಾಡೋದು ಗೌತಮ್‌ ಕೆಲಸವಾಗಿದೆ. ಕಳೆದ ಐದು ವರ್ಷದಿಂದ ಅವನು ಇದೇ ರೀತಿ ಮಾಡುತ್ತಿದ್ದಾನೆ. ಆದರೆ ಇನ್ನೂ ಭೂಮಿಕಾ ಮಾತ್ರ ಸಿಕ್ಕಿಲ್ಲ. ಮಗ ಸಿಕ್ಕರೂ ತನ್ನ ಮಗ ಅನ್ನೋದು ಗೊತ್ತಾಗಿಲ್ಲ.

ಭೂಮಿಕಾ ಮಗ ಆಕಾಶ್‌ ತುಂಬ ತುಂಟ. ಅವನು ಸಿಕ್ಕಾಪಟ್ಟೆ ಕಿಲಾಡಿ. ಇನ್ನು ಮಲ್ಲಿ ಐಎಎಸ್‌ ಪರೀಕ್ಷೆಗೆ ತಯಾರಿ ಮಾಡುತ್ತಿದ್ದಾಳೆ. ಜೈದೇವ್ ಎದುರು ಮಲ್ಲಿ ಖಡಕ್ ಆಫೀಸರ್ ಆಗಿ ಎಂಟ್ರಿ ಕೊಟ್ಟರೂ ಕೊಡಬಹುದು. ಕೇಡಿಗಳಿಗೆ ಇನ್ನು ಉಳಿಗಾಲ ಇಲ್ಲವೇ ಇಲ್ಲ..

 

Sulekha