ಚಾಲಕನಿಲ್ಲದೆ  ಶೋ ರೂಮ್ ಒಳಗೆ ನುಗ್ಗಿದ ಟ್ರ್ಯಾಕ್ಟರ್  – ಆಮೇಲೆನಾಯ್ತು ಗೊತ್ತಾ?  

ಚಾಲಕನಿಲ್ಲದೆ  ಶೋ ರೂಮ್ ಒಳಗೆ ನುಗ್ಗಿದ ಟ್ರ್ಯಾಕ್ಟರ್  – ಆಮೇಲೆನಾಯ್ತು ಗೊತ್ತಾ?  

ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿದ ಸಂದರ್ಭ ಕೆಲವೊಂದು ಬಾರಿ ವಾಹನಗಳು ಆಕಸ್ಮಿಕವಾಗಿ ಮುಂದಕ್ಕೆ ಅಥವಾ ಹಿಂದಕ್ಕೆ ಚಲಿಸಲು ಆರಂಭಿಸುತ್ತವೆ. ಕೆಲವೊಂದು ಬಾರಿ ಹೀಗೆ ವಾಹನಗಳು ಏಕಾಏಕಿ ಚಲಿಸಿ ದೊಡ್ಡ ದುರಂತವೇ ನಡೆಯುತ್ತದೆ. ಇಂತಹ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುತ್ತವೆ. ಇಂತಹದ್ದೇ ಘಟನೆಯೊಂದು ನಡೆದಿದ್ದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಏಕಾಏಕಿ ಚಲಿಸಲು ಆರಂಭಿಸಿದೆ. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಮದುವೆ ಮನೆಯಲ್ಲಿ ಡಿಜೆ ಅಬ್ಬರ – ವೇದಿಕೆ ಮೇಲೆಯೇ ಕುಸಿದು ಪ್ರಾಣ ಬಿಟ್ಟ ಮದುಮಗ!

ಶೋರೂಮ್ ಹೊರಗೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಚಾಲಕನಿಲ್ಲದಿದ್ದರೂ ಕೂಡ  ಸ್ಟಾರ್ಟ್ ಆಗಿದೆ. ಅಲ್ಲದೇ ನೇರವಾಗಿ ಶೋ ರೂಂಗೆ ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ನ ಕೊತ್ವಾಲಿ ನಗರದಲ್ಲಿ ನಡೆದಿದೆ.

ಶೂ ಶೋರೂಮ್ ಬಳಿ ಟ್ರ್ಯಾಕ್ಟರ್ ಪಾರ್ಕ್ ಮಾಡಲಾಗಿತ್ತು. ಈ ವೇಳೆ ಆಕಸ್ಮಿಕವಾಗಿ ಟ್ರ್ಯಾಕ್ಟರ್ ಸ್ಟಾರ್ಟ್ ಆಗಿದೆ. ಬಳಿಕ ಶೋ ರೂಮ್ ಹೊರಗೆ ನಿಂತಿದ್ದ ಟ್ರ್ಯಾಕ್ಟರ್ ನೇರವಾಗಿ ಶೋ ರೂಮ್ ಒಳಗೆ ನುಗ್ಗಿದೆ. ಈ ವೇಳೆ ಶೋರೂಮ್ ಗ್ಲಾಸ್ ಡೋರ್ ಛಿದ್ರವಾಗಿದೆ. ಬಳಿಕ ಶೋ ರೂಮ್ ಸಿಬ್ಬಂದಿ ಟ್ರ್ಯಾಕ್ಟರ್ ಅನ್ನು ನಿಲ್ಲಿಸಲು ಹರಸಾಹಸ ಪಟ್ಟಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು,  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಅಚ್ಚರಿಯ ವಿಷಯವೆಂದರೆ ಟ್ರ್ಯಾಕ್ಟರ್‌ನಲ್ಲಿ ಚಾಲಕ ಕೂಡ ಇರಲಿಲ್ಲ. ಆದರೂ ಈ ಟ್ರ್ಯಾಕ್ಟರ್ ಹೇಗೆ ಸ್ಟಾರ್ಟ್ ಆಯ್ತು ಅಂತಾ ತಿಳಿದುಬಂದಿಲ್ಲ. ಈ ಬಗ್ಗೆ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

suddiyaana