ವೈರಲ್ ವಿಡಿಯೋ… ಮನುಷ್ಯರನ್ನೇ ನಾಚಿಸುತ್ತೆ ಈ ಗಿಳಿಯ ಚಾಟಿಂಗ್ ಸ್ಪೀಡ್…

ವೈರಲ್ ವಿಡಿಯೋ… ಮನುಷ್ಯರನ್ನೇ ನಾಚಿಸುತ್ತೆ ಈ ಗಿಳಿಯ ಚಾಟಿಂಗ್ ಸ್ಪೀಡ್…

ನಮ್ಮ ಪ್ರಕೃತಿಯಲ್ಲಡಗಿರುವ ಅದ್ಭುತಗಳ ಸಾಕಷ್ಟು ದೃಶ್ಯಗಳು ಸದಾ ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತವೆ. ಇಂತಹ ದೃಶ್ಯಗಳು ನಮ್ಮನ್ನು ಅರೆಕ್ಷಣದಲ್ಲಿ ಮಂತ್ರಮುಗ್ಧರನ್ನಾಗಿಸುತ್ತದೆ. ಸದ್ಯ ಗಿಳಿಯೊಂದರ ಅಪೂರ್ವ ದೃಶ್ಯಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ:ಪರೀಕ್ಷೆಯಲ್ಲಿ ಕಾಪಿ ಹೊಡೆಯೋದನ್ನು ತಪ್ಪಿಸಲು ವಿದ್ಯಾರ್ಥಿಗಳು ಹೀಗೆ ಬಂದಿದ್ದಾರೆ! ವಿಡಿಯೋ ವೈರಲ್

ಸಾಮಾನ್ಯವಾಗಿ ಗಿಳಿಗಳು ಹಾಡುವುದನ್ನು, ಮನುಷ್ಯರಂತೆ ಮಾತನಡುವುದನ್ನು ನೋಡಿರುತ್ತೇವೆ, ಕೇಳಿರುತ್ತೇವೆ. ಆದರೆ ಇಲ್ಲೊಂದು ಗಿಳಿ ಮೊಬೈಲ್ ನಲ್ಲಿ ಮೆಸೆಜ್ ಟೈಪ್ ಮಾಡುತ್ತಿರುವ ವಿಡಿಯೋವನ್ನು ಗುಲ್ಜಾರ್ ಸಾಹೇಬ್ ಎಂಬ ಹೆಸರಿನ ವ್ಯಕ್ತಿ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.

ಇಂದು ಎಲ್ಲರೂ ಸೋಷಿಯಲ್ ಮೀಡಿಯಾದಲ್ಲಿ ಚಾಟ್ ಮಾಡುತ್ತಿರುತ್ತಾರೆ. ಅದರಿಂದಾಗಿ ಅವರ ಟೈಪಿಂಗ್ ಕೂಡ ವೇಗವಾಗಿರುತ್ತದೆ. ಆದರೆ ಈ ಗಿಳಿಯ ಟೈಪಿಂಗ್ ಸ್ಪೀಡ್ ನೋಡಿದರೆ ಎಲ್ಲರೂ ನಾಚುವಂತಾಗಿದೆ. ಈ ವಿಡಿಯೋದಲ್ಲಿ ಗಿಳಿ ತನ್ನ ಮಾಲೀಕರ ಮಡಿಲಲ್ಲಿ ಕುಳಿತು, ಅವರ ಕೈಯಲ್ಲಿದ್ದ ಮೊಬೈಲ್ ಚಾಟ್ ಮಾಡುತ್ತಿದ್ದ ವೇಳೆ ಗಿಳಿಯು ತನ್ನ ಕೊಕ್ಕಿನಲ್ಲಿ ಟೈಪ್ ಮಾಡಿದೆ. ಇದನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.

suddiyaana