100 ಯುವಕರಿಂದ ದಂತ ವೈದ್ಯೆಯ ಕಿಡ್ನ್ಯಾಪ್ – ಕೊನೆಗೂ ಸೇಫ್…!

100 ಯುವಕರಿಂದ ದಂತ ವೈದ್ಯೆಯ ಕಿಡ್ನ್ಯಾಪ್ – ಕೊನೆಗೂ ಸೇಫ್…!

ತೆಲಂಗಾಣ: ಸಾಮಾನ್ಯವಾಗಿ ಒಬ್ಬ ವ್ಯಕ್ತಿಯನ್ನು ನೂರಾರು ಮಂದಿ ಬಂದು ಕಿಡ್ನ್ಯಾಪ್ ಮಾಡುವುದನ್ನು ಸಿನಿಮಾ, ಸೀರಿಯಲ್ ನಲ್ಲಿ ನೋಡಿರುತ್ತೇವೆ. ಇಂತಹದ್ದೇ ಘಟನೆ ಈಗ ತೆಲಂಗಾಣದಲ್ಲಿ ನಡೆದಿದೆ. ಇಲ್ಲಿ ಒಬ್ಬರಲ್ಲ, ಇಬ್ಬರಲ್ಲ ಸುಮಾರು ನೂರು ಮಂದಿ ಮನೆಯೊಳಗೆ ನುಗ್ಗಿ ಯುವತಿಯನ್ನು ಕಿಡ್ನ್ಯಾಪ್ ಮಾಡಿದ್ದಾರೆ.

ಇದನ್ನೂ ಓದಿ: ಬೇಕರಿಗೆ ನುಗ್ಗಿ ಯುವಕರ ಮೇಲೆ ಹಲ್ಲೆ – ಪುಂಡರ ಹೆಡೆಮುರಿಕಟ್ಟಿದ ಪೊಲೀಸರು

ಹೌದು, ಈ ಆಘಾತಕಾರಿ ಘಟನೆ ತೆಲಂಗಾಣದ ರಂಗರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಸುಮಾರು 100 ಮಂದಿ ಮನೆಯೊಂದಕ್ಕೆ ದಾಳಿ ಮಾಡಿ, ಯುವತಿಯನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

24 ವರ್ಷದ ಯುವತಿ ಬಿಡಿಎಸ್ (ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ) ಪದವೀಧರೆಯಾಗಿದ್ದಾಳೆ. ಡಿ. 9 ರಂದು ಆಕೆಯ ನಿಶ್ಚಿತಾರ್ಥವಿತ್ತು. ಈ ವೇಳೆ ಸುಮಾರು 100 ಮಂದಿ ಪುಂಡರು ಮನೆಗೆ ನುಗ್ಗಿ ದಾಂಧಲೆ ನಡೆಸಿ, ಯುವತಿಯನ್ನುಅಪಹರಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಯುವತಿ ಪೊಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, 6 ಗಂಟೆಯೊಳಗೆ ಯುವತಿಯನ್ನು ರಕ್ಷಿಸಿದ್ದಾರೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 16 ಮಂದಿಯನ್ನು ಬಂಧಿಸಲಾಗಿದೆ.

ಪ್ರಮುಖ ಆರೋಪಿ ನವೀನ್ ರೆಡ್ಡಿ(26) ಈಗಾಗಲೇ ಯವತಿ ಮದುವೆಯಾಗಿರುವುದಾಗಿ ತಿಳಿಸಿದ್ದಾನೆ. ನಾನು ನನ್ನ ಹೆಂಡತಿಯನ್ನು ಮನೆಗೆ ಕರೆದುಕೊಂಡು ಹೋಗಲು ಸಾಕಷ್ಟು ಪ್ರಯತ್ನಿಸಿದೆ. ಆಕೆ ಡೆಂಟಿಸ್ಟ್​ ಆದ ಬಳಿಕ ಆಕೆಯ ಅಪ್ಪ-ಅಮ್ಮ ಅವಳ ಮನಸನ್ನು ಬದಲಾಯಿಸಿ, ನನ್ನಿಂದ ದೂರ ಮಾಡಿದ್ದಾರೆ. ಹೀಗಾಗಿ, ಅವರ ಮನೆಗೆ ನುಗ್ಗಿ ಆಕೆಯನ್ನು ಎಳೆದುಕೊಂಡು ಹೋಗಿದ್ದೇವೆ ಎಂದು ನವೀನ್ ರೆಡ್ಡಿ  ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.

suddiyaana