ಕೆಲ ಹೀರೋಗಳಿಗೆ ವಿದ್ಯಾ ಬಾಲನ್ ಜೊತೆ ನಟಿಸೋಕೆ ಇಷ್ಟವೇ ಇಲ್ಲ! – ಬಿಟೌನ್‌ ಸೀಕ್ರೆಟ್‌ ಬಿಚ್ಚಿಟ್ಟ ನಟಿ

ಕೆಲ ಹೀರೋಗಳಿಗೆ ವಿದ್ಯಾ ಬಾಲನ್ ಜೊತೆ ನಟಿಸೋಕೆ ಇಷ್ಟವೇ ಇಲ್ಲ! – ಬಿಟೌನ್‌ ಸೀಕ್ರೆಟ್‌ ಬಿಚ್ಚಿಟ್ಟ ನಟಿ

ಬಾಲಿವುಡ್ ನಟಿ ವಿದ್ಯಾ ಬಾಲನ್ ತಮ್ಮ ನಟನೆಯಿಂದಲೇ ಫೇಮಸ್‌ ಆಗಿದ್ದಾರೆ.   ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನದೇ ಹೆಸರು ಮಾಡಿರುವ ವಿದ್ಯಾ ಬಾಲನ್ ಇತ್ತೀಚೆಗೆ ಸಿನಿಮಾಗಳಲ್ಲಿ ಅಷ್ಟೊಂದಾಗಿ ಕಾಣಿಸಿಕೊಳ್ಳುತ್ತಿಲ್ಲ. ಅವರ ವೈಯುಕ್ತಿಕ ವಿಚಾರಗಳನ್ನು ಕೂಡ ತುಂಬಾ ಗೌಪ್ಯವಾಗಿ ಇಟ್ಟಿದ್ದಾರೆ. ಇದೀಗ ವಿದ್ಯಾಬಾಲನ್‌ ಶಾಕಿಂಗ್‌ ಹೇಳಿಕೆ ಮೂಲಕ ಬಾಲಿವುಡ್‌ನ ಕರಾಳ ಸತ್ಯದ ಬಗ್ಗೆ ತಿಳಿಸಿದ್ದಾರೆ.

ನಟಿ ವಿದ್ಯಾ ಬಾಲನ್‌ ತಮ್ಮ ವೈಯುಕ್ತಿ ವಿಚಾರದ ಬಗ್ಗೆ ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಗೌಪ್ಯವಾಗಿಯೇ ಇಟ್ಟಿದ್ದಾರೆ. ಇತ್ತಿಚೇಗೆ ಸಿನಿಮಾ ಕ್ಷೇತ್ರದಲ್ಲೂ ಅಷ್ಟೊಂದಾಗಿ ಕಾಣಿಸಿಕೊಳ್ಳುತ್ತಿಲ್ಲ. ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಮದುವೆ ಆದ ಬಳಿಕ ಯಾರೂ ತಮ್ಮ ಹಳೆಯ ಸಂಬಂಧದ ಬಗ್ಗೆ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ, ವಿದ್ಯಾ ಬಾಲನ್ ಮೊದಲ ಬಾಯ್​ಫ್ರೆಂಡ್ ಮಾಡಿದ ಮೋಸದ ಬಗ್ಗೆ ಹೇಳಿಕೊಂಡಿದ್ದಾರೆ. ಆತನಿಂದ ನನಗೆ ಮೋಸ ಆಗಿತ್ತು ಎಂದಿದ್ದಾರೆ ವಿದ್ಯಾ.  ಜೊತೆಗೆ ಬಾಲಿವುಡ್​ನ ಕರಾಳ ಸತ್ಯದ ಬಗ್ಗೆಯೂ ಬಾಯ್ಬಿಟ್ಟಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ.. ಇದೆಂಥಾ ಹುಚ್ಚು ಅಭಿಮಾನ – ಮಕ್ಕಳ ಸ್ಕೂಲ್ ಫೀಸ್ ಹಣದಲ್ಲಿ ಐಪಿಎಲ್ ಟಿಕೆಟ್ ಖರೀದಿಸಿದ್ದ ಧೋನಿ ಫ್ಯಾನ್!

‘ಪ್ರೀತಿ ವಿಚಾರದಲ್ಲಿ ನಾನು ಮೋಸ ಹೋಗಿದ್ದೆ. ನಾನು ಡೇಟ್ ಮಾಡಿದ ಮೊದಲ ಹುಡುಗ ನನಗೆ ಮೋಸ ಮಾಡಿದ್ದ. ನಮ್ಮ ಮಧ್ಯೆ ಆಗಷ್ಟೇ ಬ್ರೇಕಪ್ ಆಗಿತ್ತು.  ಪ್ರೇಮಿಗಳ ದಿನದಂದು ನಾನು ಕಾಲೇಜಿನಲ್ಲಿ ಅವನೊಂದಿಗೆ ಜಗಳ ಮಾಡಿದ್ದೆ. ಆಗ ಅವನು ನನ್ನತ್ತ ತಿರುಗಿ ‘ನಾನು ನನ್ನ ಮಾಜಿ ಗೆಳತಿಯನ್ನು ಭೇಟಿಯಾಗಲು ಹೋಗುತ್ತಿದ್ದೇನೆ’ ಎಂದು ಹೇಳಿದ್ದ. ಆ ದಿನ ಅವನು ಅಕ್ಷರಶಃ ನನ್ನ ಮನಸ್ಸನ್ನು ಮುರಿದ. ನಂತರ ನನ್ನ ಜೀವನವನ್ನು ನಾನು ಸುಧಾರಿಸಿಕೊಂಡೆ’ಅಂತಾ ಹೇಳಿದ್ದಾರೆ.

ಬಳಿಕ ಅವರು ಬಾಲಿವುಡ್‌ ಬಗ್ಗೆ ಕೂಡ ಮಾತನಾಡಿದ್ದಾರೆ. ಕೆಲ ಹೀರೋಗಳಿಗೆ ವಿದ್ಯಾ ಬಾಲನ್ ಜೊತೆ ನಟಿಸೋದು ಅಷ್ಟು ಆರಾಮದಾಯಕ ಅಲ್ಲ ಎನಿಸುತ್ತಿತ್ತಂತೆ. ಅವರು ಯಶಸ್ವಿ ಸಿನಿಮಾಗಳನ್ನು ನೀಡಿದರೂ ಅವರ ಜೊತೆ ತೆರೆಹಂಚಿಕೊಳ್ಳೋಕೆ ಬಂದಾಗ ಕೆಲ ಸ್ಟಾರ್ ಹೀರೋಗಳು ಹಿಂಜರಿಕೆ ತೋರಿದ್ದು ಅವರ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ.

‘ನನ್ನ ಸಿನಿಮಾಗಳಲ್ಲಿ ಅಥವಾ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಲು ಅವರಿಗೆ (ಹೀರೋಗಳಿಗೆ) ಯಾವುದೇ ಹಿಂಜರಿಕೆ ಇಲ್ಲ ಎಂದು ನಾನು ಈಗಲೂ ಭಾವಿಸುವುದಿಲ್ಲ. ನಾವು ಅವರಿಗಿಂತ ಉತ್ತಮ ಸಿನಿಮಾಗಳನ್ನು ಮಾಡುತ್ತಿದ್ದೇನೆ. ಇದು ಅವರಿಗೇ ಆದ ನಷ್ಟ. ಅವರು ಒಂದು ಫಾರ್ಮುಲಾ ಹಿಡಿದುಕೊಂಡು ಸಿನಿಮಾ ಮಾಡುತ್ತಿದ್ದಾರೆ. ಆದರೆ, ಮಹಿಳಾ ಪ್ರಧಾನ ಸಿನಿಮಾಗಳು ಹೆಚ್ಚು ರೋಮಾಂಚನಕಾರಿಯಾಗಿ ಇರುತ್ತವೆ. ಜನರು ಶ್ಲಾಘಿಸಿಲ್ಲ ಎಂದು ನಾನು ಹೇಳುತ್ತಿಲ್ಲ, ಆದರೆ ಮಹಿಳೆಯರು ಹೆಚ್ಚು ಹೈಲೈಟ್ ಆಗುತ್ತಿರುವುದು ಹೀರೋಗಳಿಗೆ ಖುಷಿ ಇಲ್ಲ’ ಎಂದಿದ್ದಾರೆ.

Shwetha M